ಹಾಯ್ಕು ಗಳು ..
ಎಂ ಎಂ ಶೇಕ್

ರಾತ್ರಿಯಲಿ ಎಲ್ಲಾ ಮನೆಗಳ
ದೀಪ ಅರಿದ್ದು ಸಹಜ ,
ನಿನ್ನ ಮನೆಯಲಿ ಹಣತೆಯೊಂದು
ಉರಿಯುತ್ತಿತ್ತಲ್ಲ ಅದು ಸತ್ಯ ..!
***
ಪ್ರತಿ ಸಂಜೆ ..
ಉದುರಿದ ಎಲೆಗಳನ್ನು
ಮುಂದಿಟ್ಟುಕೊಂಡು
ಲೆಕ್ಕಕೇಳುತ್ತದೆ ..
ಮರದ ನೆರಳು..!!!
***

ಹಸಿವೆಂದರೆ
ಒಂದು ರೊಟ್ಟಿ ,
ದಾಹವೆಂದರೆ
ಒಂದು ಗುಟುಕು ನೀರು ಅಷ್ಟೆ ..!
***
ಅವನು ನೀನು,
ಹೆಣ್ಣು ನಿನ್ನದೇ ತಪ್ಪೆಂದ ..
ನೀನು .,
ನನ್ನವಳು
ಗೌರವದಿಂದ ಬದುಕಿದಳೆಂದೆ ..!!
***

ಈ ಮಣ್ಣ ಹಣತೆಗೆ
ಮಾತ್ರ ಗೊತ್ತು ..
ನನ್ನ ಮುಖದ ಸುಕ್ಕುಗಳು ..!
***
ಉಸಿರುಗಟ್ಟುವ ಕ್ಷ್ಣಣಗಳಿಂದ
ಉಸಿರಾಡುವ ಕ್ಷಣಗಳನ್ನು
ಆರಿಸಿದ್ದು ದೊಡ್ಡ ಸಾಧನೆ ..!!!





Ohhh tumba chendada saalugalu ….
Tumba chennagive…
ಉದುರಿದ ಎಲೆಗಳನ್ನು
ಮುಂದಿಟ್ಟುಕೊಂಡು
ಲೆಕ್ಕಕೇಳುತ್ತದೆ ಮರದ ನೆರಳು..!!!
ee saalugalu eshtavaadavu.
ಚೆನ್ನಾಗಿವೆ.
ಹಸಿವೆಂದರೆ ಒಂದು ರೊಟ್ಟಿ ,
ದಾಹವೆಂದರೆ ಒಂದು ಗುಟುಕು ನೀರು ಅಷ್ಟೆ ..!
ತುಂಬಾ ಇಷ್ಟವಾಯಿತು… ಜಗತ್ತು ಇದನ್ನು ಅರಿತಾಗ ಸಂಗ್ರಹ ಬುದ್ಧಿ ಮರೆಯಾಗಿ, ಎಲ್ಲಡೆ ಸಮೃದ್ಧಿ ಆಗ
putta kavitegalu istavaadavu
ellarigu dhanyavaadagaLu..raajjyotasavada shubhasayagaLu..
ಕಾವ್ಯಾಕಾಶದ ನಕ್ಷತ್ರಗಳು. ಇನ್ನಷ್ಟು ಮೂಡಿಬರಲಿ