
ಕು ಸ ಮಧುಸೂದನ ರಂಗೇನಹಳ್ಳಿ
ಅಪ್ಪಾ! ಪ್ರಭುತ್ವ ಎಂದರೇನು?
ಮಗು ಕೇಳುತ್ತೆ:
ಅದು ಹದ್ದಿನ ಹಾಗಿರುತ್ತೆ
ಸದಾ ನಮ್ಮಗಳ ತಲೆಯ ಮೇಲೆ ಹಾರುತ್ತಿರುತ್ತೆ
ನಾವು
ಉಣ್ಣುವುದ
ಉಡುವುದ
ನಡೆಯುವುದ
ಗಮನಿಸುತ್ತ
ನಾವೇನು
ಉಣ್ಣ ಬೇಕು
ಉಡ ಬೇಕು
ಮಾತಾಡ ಬೇಕು
ಅನ್ನೋದನ್ನದು
ಅದೃಶ್ಯ ಅಸುರನಂತೆ
ಆದೇಶಿಸುತ್ತಿರುತ್ತದೆ

ಅಪ್ಪಾ! ಈಗ ನೀ ಹೇಳಿದ್ದನ್ನೆಲ್ಲ
ಅದು ಕೇಳಿಸಿಕೊಳ್ಳುತ್ತಾ?
ಹಾ! ಮಗು
ನಾವದರ ಬಗ್ಗೆ ಮಾತಾಡಬಾರದು
ಅದರ ಆದೇಶ ಮೀರಬಾರದು
ಹಾಕಿದ ಗೆರೆ ದಾಟಬಾರದು
ಹಾಗೆ ಮಾಡಿದರದು
ನಮ್ಮನ್ನು ನುಂಗಿ ನೊಣೆಯುತ್ತೆ!
ಅವತ್ತು ರಾತ್ರಿ ಕತೆ ಕೇಳಿದ ಮಗು ನಿದ್ದೆ ಹೋಯಿತು
ಹೇಳಿದ ಅಪ್ಪನಿಗೆ ನಿದ್ರೆ ಹಾರಿ ಹೋಯಿತು!






0 Comments