ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೇಮವೇ ನೀನಾಗಿ ಬಂದಂತೆನಿಸುತ್ತದೆ

ಅಪರೂಕ್ಕೊಮ್ಮೆ

ಪಮ್ಮಿ ದೇರಲಗೋಡು 

ಅಪರೂಪಕ್ಕೊಮ್ಮೆ ಸ್ವಪ್ನ ಮಂಟಪದಲಿ ನೀ ಕಂಡಾಗ
ಹೃದಯದ ಮಾತೆಲ್ಲ ಕವಿತೆಗಳಾಗುತ್ತವೆ
ಸಾವಿರ ಹೊನ್ನರಾಗಗಳ ಎನ್ನೆದೆ ಹಾಡತೊಡಗುತ್ತದೆ
ಲಕ್ಷ ನಕ್ಷತ್ರಗಳ ನಡುವೆ ವಿಹರಿಸಿದಂತೆನಿಸುತ್ತದೆ
ಕಂಗಳಾಳಗಳಲ್ಲಿ ಸುಪ್ತವಾಗಡಗಿಹ ಛಾಯೆ
ನಿನ್ನ ಪ್ರತಿಬಿಂಬವಾಗುತ್ತದೆ

ಅಪರೂಪಕ್ಕೊಮ್ಮೆ ನೀ ಮೃದುನುಡಿಗಳಾಡಿದಾಗ
ಭಾವಗೀತೆಯೊಂದಿಗೆ ನುಡಿಸಿದ ವೀಣಾನಾದದಂತಿರುತ್ತದೆ
ಮುಂಜಾನೆಯಲ್ಲಿನ ವನದೇವಿಯ ಸುಪ್ರಭಾತದಂತಿರುತ್ತದೆ
ಮಹನೀಯನೋದುವ ಮಂತ್ರಪುಷ್ಪದಂತಿರುತ್ತದೆ
ನನಗದು ಭಾರತದ ಗೀತೆಯಂತೆ ವೇದವಾಕ್ಯದಂತಿರುತ್ತದೆ

ಅಪರೂಪಕ್ಕೊಮ್ಮೆ ನೀ ನನ್ನ ಭಾವನೆಗಳಿಗೆ ಸ್ಪಂದಿಸಿದಾಗ
ದೇವಪಾರಿಜಾತ ಪುಷ್ಪಗಳು ಮೆಲ್ಲನುದುರಿದ಼಼ಂತಿರುತ್ತದೆ
ಮಾಗಿಯಲ್ಲಿ ಅರಳಿ ನಲಿಯುವ ಮೊಲ್ಲೆಯಂತಿರುತ್ತದೆ
ಅಗೋಚರ ಹಸ್ತವೊಂದು ನನ್ನ ಸಂತೈಸುವಂತಿರುತ್ತದೆ
ನೊಂದ ಹೃದಯಕೆ ಪನ್ನೀರಸಿಂಚನ ಅಮೃತಸೇಚನದಂತಿರುತ್ತದೆ

ಅಪರೂಪಕ್ಕೊಮ್ಮೆ ನೀ ನನ್ನೆದುರು ಬಂದಾಗ
ಮನ ಮುಗಿಲ ಕಂಡ ನವಿಲಿನಂತೆ ನರ್ತಿಸುತ್ತದೆ
ಕಾರಿರುಳಿನಲಿ ಪೂರ್ಣಚಂದ್ರ ಉದಯಿಸಿದಂತಿರುತ್ತದೆ
ಕೋಟಿಸೂರ್ಯ ಪ್ರಭೆಯೊಂದು ಆವರಿಸಿಕೊಳ್ಳುತ್ತದೆ
ಯಕ್ಷ ಗಂಧರ್ವ ಕಿನ್ನರ ಲೋಕವೇ ತೆರೆದುಕೊಳ್ಳುತ್ತದೆ

ಅಪರೂಪಕ್ಕೊಮ್ಮೆ ನಮ್ಮ ಮಿಲನವಾದಾಗ
ಚಂದ್ರಿಕೆಯಲಿ ಸಂಗೀತ ಮಾರ್ದನಿಸುತ್ತದೆ
ಆಗಸ ಪುಷ್ಪವೃಷ್ಠಿ ಸುರಿದಂತೆನಿಸುತೆನಿಸುತ್ತದೆ
ನಿಸರ್ಗವಿದು ಗಂಧರ್ವ ಸಜ್ಜೆಯಾಗುತ್ತದೆ
ವಿಶ್ವಜನನೀಯ ಪ್ರೇಮವೇ ನೀನಾಗಿ ಬಂದಂತೆನಿಸುತ್ತದೆ

‍ಲೇಖಕರು avadhi

25 April, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading