ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತೀಕ್ಷಾ Congrats!

ಪ್ರಜಾವಾಣಿ ದೀಪಾವಳಿ ಸ್ಪರ್ಧೆಗಳಲ್ಲಿ ಎಲ್ಲರೂ ಕಥೆ, ಕವಿತೆ ಬಹುಮಾನ ವಿಜೇತರ ಬಗ್ಗೆ ಮಾತನಾಡುತ್ತಿರುವಾಗ ಸದ್ದಿಲ್ಲದೇ ಒಬ್ಬ ಪುಟಾಣಿ ಪುಟ್ಟ ಸಾಧನೆ ಮಾಡಿದ್ದಾಳೆ. ಪ್ರಜಾವಾಣಿ ದೀಪಾವಳಿ ಸ್ಪರ್ಧೆಗಳು ಎಂದರೆ ಈಗಲೂ ಕನ್ನಡ ನಾಡಿನ ಜನತೆ ಕಾತರದಿಂದ ಎದುprateeksha on cycleರು ನೋಡುತ್ತಾರೆ. ಅಂತಹ ಸ್ಪರ್ಧೆಗಳಲ್ಲಿ ಮೂರು ವರ್ಷ ಬಹುಮಾನ ಗಿಟ್ಟಿಸುವುದೆಂದರೆ..? ಅಂತಹ ಸಾಧನೆಯನ್ನು ಮಾಡಿದ್ದು ಪ್ರತೀಕ್ಷಾ. ಈಕೆ ಮೂರು ವರ್ಷ ತನ್ನ ವರ್ಣಚಿತ್ರಕ್ಕೆ ಪ್ರಶಸ್ತಿ ಬುಟ್ಟಿಗೆ ಹಾಕಿಕೊಂಡಿದ್ದಾಳೆ. ಎಲ್ಲರಿಂದ ಶಹಬಾಶ್ ಎನಿಸಿಕೊಂಡಿದ್ದಾಳೆ.

ದಕ್ಷಿಣ ಕನ್ನಡದ ಅಡ್ಯನಡ್ಕದ ಮರಕಿಣಿ ಕುಟುಂಬದ ಈ ಹುಡುಗಿ ಬಹುಷಃ ಮೂರು ವರ್ಷಗಳ ಕಾಲ ಪ್ರಶಸ್ತಿ ಗೆಲ್ಲಲು ಆಕೆ ಆಯ್ದುಕೊಳ್ಳುವ ವಿಷಯವೇ ಕಾರಣ. ಎಲ್ಲರಂತಾಗದೆ ತೀರಾ ಭಿನ್ನವಾಗಿ ಯೋಚಿಸುವ ಪ್ರತೀಕ್ಷಾ ಈ ಬಾರಿ ಚಿತ್ರ ಬರೆಯಲು ಆರಿಸಿಕೊಂಡದ್ದು ಬಯಲು ಶೌಚಾಲಯ ವಿಷಯವನ್ನು. ಒಬ್ಬ ಪುಟ್ಟ ಹುಡುಗಿ ಈ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸುತ್ತಾಳೆ ಎನ್ನುವುದೇ ಅಚ್ಚರಿ.

ಹಿರಿಯ ಪತ್ರಕರ್ತ ರಂಗನಾಥ ಮರಕಿಣಿ ಮಗಳಾದ ಈಕೆ ಲೇಖನಿ ಬಿಟ್ಟು ಕುಂಚಕ್ಕೆ ಒಲಿದಿದ್ದಾಳೆ. ಇನ್ನಷ್ಟು ಮೆಟ್ಟಿಲುಗಳನ್ನು ಏರಲಿ ಎಂದು ಅವಧಿ ಅಭಿನಂದಿಸುತ್ತದೆ . ಪ್ರತೀಕ್ಷಾ ಮೂರು ವರ್ಷ ಬಹುಮಾನ ಪಡೆದ ಚಿತ್ರಗಳು ಹಾಗೂ ಆ ಸಂತಸ ಅನುಭವಿಸಿದ ಕ್ಷಣಗಳ ಫೋಟೋ ಆಲ್ಬಮ್ ಇಲ್ಲಿದೆ

prateeksha artwork

prateeksha art2

prateeksha art3

prateeksha award

prateeksha with writer

‍ಲೇಖಕರು admin

31 October, 2015

1 Comment

  1. umesh desai

    congratulations…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading