ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ಕಾಗೆ ಕವಿತೆ: ಅಜ್ಜನ ನುಡಿಗಳು

ಪ್ರತಿಭಾ ಕಾಗೆ


ಬೆತ್ತದ ರುಚಿಯ ಕಂಡ
ಮೊಮ್ಮಗನೆ ಅಜ್ಜನ ನುಡಿಗಳ
ಕೇಳು,
ಅನುಭವದ ಮಾತಿನಲಿ
ಅಡಗಿರುವ ದಿಟ ಸತ್ಯದ
ನೆರಳನು ಕಾಣು
ಬಾಳಿನೂದ್ದಕೂ ಹೋರಾಡಿದ
ಆ ಹಿರಿಜೀವದ,
ನೋವು ನಲಿವುಗಳ ಪದಗಳ
ಆಲಿಸು.
ಮುಂದೊದು ದಿನ
ಆದಾವು ಆಪದಗಳೇ
ನಿನ್ನ ಬಾಳಿಗೆ
ಬೆಳಕಿನ ದೀಪ
ಎತ್ತಲಿಂದೊ ಬಂದವ
ಕಷ್ಟಗಳ ಕಾಮರ್ೋಡಗಳು
ಅಲುಗಾಡದೆ ನಿಂತೆ
ಎದಯೊಡ್ಡಿ ಬಂಡೆಯಂತೆ
ಹಾಗೆಯೇ ಸರಿದು
ಹೋದವು ಕಾಮರ್ೋಡಗಳು
ತುಂಬು ಬೆಳಕನು
ಹರಡಿ.
ಎಂಥಹ ಮಾತುಗಳವು
ಉತ್ಸಾಹದ ಚಿಲುಮೆಗಳು.
 

‍ಲೇಖಕರು G

3 October, 2013

2 Comments

  1. ಡಾ.ಪ್ರಕಾಶ ಗ.ಖಾಡೆ

    ಬೆಳಕಿನ ದೀಪದಂತೆ ಬೆಳಗುವ ಕವಿತೆ,ಅಭಿನಂದನೆಗಳು.

    • pratibha kage

      dhanyavadagalu sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading