ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿ…ದಿಗಂತದಲಿ ಕಂಡಿತ್ತು

-ನಾ ದಿವಾಕರ

ಹರಿದ ಬಲೆಯ ನೂಲು

ಪ್ರೀತಿ ,,,
ಭವ ಬಂಧನದ
ಬಲೆಯೆಂದೇ
ಭ್ರಮಿಸಿದ್ದೆ
ಜೀವ ಬೆಸೆಯುವ
ಸೃಷ್ಟಿಯ ಅಮೋಘ ಕಲೆ
ಎಂದೆಣಿಸಿದ್ದೆ ;

ಮುರಿದ ರೆಕ್ಕೆಗಳು
ಸುಖ ವಿಲಾಸದಂಗಳದಲಿ
ತರಗೆಲೆಗಳೊಡನೆ
ಸಂಭಾಷಿಸಿದ್ದವು
ಮನದ ಕುಲುಮೆಯಲಿ
ಬೆಂದುಹೋದೆ ;

ಪ್ರೀತಿ,,,,
ಭಾವದಾಹದ ಚಿಲುಮೆ
ಲೋಕದೃಷ್ಟಿಯ
ಅಳಿಸುವ
ಪ್ರಣಯ ಶಾಲೆ
ಎಂದರಿತಾಗ
ಮೂಕನಾದೆ  ;

ಹರಿದ ಬಲೆಯ ನೂಲು
ಹಾರಲು ಹೇಳಿತ್ತು
ಮಣ್ಣಾದ ರೆಕ್ಕೆಗಳು
ನಲುಗಿದವು
ಸಾಗರದ ಅಲೆಗಳು
ಸದ್ದು ಮಾಡಿದವು ;

ಪ್ರೀತಿ,,,
ದಿಗಂತದಲಿ ಕಂಡಿತ್ತು  ! 

‍ಲೇಖಕರು Admin

7 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading