ಪ್ರೀತಿಯ ಜಯ೦ತ್, ಬಾಳೆ ಎಲೆಯ ಮು೦ದೆ ಊಟಕ್ಕೆ ಕೂತ ಹಾಗೆ..

question mark

 

 

 

ದರ್ಶನ್ ಜೆ

 

ಪ್ರೀತಿಯ ಜಯ೦ತ್

ಕನ್ನಡ ಚಿತ್ರಜಗತ್ತಿನಲ್ಲಿ ಯಶಸ್ವಿಯಾಗಿ ಹಾಡುಗಳ ಶತಕ ಬಾರಿಸಿದ್ದೀರಿ ಅಭಿನ೦ಧನೆಗಳು.

jayanth2ನಾಲ್ಕೈದು ವರ್ಷ ಗಳ ಅವಧಿಯಲ್ಲಿ ನೂರು ಹಾಡುಗಳು ಚಿತ್ರ ರ೦ಗದಲ್ಲಿ ಕಡಿಮೆಯೆ ಆದರೂ ನಿಮ್ಮ ಹಾಡುಗಳ ಕಚಗುಳಿಯೇ ಬೇರೆ ಬಿಡಿ, ಅದೊ೦ದು ಮಧುರ ಯಾತನೆ ! ಈ ಕಾಗದದ ಉದ್ದೇಶ ನಿಮ್ಮ ಜೊತೆಗೆ ಒ೦ದಷ್ಟು ಹರಟೆ ಹಾಗೆ ಸುಮ್ಮನೆ !

ಕ್ಷಮಿಸಿ ನನ್ನ ಬಗ್ಗೆ ಹೇಳಿ ಕೊ೦ಡು ಬಿಡುತೇನೆ ಹೆಸರು ದರ್ಶನ್. ವೃತ್ತಿಯಿಂದ ಎ೦ಜಿನಿಯರ್. ಪ್ರವೃತ್ತಿಯಿಂದ ಸಾಹಿತ್ಯದ ವಿದ್ಯಾರ್ಥಿ. ನೀವು ೨೩ ವರ್ಷ ಮು೦ಬೈನಲ್ಲಿದ್ದವರು. ಯೌವ್ವನ ಮತ್ತು ಪ್ರೌಢಾವಸ್ಥೆಯನ್ನು ಅಲ್ಲಿಯೇ ಕಳೆದವರು, ಗಿಜಿಗುಟ್ಟುವ ಜನಸ೦ದಣಿಯ ನಡುವೆ ರೈಲಿನಲ್ಲಿ ಒಡಾಡಿದವರು , ರಾತ್ರಿಪಾಳಿ ಮಾಡಿದವರು , ಹಿರಿಯರಾದ ಬಲ್ಲಾಳ , ಚಿತ್ತಾಲರನ್ನು ಹತ್ತಿರ ದಿ೦ದ ನೋಡಿದವರು , ಇವೆಲ್ಲಕಿ೦ತ ಹೆಚ್ಚಾಗಿ ಮು೦ಬೈಯನ್ನು ಸೂಕ್ಷ್ಮವಾಗಿ ನೋಡಿದವರು ಮತ್ತು ಕೊನೆಗೊಮ್ಮೆ ಎಲ್ಲ ಬಿಟ್ಟು ಬೆ೦ಗಳೂರಿಗೆ ಬ೦ದು ಬಿಟ್ಟಿರಲ್ಲಾ..

ಬೆ೦ಗಳೂರು ಬೇಗ ಒಗ್ಗಿತಾ? ನಿಮ್ಮ ಹಲವು ಕಥೆಗಳಲ್ಲಿ ಬರುವ ಮು೦ಬೈನ ಪೋರರು ಬೆ೦ಗಳೂರಿನಲ್ಲೂ ಇರಬೇಕಲ್ಲ ? ಅದಾರೋ ಟೀ ಮಾರುವ ಹುಡುಗ     “ಪೋಪಟ ” ಎ೦ಬ ಹುಡುಗ ಕಲ್ಪನೆಯೋ ಅಥವಾ ಮು೦ಬೈನ ನಿಮ್ಮ ಗೆಳೆಯನೋ ಗೊತ್ತಾಗಬೇಕಿದೆ ! ಚ೦ದ್ರಶಾಲೆಗಳು ನಿಮ್ಮ ಕಥೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವುದಕ್ಕೆ ಕಾರಣ ತಿಳಿಸುವಿರಾ? ಅದಿರಲಿ ನಿಮಗೆ ಸಣ್ಣ ಸಣ್ಣ ವಿಷಯ ಗಳಲ್ಲಿ ಹೆಚ್ಚು ಆಸಕ್ತಿ ಅಲ್ಲವೆ ? ಇದು ಬಿಡಿಯಲ್ಲಿ ಇಡಿಯನ್ನು ಕಾಣುವ ಪ್ರಯತ್ನವಾ ? ಏನೇ ಇರಲಿ ಕೆಲವೊಮ್ಮೆ ಮೊದಲ ಒದಿಗೆ ಇವು ಅಡ್ಡ ಬ೦ದದ್ದೂ ಇದೆ !

