ಜಗತ್ತಿನ ತುಂಬೆಲ್ಲಾ ಪ್ರೇಮವೇ ತುಂಬಲಿ

ಮಂಜುಳಾ ಹುಲಿಕುಂಟೆ
ಬದುಕೆಲ್ಲಾ ಅಧಮ್ಯವಾಗಿ ಪ್ರೀತಿಸಿದರೂ
ಪ್ರೀತಿಯ ದಣಿವು ಮಾತ್ರ ಆರುವುದೇ ಇಲ್ಲ ಕಣೋ
ಅದೊಂದು ದಿನ ಜಗತ್ತಿಗೆ ಪ್ರೇಮಿಗಳ ದಿನವಂತೆ
ನಾವು ಬದುಕಿದ ಪ್ರತೀ ಕ್ಷಣವೂ
ಪ್ರೇಮದ್ದೇ ಅಲ್ಲವಾ…
ಸಿಟ್ಟು, ಸೆಡವು, ನೋವು, ನಲಿವು
ಕೋಪ, ತಾಪ,
ಏಕಾಂತಗಳ ಪರಿತಾಪ ಎಲ್ಲವೂ ಪ್ರೇಮವೇ ಅಲ್ಲವಾ..
ಎಲ್ಲಕ್ಕೂ ತುಡಿವ ನಿನ್ನ ಭಾವುಕತೆಗೆ
ಮರುಗುತ್ತಲೇ ಮುಗುವಾಗುವ ನಿನ್ನ ಮುಗ್ಧತೆಗೆ
ನಾನು ಮಡಿಲಾದಾಗಲೇ
ನಮ್ಮ ಜಗತ್ತು ಪ್ರೇಮವೇ ಆಗಿದ್ದು…
ಮತ್ತೆ – ಮತ್ತೆ ಒಲವನ್ನಷ್ಟೇ ಹೆತ್ತ
ನನ್ನ ನೋವಿಗೆ ನೀನು ಹೆಗಲಾಗಿದ್ದು
ಹಗಲು-ರಾತ್ರಿಗಳ ಅರಿವಿಲ್ಲದೇ ಆಳವಾಗಿ
ಪ್ರೀತಿಸಿದ್ದು…
ನಮ್ಮಲ್ಲಿ ಇನ್ನೇನೆ ಉಳಿದಿದ್ದರೂ ಅದೂ
ಪ್ರೇಮವನ್ನ ಮತ್ತಷ್ಟು ಪ್ರೇಮಿಸಬೇಕೆಂಬ
ಹಂಬಲವಷ್ಟೇ ಆಗಿರುತ್ತದೆ….
ಏನೇ ಆಗಲಿ…
ಜಗತ್ತಿಗೆ ಪ್ರೇಮ ಒಂದು ದಿನದ ದಣಿವಾಗದಿರಲಿ
ಪ್ರತೀ ದಿನಾ-ಪ್ರತೀ ಕ್ಷಣಾ ಕಾಡುವ ಜ್ವರವಾಗಲಿ…
ಜಗತ್ತಿನ ತುಂಬೆಲ್ಲಾ ಪ್ರೇಮವಷ್ಟೇ ತುಂಬಲಿ…






0 Comments