ಪ್ರವರ-ಅಂಬಿಕಾ ಮನಸ್ಸು ದೊಡ್ಡದು

ಕೋಟಿಗಟ್ಟಲೆ ಸುರಿದು ಮದುವೆಯಾಗುವುದೇ ಆದರ್ಶ ಎಂದು ಜಾಗತೀಕರಣ ಹಾಗೂ ಅದರ ಶಿಶುಗಳು ನಂಬಿಸುತ್ತಿರುವ ದಿನಗಳಲ್ಲಿ ಈ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ.

ಎಂತಹ ಆಯ್ಕೆಯ ಸ್ವಾತಂತ್ರ್ಯ ಇರುವವರೂ ಮೈಗೆ ಅರಿಶಿನ ತಿಕ್ಕಿಸಿಕೊಳ್ಳುತ್ತಾ, ಪ್ರಿ ಶೂಟ್ ಪೋಸ್ಟ್ ಶೂಟ್ ಗಳಿಗೆ ಮನಸೋಲುತ್ತಾ, ಒಂದು ಮುಹೂರ್ತ ಎರಡು ರಿಸೆಪ್ಶನ್ ಎನ್ನುವುದಕ್ಕೆ ತಲೆ ಆಡಿಸುತ್ತಾ ಅಂಗೀಕಾರದ ಮುದ್ರೆ ಒತ್ತುತ್ತಿರುವ ಈ ದಿನಗಳಲ್ಲಿ ನಿಜಕ್ಕೂ ಪ್ರವರ ಹಾಗೂ ಅಂಬಿಕಾ ಇಬ್ಬರೂ ತೆಗೆದುಕೊಂಡ ನಿರ್ಧಾರ ಎಲ್ಲರ ಮನ ಗೆಲ್ಲುವಂತಹದ್ದು.

ಚಿತ್ರದುರ್ಗದ ಮುರುಘಾ ಮಠದಲ್ಲಿ ಪ್ರತೀ ವರ್ಷ ಜರುಗುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅದರದ್ದೇ ಆದ ಅನನ್ಯತೆಯಿದೆ. ಅದರಲ್ಲಿ ಈ ಬಾರಿ ಪ್ರವರ ಕೊಟ್ಟೂರು ಹಾಗೂ ಅಂಬಿಕಾ ಮದುವೆಯಾಗಲು ನಿರ್ಧರಿಸಿದ್ದು ‘ಅವಧಿ’ಗೆ ತೀವ್ರ ಸಂತಸ ತಂದಿದೆ.

ಇಂತಹ ಮದುವೆಯನ್ನು ಮಾಡಿಕೊಡಲು ಅಷ್ಟೇ ದೊಡ್ಡ ಮನಸ್ಸು ಎರಡೂ ಕಡೆಯ ಪೋಷಕರಿಗಿದ್ದಾಗ ಮಾತ್ರ ಸಾಧ್ಯ. ಇಂತಹ ಒಂದು ಸರಳ ರೀತಿಯ ಸಮಾರಂಭಕ್ಕೆ ಕಾರಣರಾದ ಕುಂ ವೀರಭದ್ರಪ್ಪ ಹಾಗೂ ಅನ್ನಪೂರ್ಣ ದಂಪತಿಗಳು ಹಾಗೂ ಅಂಬಿಕಾರ ಪೋಷಕರಾದ ಸುಧಾ ಹಾಗೂ ಶೇಖರಪ್ಪ ಅವರಿಗೂ ಅಭಿನಂದನೆಗಳು.

ಒಂದು ಧೋತಿ, ಒಂದು ಊರುಗೋಲಿನ ಮೂಲಕ ಬದುಕಿ ತೋರಿಸಿದ ದೇಶ ನಮ್ಮದು. ಪ್ರವರ-ಅಂಬಿಕಾರಂತಹ ಜೋಡಿ ಸಾವಿರವಾಗಲಿ. ನಮ್ಮಗಳ ಮಕ್ಕಳ ಮದುವೆಯನ್ನೂ ಸರಳವಾಗಿ ಆಚರಿಸುವ ಪಣ ತೊಡೋಣ

‍ಲೇಖಕರು avadhi

June 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. shivashankar banagsr

    ಅಭಿನಂದನಾರ್ಹ ಮತ್ತು ಮಾದರಿ… ಶುಭವಾಗಲಿ ಮದುಮಕ್ಕಳಿಗೆ

    ಪ್ರತಿಕ್ರಿಯೆ
  2. ವಸುಧೇಂದ್ರ

    ಮಾದರಿ ನಡೆ. ಪ್ರವರ-ಅಂಬಿಕಾಗೆ ಅಭಿನಂದನೆಗಳು. ಅವರ ತಾಯಿ-ತಂದೆಯರ ಮನಸ್ಸು‌ ದೊಡ್ಡದು. ಯುವ ದಂಪತಿಗೆ ಶುಭವಾಗಲಿ.

    ಪ್ರತಿಕ್ರಿಯೆ
  3. ಡಾ॥ ಶಿವಾನಂದ ಕುಬಸದ

    ಅಭಿನಂದನೆಗಳು…”ಪ್ರವರಾಂಬಿಕಾ” ಮತ್ತು ಕುಟುಂಬದವರಿಗೆ..

    ಪ್ರತಿಕ್ರಿಯೆ
  4. gurunatha boragi

    ಮನಸ್ಸು ಮತ್ತು ಮದುವೆ ಎರಡೂ ಸರಳ. ಶುಭವಾಗಲಿ ಪ್ರವರ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: