ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸ್ತಾರೆ ಕವಿತೆ: ಪ್ರೀತಿ ಮತ್ತು ಕಾಮ

ಕೆಲವು ವಿಚಾರವನ್ನು ಒಂದು

ಭಾಷೆಯಲ್ಲಿ ಹೇಳುವಷ್ಟು

ಸರಳವಾಗಿ ಇನ್ನೊಂದರಲ್ಲಿ

ಹೇಳಲಾಗುವುದಿಲ್ಲ. ಇಲ್ಲಿ

ಇಂಗ್ಲಿಷಿನಲ್ಲಿ ಸಲೀಸಾಗಿ

ಹೇಳಿದ್ದನ್ನು ಕನ್ನಡದಲ್ಲೂ

ಹೇಳಲಿಕ್ಕೆ ಎಷ್ಟು ಮಾತು

ಖರ್ಚಾಗಿದೆ ನೋಡಿ. ಹಾಗಂತ

ಇಂಗ್ಲಿಷು ಕನ್ನಡಕ್ಕು

ಹೆಚ್ಚು ಅಂತೇನಲ್ಲ. ಇದರ

ಕನ್ವರ್ಸು ಸಹ ಅಷ್ಟೇ

ಸತ್ಯವಿದ್ದೀತು. ಇವನ್ನು

ಬರೆದಾಗ ನನಗನ್ನಿಸಿದ್ದು ಈ

ಲವ್ವು, ಸೆಕ್ಸುಗಳ ಚೋಡಿಯ ವಿಷಯ

ಕನ್ನಡದ ಜಾಯಮಾನಕ್ಕೆ

ಆಗಿಬಾರದ್ದೇನೋ… ಏನಂತೀರಿ?

Love and sex

he says are different How? Love is of heart while sex is of body …one of these days he gets angry with me and stops sex Does your anger have anything with the body? And I am dumped!!  

 

ಪ್ರೀತಿ ಮತ್ತು ಕಾಮ

ಬೇರೆ ಬೇರೆ ಅಂತಂದ

ಹೇಗೆ?

ಪ್ರೀತಿ ಹೃದಯದ್ದು

ಕಾಮ ಕಾಯದ್ದೆಂದು ತಿಳಿ

ಹೇಳಿದ

ಕಾಮಿಸುತ್ತಲೇ ಪ್ರೀತಿ

ಯಂತಲ್ಲವೆಂದು ಆಚೀಚಿನ

ಪರವಾನಗಿ ಕೂಡ ಖುದ್ದು

ಕೈಕೊಂಡ

ಒಪ್ಪಿದೆ

ಅವನ ಬಲುದೇಹ

ದಾಹವನ್ನು ಒಲ್ಲದೆಯೂ

ಅಷ್ಟೇ ಬಲ್ಲದೆಯೂ

ಇನ್ನೇನು ಮಾಡುವುದು

ಕಟುವಿತ್ತು ಪ್ರೀತಿ

ದಕ್ಕಿದಷ್ಟು

ಸಾಕೆಂದುಕೊಂಡೆ

ಪ್ರೀತಿಯಿದ್ದಲ್ಲಿ ಅಲ್ಪವೂ

ಬಲುವೆ

ಯಾತಕ್ಕೋ ಏನೋ

ಈ ನಡುವೆ ಮುನಿಸಿಕೊಂಡು

ಮಾತು ಬಿಟ್ಟ

ಹಾಗೇ ಕಾಮಿಸುವುದನ್ನೂ

ಉದ್ವಿಗ್ನಳಾದೆ

ಈ ಮೈಯ ವಾಂಛೆ

ವ್ಯಗ್ರವಾದಾಗಲೊಮ್ಮೆ ಪಟ್ಟು

ಮಾಡಿ ಕೇಳಿದೆ

ಹೇಳಿದ್ದೆಯಲ್ಲ ಕಾಮ

ಕಾಯದ್ದು ಎಂದು

ಮುನಿಸಿಗೂ ಮನಸಿಗೂ

ತಾಳೆಯಿದ್ದೀತು

ಕೋಪಕ್ಕು ಮೈಗೂ ತಳುಕಿದೆಯೆ

ಎಂದೂ

ರೋಸಿ ಹೋದವನು

ವಾಪಸು ಬರಲಿಲ್ಲ

]]>

‍ಲೇಖಕರು G

6 August, 2012

2 Comments

  1. samyuktha puligal

    😀 tamaasheyaagi ondu satyavannu tilisiddeeri…. tumba chennagide…

  2. anil

    ನಿಜ ….. ಆದ್ರೆ ಹಂಗೆ ಅದನ್ನ opkoLLodu ಕಷ್ಟ … ಪದ ಜೋಡಣೆ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading