ಪ್ರತಿಭಾ, ನಿನ್ನ ಈ ಪಂಚ್, ಸಖತ್ ಜೋರಾಗಿದೆ ಕಣೆ…

coffee pratibha3ಪ್ರತಿಭಾ ನಂದಕುಮಾರ್ ಮತ್ತು ಕಾಫಿ love ಬಗ್ಗೆ ಇನ್ನೇನೂ ಹೇಳಬೇಕಾಗಿಲ್ಲ. ‘ಅನುದಿನದ ಅಂತರಗಂಗೆ’ ಇನ್ನೊಮ್ಮೆ ಬರೆದರೆ ಆಕೆ ‘ಅನುದಿನದ ಅಂತರ್ ಕಾಫಿ’ ಅಂತ ಬರೆದಾರು ಎನ್ನುವಷ್ಟು ಈಕೆ ಕಾಫಿ ಹುಡುಗಿ.  yes, ‘ಹುಡುಗಿ’. ಯಾಕೆಂದರೆ ಅವರ ಪಕ್ಕಾ ಗೆಳತಿ ಎಚ್ ಎನ್ ಆರತಿ ಪ್ರತಿಭಾರ ಸದಾ ಉತ್ಸಾಹ, ನಿಲ್ಲದ ಹೊಸ ಪ್ರಯೋಗ ನೋಡಿ ಪ್ರತಿಭಾರನ್ನು ಹಾಗೆ ಕರೆದಿದ್ದಾರೆ.

ಈ ಕಾಫಿ ಹುಡುಗಿಗೆ ಸಾಥ್ ನೀಡಿದವರು ಅದೆಷ್ಟೋ. ಏಕೆಂದರೆ ಪ್ರತಿಭಾ ಗ್ಯಾಂಗ್ ಅಂತಹದ್ದು. ಇಂದು ಇಲ್ಲಿ, ನಾಳೆ ಅಲ್ಲಿ.. ಅಷ್ಟೇ ಅಲ್ಲ, ಇಂದು ಸಾಹಿತ್ಯ.. ನಾಳೆ ಸಿನೆಮಾ.. ನಾಡಿದ್ದು ಡಾಕ್ಯುಮೆಂಟರಿ.. ಹೀಗೆ ಅವರ ಉತ್ಸಾಹಕ್ಕೆ ಸದಾ ಚಕ್ರ.

ಬಾದಲ್ ನಂಜುಂಡಸ್ವಾಮಿ ಕಾಫಿ ಬೀಜಗಳನ್ನೇ ಮುತ್ತಿನ ಹವಳಗಳನ್ನಾಗಿ ಮುಂದೆ ಹರಡಿದ್ದಾರೆ. coffee pratibha6‘ನಾನೇಕೆ ಅಂಜಲಿ’ ರಾಮಣ್ಣ, ಪೂರ್ಣಚಂದ್ರ ಮೈಸೂರು, ನಾಗಭೂಷಣ್, ಅಪೇಕ್ಷಾ ಘಳಿಗಿ, ವೀಣಾ ಭಟ್ ಅವರು ಕಾಫಿಗೆ ಚಿಕೊರಿಯಂತೆ ಬೆರೆತು ಓದಿಗೆ ಅಭಿನಯವನ್ನೂ ಸೇರಿಸಿ “ಒಂದು ಪ್ಲಸ್ಸು ಒಂದು ಲೆಸ್ಸು” ತಯಾರಿಸಿಬಿಟ್ಟರು. ಹುಲಿಯನ್ನು ಅದರ ಗುಹೆಯಲ್ಲೇ ನೋಡು ಎನ್ನುವಂತೆ ಮೂರು ಪ್ರದರ್ಶನವನ್ನು ಕಾಫಿ ಹೌಸ್ ನಲ್ಲಿಯೇ ಪ್ರತಿಭಾ ನಡೆಸಿದರು. ಇದಕ್ಕೆ ಆರಂಗೇಟ್ರಮ್ ಆಗಿದ್ದು ಮಾತ್ರ ಆದಿತ್ಯ ಕೆಫೆಯಲ್ಲಿ.

ರಾತ್ರೋ ರಾತ್ರಿ ಅಂದರೆ ಕಾಫಿ ಕುದಿಯಬಾರದ ಹೊತ್ತಲ್ಲಿ ಅವಧಿಯನ್ನು ನೆನಪಿಸಿಕೊಂಡು ಈ ಎಲ್ಲಾ ಫೋಟೋಗಳನ್ನು ಕಳಿಸಿಕೊಟ್ಟ ಅಂಜಲಿ ರಾಮಣ್ಣ, ಕಾಫಿ ಜೊತೆಗೆ ಘಮ ಎನ್ನುವಂತೆ ಸದಾ ಪ್ರತಿಭಾ ಪ್ರಯೋಗಕ್ಕೆ ಕಣ್ಣಾಗುವ ಎಚ್ ಎನ್ ಆರತಿ ಇಬ್ಬರೂ ಇಲ್ಲಿ ಆ ಕಾಫಿ ಲೋಕ ಬಿಚ್ಚಿಟ್ಟಿದ್ದಾರೆ.
 ಬನ್ನಿ ಒನ್ ಬೈಟು ಕುಡಿಯುತ್ತ ಓದಿಯೇ ಬಿಡೋಣ
ಎಚ್ ಎನ್ ಆರತಿ 
ಆಧುನಿಕ ಬದುಕಿನ ತಲ್ಲಣಗಳು, ಬೆಚ್ಚಿ ಬೀಳಿಸುವ ಮುಖವಾಡಗಳು, ಮುಖಕ್ಕೆ ರಾಚುವ ಸತ್ಯಗಳು…
ದೇಹಗಳ ಬೆಸುಗೆ, ಎಷ್ಟು ವೈಯಕ್ತಿಕ ಅಲ್ವಾ?
ಕಾಮ, ಬಿಕರಿಗಿಟ್ಟ ಮಾರುಕಟ್ಟೆಯ ಸರಕಾ??
ಹಾಗಾದರೆ, ಪ್ರೀತಿ ಅಂದರೇನು???
ಎಷ್ಟೋ ಪ್ರಶ್ನೆಗಳನ್ನು ಹುಟ್ಟುಹಾಕುತ್ತಲೇ ಯಾವಾಗಲೂ “ಯುವಕವಿ”ಯೇ ಆಗಿರುವ Prathibha Nandakumar ಮತ್ತವಳ ತಂಡದ ಪ್ರಸ್ತುತಿ ದಿಟ್ಟ ಪ್ರಯತ್ನ…very very bold.

ಕಾಫಿಹೌಸ್ ಪದ್ಯಗಳು ಇಂದಿನ ಯುವ ಮನಸ್ಥಿತಿಯ ತಾಕಲಾಟಗಳನ್ನು ಹಿಡಿದಿಡುತ್ತಲೇ ನಮ್ಮೊಳಗನ್ನು ತಡಕಾಡಿ ಶೋಧಿಸುವಂತೆ ಮಾಡಿಬಿಡುತ್ತದೆ.
ಹೆಣ್ಣು, ಅವಳ ಮೇಲೆ ಸತತವಾಗಿ ನಡೆಯುವ ತಣ್ಣನೆಯ ಕ್ರೌರ್ಯ, ಕಣ್ಣಂಚ್ಚನ್ನು ಆರ್ದ್ರ ಮಾಡುತ್ತಲೇ ಹೋಗುತ್ತದೆ.
ಎಲ್ಲರ ಅಭಿನಯ ಮನಮುಟ್ಟುವಂತಿದೆ,
special mention Anjali Ramanna ಮಾತಿನ ಲಯದಲ್ಲೇ ಭಾವಗಳ ಅಭಿವ್ಯಕ್ತಿಗೆ extra browny points
ಪ್ರತಿಭಾ, ನಿನ್ನ ಈ ಪಂಚ್, ಸಖತ್ ಜೋರಾಗಿದೆ ಕಣೆ…
ಬೊಳುವಾರು ಕಂಡಂತೆ 
ಅರುವತ್ತು ವರ್ಷಗಳ ಹಿಂದೆ ನಮ್ಮ ನೆರೆಯ ಕಲಾವಿದರೊಬ್ಬರು, ವರ್ಷಕ್ಕೊಮ್ಮೆ ೪೦-೫೦ ಜೇಡಿ ಮಣ್ಣಿನ ಗಣಪತಿ ತಯಾರಿಸಿ, ಚೌತಿಯಂದು ಕೊಳ್ಳಬರುವ ಗಿರಾಕಿಗಳಿಗೆ, ಅವರಿಗಿಷ್ಟದ ಗಣಪತಿಗೆ ಜೀವ ಕೊಟ್ಟು ಎತ್ತಿಕೊಡುತ್ತಿದ್ದರೆ, ಇಂದು ಪ್ರತಿಭಾ ನಂದಕುಮಾರ್ ಕವನಗಳಿಗೆ, ೪೦-೫೦ ‘ಕಾಫಿ ಹೌಸ್’ ಗಿರಾಕಿಗಳೇ ಕಣ್ಣು ಇಟ್ಟು ಜೀವ ಕೊಡುತ್ತಿರುವುದನ್ನು ಕಣ್ಣಾರೆ ಕಂಡಂತಾಯಿತು.
coffee pratibha14
coffee pratibha13
coffee pratibha16
coffee pratibha12
coffee pratibha1
coffee pratibha5
coffee pratibha9
coffee pratibha15
coffee pratibha17
coffee pratibha2

