ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಯಾಣ ವಿಪರೀತವಾಗಲಿ..

ಚಲಪತಿ ವಿ

ಇರುಳ ಜಾತ್ರೆಯ ಸದ್ದಲಿ

ರೆಕ್ಕೆ ಇಲ್ಲದ ಹಕ್ಕಿಗೆ

ಬಣ್ಣ ಬಳಿದ ಜಾದೂಗಾರ

ಜನ ಸೇರಿದ್ದೂ ಜಾದೂ ನೋಡಲಲ್ಲ

ಎಲ್ಲ ದಿಕ್ಕಿಗೂ ಆವರಿಸಿದ ಸದ್ದಿಗೆ

ಹೌದಲ್ಲವೇ!

ನಾವೆಲ್ಲರೂ ಸದ್ದಿಗೆ ಬೆರಗಾಗುವವರು

ಅಗೋ…ಅಲ್ಲಿ ಹೋರಾಡುತ್ತಿರುವ

ಇಬ್ಬರೂ ನಿನ್ನ ಶತ್ರುಗಳೇ

ಜಯ ಯಾರದಾಗಬೇಕು ಎಂಬ ಪ್ರಶ್ನೆಗೆ

ಉತ್ತರ ಊಹಾತೀತ

ಎಲ್ಲರಿಗೂ ಹೇಳುವಷ್ಟು ಅತೀತವೇನಲ್ಲ

 

ಮುನ್ಸೂಚನೆಯಿಲ್ಲದ ನಗು

ಸುತ್ತಲೂ ನಲಿದಾಡುತ್ತಿತ್ತು

 

ಹೆಜ್ಜೆ ಹೆಜ್ಜೆಗೂ ಮೂಡಿದ

ಗುರುತುಗಳು ನನ್ನವೇ..

ಈ ಭ್ರಮೆಯ ಬಿಸಾಡು

ಅವನು ಗೀಚಿದ ಮಸಿಯಲ್ಲಿ

ನೀನೊಂದು ಪುಟ್ಟ ಕವಿತೆಯಷ್ಟೇ?

 

ಜಾಹೀರಾತು ಜಾಯಮಾನದ

ನಿನ್ನ ನಗುವಿನ ಭಾರ ತಟಸ್ಥವಾಗಲಿ

ಬಂದೂಕು ಹಿಡಿವ ಬಿಲ್ಲುಗಾರನಿಂದ

ಮಾನವನಾಗುವೆಡೆ ನಿನ್ನ

ಪ್ರಯಾಣ ವಿಪರೀತವಾಗಲಿ

‍ಲೇಖಕರು avadhi

17 June, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading