ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ಕಂಡ ಪೋಲಿಸ್

pratibha nandakumar riding bike

ಪ್ರತಿಭಾ ನಂದಕುಮಾರ್ 

ಒಂದ್ ಸಲ ಪರಿಚಯದ ಪೋಲಿಸ್ ಕಮಿಷನರ್ ಅವರ ಜೊತೆ ಮಾತಾಡುತ್ತಿದ್ದೆ.

ಅವರು ಬನ್ನಿ ಊಟ ಮಾಡ್ತಾ ಮಾತಾಡೋಣಾ ಅಂದರು.

ಪಕ್ಕದಲ್ಲೇ ಅವರ ಕ್ವಾರ್ಟರ್ಸ್. ಹೋದ್ವಿ. ಒಬ್ಬ ಕಾನ್ಸ್ಟೇಬಲ್ ಬಡಿಸಿದ. ಅವತ್ತು ಹೋಳಿಗೆ ಇತ್ತು. ತಿನ್ನಿ ತಿನ್ನಿ ಅಂತ ಅವರು ಉಪಚಾರ ಮಾಡಿದ್ರು.

ಅವನು ತುಪ್ಪ ಹಾಕುವಾಗ ಬಿಸಿ ತುಪ್ಪ ನನ್ನ ಕೈ ಮೇಲೆ ಬಿದ್ದು ಬಿಡ್ತು.

ಅದಕ್ಕೆ ಅವರು ‘ಸರಿಯಾಗಿ ನೋಡಿ ಬಡಿಸಕ್ಕಾಗಲ್ವೇನೋ ಲೋಫ಼ರ್, ಸೂಳೇ ಮಗನೆ, ಚಪ್ಪರ್, ನಾಲಾಯಕ್ ಸುವ್ವರ್ …’ ಅಂತ ಬೈದು ಎಂಜಲು ಕಯಲ್ಲೇ ಹೊಡಿಯಕ್ಕೆ ಹೋಗಿ ಅವನು ಹೆದರಿ ಒಳಗೆ ಹೋದ ಮೇಲೆ ನನಗೆ ‘ ನೀವು ತಿನ್ನಿ ತಿನ್ನಿ’ ಅಂತ ಹೇಳಿದರು.

ನಾನು ಹೆದರಿ ಇಡೀ ಹೋಳಿಗೇನಾ ಒಂದೇ ಸಲಕ್ಕೆ ಬಾಯಿಗೆ ಹಾಕಿಕೊಂಡು ನುಂಗಿಬಿಟ್ಟೆ.

‍ಲೇಖಕರು Admin

2 June, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading