ಪರಮೇಶ್ವರ ಗುಂಡ್ಕಲ್ ಅವರ ‘ಪಿಚ್ಚರ್’ ಬ್ಲಾಗ್ನಲ್ಲಿ ಇದನ್ನು ಓದಿದಾಗ ಒಂದು ಕ್ಷಣ ಈ ಕವಿತೆಯಲ್ಲಿ ನಾವು ನೀವು ಅವರು ಇವರು ಎಲ್ಲರೂ .. ಇದ್ದೀವೇನೋ ಅನಿಸಿತು. ನಾವೆಲ್ಲಾ ಈ ಕವಿತೆಯಲ್ಲಿ ನಮ್ಮನ್ನು ಹುಡುಕಿಕೊಳ್ಳೋಣ ಎಂದು ಇದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.-

ಪೊಲೀಷ್ ಭಾಷೆಯ ನೊಬಲ್ ಪ್ರಶಸ್ತಿ ಪುರಸ್ಕೃತ ಕವಯಿತ್ರಿ ವಿಸ್ಲಾವಾ ಸಿಂಬೋರ್‌ಸ್ಕಾಳ ವಿಶಿಷ್ಟ ಶೈಲಿಯ ಕವಿತೆ ಇದು. ವ್ಯಕ್ತಿಯೊಬ್ಬ ಸತ್ತ ದಿನ ಅವನ ಸಾವನ್ನು ನಿರ್ಭಾವುಕವಾಗಿ `ಆಡಿಕೊಳ್ಳುವು’ದನ್ನು ಕವಯಿತ್ರಿ ಅದ್ಭುತವಾಗಿ ಹಿಡಿದಿಟ್ಟಿದ್ದಾರೆ. ಅದನ್ನು ಅಷ್ಟೇ ಅದ್ಭುತವಾಗಿ ಕನ್ನಡಕ್ಕೆ ತಂದಿಡಲು ವಿಕಾಸ ನೇಗಿಲೋಣಿಪ್ರಯತ್ನಪಟ್ಟಿದ್ದಾರೆ!
`ಇಷ್ಟು ಬೇಗ, ಹೀಗಾಗುತ್ತೆ ಅಂತ ಯಾರೂ ಕನಸು ಮನಸಲ್ಲೂ ಎಣಿಸಿರಲಿಕ್ಕಿಲ್ಲ’.
`ಒತ್ತಡ ಮತ್ತೆ ಸಿಗರೇಟು, ನಾನು ಎಷ್ಟು ಸಲ ಹೇಳಿದ್ದೆ’.
`ಸದ್ಯ ಹಾಗಾಗಲಿಲ್ಲವಲ್ಲಾ, ಥ್ಯಾಂಕ್ಸ್’.
`ಆ ಹೂವಿನ ಬೊಕೆನ ತೆಗೆದುಕೊಡು’.
`ಅವನ ತಮ್ಮ ಇದ್ದನಲ್ಲಾ, ಅವನಿಂದಲೇ ಆಗಿದ್ದು. ಇಡೀ ಸಂಸಾರ ನೋಡಿಕೊಳ್ಳಬೇಕಿತ್ತು’.
`ಅರೆ ನೀನು ಗಡ್ಡ ಬಿಟ್ಟು, ನನಗೆ ಅದು ನೀನೇ ಅಂತ ಗುರುತೇ ಸಿಗಲಿಲ್ಲ ನೋಡು’.
`ಅದು ಅವನದೇ ತಪ್ಪು ಬಿಡು, ಯಾವಾಗಲೂ ಯಾವುದಾದರೂ ಒಂದರಲ್ಲಿ ಸಿಕ್ಕಿಬೀಳುತ್ತಲೇ ಇದ್ದ’.
`ಆ ಹೊಸ ಹುಡುಗ ಏನೋ ಹೇಳೋಕೆ ನೋಡ್ತಿದಾನೆ. ನಾನೆಲ್ಲೂ ಅವನನ್ನು ನೋಡಿದ ನೆನಪಿಲ್ಲವಪ್ಪಾ’.
`ಪ್ರಭಾಕರ ಚಿಕ್ಕಮಗಳೂರಿಗೆ ಹೋಗಿದ್ದಾನೆ, ಪ್ರಶಾಂತ ಯು ಎಸ್‌ನಲ್ಲಿದ್ದಾನಂತೆ’.
`ನೀನೊಬ್ಬನೇ ನೋಡು ಸರಿಯಾಗಿ ನೆನಪಿಟ್ಟುಕೊಂಡು ಕೊಡೆ ತಂದಿದೀಯಾ ಇವತ್ತು’.
`ಅವರೆಲ್ಲರಿಗಿಂತ ಇವನು ಬುದ್ದಿವಂತನಾಗಿದ್ದ ಹೌದು, ಏನಾಯ್ತು?’.
`ಅದು ಹೊಕ್ಕು ಹೊರಡೋ ಮನೆ, ಅಲ್ಲಿಗೆ ಹೋಗಲಿಕ್ಕಿಲ್ಲ ಬಿಡು’.
`ಸರಿ, ಇವನು ಹೇಳಿದ್ದು ಸರೀನೇ. ಆದರೆ ಅದೊಂದೇ ಕಾರಣ ಅಂತ ನನಗೆ ಅನ್ನಿಸೋದಿಲ್ಲವಪ್ಪಾ’.
`ಹೌದು, ಎರಡೂ ಬಾಗಿಲಿಗೆ ಪೈಂಟ್ ಮಾಡಬೇಕು, ಎಷ್ಟು ಆಗುತ್ತದೆ ಹೇಳು’.
`ಎರಡು ಕೋಳಿ ಮೊಟ್ಟೆ, ಒಂದು ಟೀಸ್ಪೂನ್ ಸಕ್ಕರೆ’.
`ಅದು ಅವನ ಕೆಲಸವೇ ಆಗಿರಲಿಲ್ಲ, ಯಾಕೆ ಸುಮ್ಮನೆ ಸಿಕ್ಕಿ ಹಾಕಿಕೊಳ್ಳಬೇಕಿತ್ತು?’
`ಹೌದು, ನೀಲಿ ಬಣ್ಣದ್ದು, ಸಣ್ಣ ಸೈಜಿಂದು ಬೇಕು’.
`ಐದು ಸಲ ಕೇಳಿದೆ, ಉತ್ತರವೇ ಇಲ್ಲ’.
`ಒಳ್ಳೇದು, ಪಾರ್ಟ್ ಟೈಂ ಕೆಲಸವಾದರೂ ಇದೆಯಲ್ಲಾ ಅವಳಿಗೆ ಸದ್ಯ’.
`ನನಗೆ ಗೊತ್ತಿಲ್ಲಪ್ಪಾ, ಅವನ ನೆಂಟರಿರಬೇಕು’.
`ನಾನು ಇಲ್ಲಿಗೆ ಬಂದಿದ್ದೆ, ಆದರೆ ಈ ಜಾಗಕ್ಕೆ ಬಂದಿರಲೇ ಇಲ್ಲ ನೋಡು’.
`ನಿನ್ನೆ ತಾನೇ ನಾನು ಅವನನ್ನು ಕನಸಲ್ಲಿ ಕಂಡಿದ್ದೆ, ಥಟ್ಟನೆ ಎಚ್ಚರವಾಯ್ತು’.
`ಮಗಳು ಅಷ್ಟು ಕೆಟ್ಟದಾಗೇನೂ ಇಲ್ಲ’.
`ಹೌದೌದು, ಅದು ನಮ್ಮೆಲ್ಲರಿಗೂ ಆಗಿದೆ’,
`ಆ ವಿಧವೆಗೆ ನನ್ನ ಹಾರೈಕೆ ಹೇಳಿಬಿಡು’.
`ಇದು ಲ್ಯಾಟೀನ್ ಮಂತ್ರದ ಥರ ಕೇಳತ್ತೆ’.
`ಅದು ಬಂತು ಹೋಯ್ತು’.
`ಬರ್ತೀನಿ ಮೇಡಮ್’.
`ಎಲ್ಲಾದರೂ ಬಿಯರ್ ಸಿಕ್ಕರೆ ತಗೊಂಡು ಹೋಗೋಣ’.
`ಸರಿ ಫೋನ್ ಮಾಡು, ಮಾತಾಡೋಣ’.
`ನಾಲ್ಕನೇ ನಂಬರ್ರೋ ಹನ್ನೆರಡನೇ ನಂಬರ್ರೋ’.
`ನಾನು ಈಕಡೆಯಿಂದ ಹೋಗ್ತೀನಿ’.
`ಇಲ್ಲ ಇಲ್ಲ ನಾನು ಬರಲ್ಲ’.

ವಿಕಾಸ್, ಚೆಂದದ ಅಭಾವಾನುವಾದ