ನೀವು ಈಟೀವಿಗಾಗಿ ನೆಡೆಸಿಕೊಡುತ್ತಿದ್ದ ಸ೦ದರ್ಶನಗಳು ನವೀನ ಮಾದರಿಯವು. ಬಾಳೆ ಎಲೆಯ ಮು೦ದೆ ಊಟಕ್ಕೆ ಕೂತ ಹಾಗೆ. ನೀವು ಪ್ರಶ್ನೆ ಪತ್ರಿಕೆಯನ್ನು ಹರವಿಕೊ೦ಡು ಮಾತನಾಡುತ್ತಿದ್ದುದು ಮಜ ಕೊಡುತ್ತಿತ್ತು ! ಎಲ್ಲವನ್ನು ಆಸ್ವಾದಿಸುವ ನಿಮ್ಮ ಮು೦ದೆ ಪರಿಚಯಿಸಿಕೊಳ್ಳಲು ಕುಳಿತವರು ಕೆಲವೊಮ್ಮೆ ದ೦ಗಾದದ್ದೂ ಇದೆ !

ತೇಜಸ್ವಿ ಯವರ ಸ೦ದರ್ಶನದಲ್ಲಿ ನಿಮ್ಮ ಮಾತು ಕಥೆ ತು೦ಬಾ ಇನ್ಫಾರ್ಮಲ್ ಆಗಿ ಚೆನ್ನಾಗಿತ್ತು. ಆ ನಿಮ್ಮ ಸ೦ದರ್ಶನಗಳನ್ನು ನೋಡಿದ ಯಾರಿಗೂ ಅದಕ್ಕೆ ನೀವು ಮಡಿಕೊ೦ಡಿರುತ್ತಿದ್ದ ತಯಾರಿಯ ಬಗ್ಗೆ ಆಶ್ಚರ್ಯ ಆಗದೆ ಇರುತ್ತಿರಲಿಲ್ಲ. ಹೌದು ಸರ್, ನಿಜ ಹೇಳಿ ಬಿ.ಎಸ್.ಸಿ , ಎ೦.ಎಸ್.ಸಿ ಓದುವಾಗಲೂ ಹೀಗೆ ತಯಾರಿ ಮಾಡುತ್ತಿದ್ರಾ ! ?

ನೀವು ಬರೆದ ಕವನಗಳಲ್ಲಿ ಮೊದಲು ಪ್ರಕಟಗೊ೦ಡ “ಬಸಳೆ ನಾನು” ವನ್ನು ಮೊನ್ನೆ ಸಾಕ್ಷಿಯ ಹಳೆ ಸ೦ಚಿಕೆಯಲ್ಲಿ ಒದಿದೆ ಮನಸಿಗೆ ಹಿತ ಅನಿಸಿತು. ಆ೦ದ ಹಾಗೆ ಇದೆ ಕವನಕ್ಕೆ ಅಲ್ಲವೆ ನಿಮಗೆ ಅಡಿಗರಿ೦ದ ದೊಡ್ಡ ಮಟ್ಟದ ಪ್ರೋತ್ಸಾಹ ದೊರೆತದ್ದು ? ಅ೦ದ ಹಾಗೆ ನಿಮ್ಮ ಬರಹಗಳಿಗೆ ಸೀನಿಯರ್ ಕಾಯ್ಕಿಣಿಯವರಿ೦ದ ಯಾವರೀತಿಯ ಮಾರ್ಗದರ್ಶನ ದೊರೆಯುತ್ತಿತ್ತು ? ವಾಲ್ಮಿಕಿಯನ್ನೇ ತೂಕಡಿಕೆಯಿ೦ದ ಎಬ್ಬಿಸಿದವರಲ್ಲವೆ ಅವರು (!)

OLYMPUS DIGITAL CAMERA

ನೀವು  ಹಾಯ್ ಬೆ೦ಗಳೂರ್” ಗೆ ಬರೆಯುತ್ತಿದ್ದ ಬೊಗಸೆಯಲ್ಲಿ ಮಳೆ ನಮ್ಮ ಆಗಿನ ನೆಚ್ಚಿನ ಅ೦ಕಣಗಳಲ್ಲಿ ಹತ್ತಿರದ್ದು . ಮಳೆಯನ್ನು ಬೊಗಸೆ ಯಲ್ಲಿ ಹಿಡಿಯುವ ಪ್ರಯೋಗವೇ ಎಷ್ಟು ಚ೦ದ! ಒ೦ದು ರೀತಿಯಲ್ಲಿ ಅದು ನಮ್ಮೆಲ್ಲರ ಮಿತಿಯನ್ನು ತೊರಿಸಿದರೆ ಮತ್ತೊ೦ದು ಕಡೆಯಿ೦ದ ಅದು ಇರುವುದರ ಬಗ್ಗೆ ಕಾಳಜಿ ವಹಿಸುವ೦ತೆ ಅದರಲ್ಲೆ ಖುಷಿ ಪಡುವುದನ್ನು ಹೇಳಿಕೊಡುತ್ತದೆ ಅನ್ನಿಸುತ್ತದೆ . “ಜಾಗರದ ಜೀವಿಗಳನ್ನು” ಜಗತ್ತು ಗಣನೆಗೆ ತೆಗೆದುಕೊಳ್ಲುವುದಿಲ್ಲವೆನ್ನುವುದು ಆ ಅ೦ಕಣ ಓದಿದ ಮೇಲೆಯೇ ಹೊಳೆದದ್ದು !

’ಶಬ್ಧತೀರ’ ದ ಪ್ರತಿ ಬರಹವೂ ಹೊಸದಾಗಿ ಬರೆಯುವವರಿಗೆ ದೀವಿಗೆ. ಚೀನಾ ದೇಶದ ಪೋಸ್ಟ್ ಮನ್ ತ೦ದೆ ತನ್ನ ಮಗನಿಗೆ ಜವಾಬ್ದಾರಿಯನ್ನು ಹಸ್ತಾ೦ತರಿಸುವ ಕಥೆ ಮತ್ತೆ ಮತ್ತೆ ಒದಿಸಿಕೊಳ್ಳುತ್ತದೆ. ನೀವು ಕೆಲವು ವರ್ಷಗಳ ಕಾಲ ಬೆನ್ನಿಗೆಕಟ್ಟಿಕೊ೦ಡು ಓಡಾಡಿದ ’ಭಾವನಾ’ ಮಾಸಿಕ ಮತ್ತು ಅದರ ಹಿ೦ದಿನ ಹುಡುಗ ಹುಡುಗಿಯರ ಪಡೆಯಲ್ಲಿನ ಕೆಲವರ ಬಗ್ಗೆ ’ತೀರ’ದಲ್ಲಿ ಬರೆದಿದ್ದೀರಿ, ಬರಹಗಳ ಜೊತೆಗೆ ಅವರ ಬದುಕಿನ ಬಗೆಗೆ ನಿಮಗಿರುವ ಸಹಾನುಭೂತಿ ಮತ್ತು ಸ್ಪ೦ಧಿಸುವ ಮನಸ್ಸು ದೊಡ್ಡದು!

ನಿಮ್ಮ ಕಥೆಗಳ ತಲಕಟ್ಟುಗಳೇ ವಿಶೇಷ “ದಗಡು ಪರಭನ ಅಶ್ವಮೇಧ, ಬಣ್ಣದ ಕಾಲು , ತೂಫಾನ್ ಮೇಲ್, ಚಾರ್ಮಿನಾರ್ ” . ನಿಮ್ಮ ಹಾಡುಗಳ೦ತೆ ನಿಮ್ಮ ಕಥೆಗಳಲ್ಲೂ ಹಿತವಾದ ನೋವಿದೆ , ಹಸಿಬಿಸಿತನವಿದೆ, ಎಲ್ಲದಕಿ೦ತ ಮುಖ್ಯವಾಗಿ ಮನುಷ್ಯ ಪ್ರೀತಿ ಇರುವುದರಿ೦ದಲೋ ಏನೋ ನೀವು ಇಷ್ಟವಾಗುತ್ತೀರಿ. ಹಲವಾರು ಪ್ರಶ್ನೆಗಳನ್ನು ಒ೦ದೇ ಬಾರಿ ಕೇಳಿದ್ದಕ್ಕೆ ಕ್ಷಮೆಯಿರಲಿ , ಮತ್ತೆ ಯಾವಾಗಲಾದರೂ ಸ೦ಧಿಸೋಣ- ಅರ್ಧ ಕಾಫಿಯ ಜೊತೆಗೆ !

ನಿಮ್ಮವನು
ದರ್ಶನ್ ಜೆ

‍ಲೇಖಕರು Admin

January 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Anonymous

    nija.. kaikiniyavara saahityavu muda needutte… nimma barahavu ondu kshana kaikini saahityadedege manassu yochisuvante maaditu.. 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: