ಶ್ರುತಿ ಬಿ ಆರ್
ರೇ….
ಹುಟ್ಟುವ ಮುನ್ನವೇ ಮಣ್ಣುಗೂಡಿದ ಪ್ರೀತಿ
ಹೀಗೆ ಜೀವ ಹಿಂಡಬಹುದೆಂದು ಗೊತ್ತಿದ್ದರೆ….
ಹೃದಯವನ್ನೇ ಎಲ್ಲಾದರು ಬಚ್ಚಿಡಬಹುದಿತ್ತು!!
ಒಮ್ಮೆ ಅತ್ತ ಒಮ್ಮೆ ಇತ್ತ ಹಾಯಾಗಿ ಹೊಯ್ದಾಡುವ
ಮೂಕ ಮನಸಿಗೆ ಒಂದಿಷ್ಟೂ ಎಚ್ಚರವಿಲ್ಲ
ಮೊದಲೇ ತಿಳಿದಿದ್ದರೆ ಬೇಡಿ ಹಾಕಿ ಬಂಧಿಸಬಹುದಿತ್ತು!
ಹೀಗೆ ನೀನು ಎದುರಾಗುವ ಬಗ್ಗೆ ಒಂದಾದರೂ
ಸಣ್ಣ ಸುಳಿವಿದ್ದಿದ್ದರೆ ಹೇಗಾದರೂ ಮಾಡಿ
ಈ ಕಿಡಿಗೇಡಿ ಬುದ್ದಿಗೆ ಬೆದರಿಸಿಡಬಹುದಿತ್ತು

ಹೀಗೆ….
ನಮ್ಮನ್ನು ಹೀಗೆ ಒಂದುಗೂಡಿಸಿದ ಪ್ರೀತಿ
ಹೃದಯವನ್ನೇ ಆವರಿಸಬಹುದೆಂದು ಗೊತ್ತಿದ್ದರೆ
ದೇಹದಲ್ಲೆಲ್ಲ ಹೃದಯವೇ ಇರಲೆಂದು ಬಯಸಬಹುದಿತ್ತು!!
ಚಂಚಲವಾಗಿದ್ದ ಈ ಚಿತ್ತದಲ್ಲಿ ನೀನೆ ಸ್ಥಿರವಾಗಿ
ನಿಲ್ಲುವವನೆಂದು ಮೊದಲೆ ತಿಳಿದಿದ್ದರೆ
ನಿನಗಾಗಿ ಒಂದಷ್ಟು ಚಂದವಾಗಿ ಅಲಂಕರಿಸಿಡಬಹುದಿತ್ತು!
ಹೀಗೆ ಮೊದಲ ಮಳೆಯ ಕಂಡಾಗ ಮನದೊಳಗೂ ಮಳೆಯಂತೆ
ಸುರಿವ ನೆನಪು ನೀನೆಂಬ ಸುಳಿವಿದ್ದಿದ್ದರೆ
ಪ್ರತಿ ಮಳೆಯಲ್ಲೂ ನಿನ್ನೊಂದಿಗೆ ನೆನೆಯಬಹುದಿತ್ತು!!






Excellent choice of words to depict feeling of falling in live
extremely sincere words, depict the depth of love the character feels..love between any two people in any form is always positive…
Hope the world is full of love… any kind of love…the world needs it badly….