‍ಲೇಖಕರು Avadhi

December 14, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. KVTirumalesh

    ಕಾಫಿ ಹೌಸ್-ನಲ್ಫ್ಲೇನು ಕವಿತೆ ಓದುವುದು?
    ಓದುವುದಾದರೆ ಓದಿ ಶ್ಮಶಾನದಲ್ಲಿ
    ಕಿವಿಯಿರದ ಕಿವಿಗಳಿಗೆ ಕಣ್ಣಿರದ ಕಣ್ಗಗಳಿಗೆ
    ಕೇವಲ ಆತ್ಮಗಳಿಗೆ
    ನಾಭಿಯಿಂದೇಳಲಿ ಓಂಕಾರವೆಂಬುದು
    ನಭದಿಂದ ಬೀಳಲಿ ಕಣಗಿಲೆ ಹೂಗಳು
    ಕೆ.ವಿ. ತಿರುಮಲೇಶ್

    ಪ್ರತಿಕ್ರಿಯೆ
    • prathibha nandakumar

      ಕೆ ವಿ ಟಿ ಡಾರ್ಲಿಂಗ್…..
      ಓದಿ ಹೇಳಬೇಕಾಗಿಲ್ಲ, ಆತ್ಮಗಳಿಗೆ,
      ಕಿವಿ ಎನ್ನುವುದು ಕೇಳುವುದು ಮಾತ್ರವಲ್ಲ
      ಕಣ್ಣು ಕಾವ್ಯ ಬೇಡುವುದಿಲ್ಲ
      ನಾಭಿ ಓಂಕಾರದ ಮೂಲವಲ್ಲ
      ನಭದಿಂದ ಬೀಳುವುದಿಲ್ಲ ಕಣಗಿಲೆ ಹೂ.
      ಸ್ಮಶಾನ ಎನ್ನುವುದು ಏನು
      ಕೆಫ಼ೆಗಳಲ್ಲದೆ ಬೇರೆ ಇರುವುದೇನು
      ಹೆಣಗಳು ಮಲಗುವಲ್ಲಿ
      ಆತ್ಮಗಳು ಗೈರು ಹಾಜರಿ ಅಲ್ಲಿ
      ಓಂಕಾರ ಬಿಂದು ಇತ್ಯಾದಿ
      ನಾಭಿ ನಭ ಏಳಲಿ ಬೀಳಲಿ ಎಲ್ಲ
      ಬರೀ ಕ್ಲೀಷೆ, ಪದ ತೀಟೆ
      ಬೇಕಿದ್ರೆ ಒಂದ್ ಕಪ್ ಕಾಫ಼ಿ ಕುಡಿಯಿರಿ
      ಮೇಲೊಂದಿಷ್ಟ್ ಪಕೋಡ ತಿನ್ನಿ
      ಇನ್ನೂ ಸಾಲದಂದ್ರೆ ಪಕ್ಕದ ಟೇಬಲ್ಲಿನ
      ಸುಂದರಿಯ ನಾಭಿ ದಿಟ್ಟಿಸಿ.
      ಕಣಗಿಲೆ ಅಲ್ಲದಿದ್ದರೂ ಬೀಳುತ್ತವೆ ಕೆನ್ನೆಗೇನಾದರೂ …. !!

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: