ನನ್ನನವನಿಗೆ ಕೊಟ್ಟೆ
ವಿದ್ಯಾಶಂಕರ್ ಹರಪನಹಳ್ಳಿ
ನನ್ನನವನಿಗೆ ಕೊಟ್ಟೆ
ಬದಲಿಗೆ ಅವನನೇ ಪಡದೆ
ಜೀವಮಾನದ ಜೀವದ ಒಪ್ಪಂದ
ನಡೆದಿದ್ದು ಹೀಗೆ..
ಪಡೆದದ್ದಕ್ಕಿಂತ ಕೊಟ್ಟದ್ದು
ಕಡಿಮೆಯಾಯಿತೋ ಎನೋ?
ಈ ಪ್ರೀತಿಯ ವ್ಯವಹಾರದಲಿ
ಅದಾರೇನ್ಮಾಡಲಿ ನಾ ಬರಿಗೈ!
ದೂರದೃಷ್ಟಿಯ ಅಪಮೌಲ್ಯ
ಆದರೂ ಮುಂದುವರಿದೆ ವಹಿವಾಟು
ಸುಖ ಸಂಸಾರದ ರಮ್ಯ ಕನಸು
ಸಾಗರದಾಚೆ ಇರುವುದು, ಸುಳ್ಳೇ?
ಬಿದ್ದರೆ ಇಬ್ಬರು ಒಟ್ಟಿಗೆ
ನಡೆದರು ಕೆಲವರು ಜೊತೆಜೊತೆಗೆ
ಪ್ರತಿರಾತ್ರಿ ಪ್ರೇಮದ ಅಕ್ಷಯಸಾಲ
ಮಧ್ಯಾಹ್ನಕೆ ಆಗಬಹುದು ದಿವಾಳಿ!
(ಮೂಲ :“I gave myself to him” ಎಮಿಲಿ ಡಿಕಿನ್ಸನ್ (December 10, 1830 – May 15, 1886, ಅಮೇರಿಕಾ ಕವಯತ್ರಿ)







0 Comments