ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿಯ ಮಡಿಲೊಂದು..

ವೆಂಕಟ್ರಮಣ ಗೌಡ

 

ಇವತ್ತಿಗೂ ನನ್ನೂರಿನಲ್ಲಿ

ಪ್ರೀತಿಯ ಮಡಿಲೊಂದು

ದುಃಖವ ಕರಗಿಸುತ್ತದೆ

ಕರಗಿದ ದುಃಖವ ಹೊತ್ತು

ನದಿಗಳು ಓಡುತ್ತವೆ

 

ದುಃಖಗಳು ಕರಗಿದರೂ

ದುಃಖಗಳು ಮುಗಿವುದಿಲ್ಲ

ನನ್ನೂರ ಹಳ್ಳಗಳು ಬತ್ತಿದ ದಾಖಲೆ

ನಿಮಗೆ ಸಿಕ್ಕುವುದಿಲ್ಲ

ದುಃಖಗಳು ಮುಗಿವುದು ಬೇಡವೆಂದು

ಹೇಳುವುದು ಹೇಗೆ?

ನದಿಗಳು ಒಡಲ ದಾಹಕ್ಕಿರಲಿ ಎಂದೆಂದೂ

ಎಂದು ಹೇಳದುಳಿವುದು ಹೇಗೆ?

 

‍ಲೇಖಕರು G

10 December, 2012

3 Comments

  1. mmshaik

    heart touching…

  2. chalam

    nice one..

  3. Gopaal Wajapeyi

    Eshteshtu arthagalu… ! Ishtavaayitu… 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading