ಅಮೀನ.ಮ.ಅತ್ತಾರ
ನನ್ನ ಭಾವನೆಗಳನೆ ಬಣ್ಣವಾಗಿಸಿಕೊಂಡು ಮೊಹಬ್ಬತನ ಚಿತ್ರ ಬಿಡಿಸಿದ ಸಖಿಯೆ ನೀನಧ್ಭುತ ಕಲಾವಿದೆ.
ಕಣ್ಣೋಟದಲೆ ಖೈದಿಯಾಗಿಸಿ ಮನದರಮನೆಯೊಳಗೆ ಒಲುಮೆಯ ಮಧುರ ಸಜೆ ನೀಡಿದ ವರದೇವತೆ
ನಿನ್ನ ಮೊಗದ ಕಿರಣವೊಂದು ಸೋಕಿ ಬರ್ಬಾದ್ ಬದುಕು ಬೆಳಗಿದೆ.
ತುಟಿಯಂಚಿನ ಕಿರುನಗೆಯ ಕಾಣಿಕೆಗೆ ದಿಲ್ನ ದರ್ದಿನ ಹಕ್ಕಿಗಳೆಲ್ಲ ದೂರ ಹಾರಿವೆ.
ಜಿಂದಗಿಯಲಿ ಜೊತೆಯಿರದ ಜೀವಗಳು ದೂರಸಾಗಿದ್ದು ಕಾಲಬರಹ
ಕನಸುಗಳಲೂ ತೂರಿ ಚೂರಿಯಂತಿರಿವ ನೆನಪುಗಳದು ಅಳಿಸದೆದೆಬರಹ
ಕಲ್ಲೆದೆಯ ಕರಗಿಸಿ ಒಲುಮೆಯುಕ್ಕಿಸಿ ಪ್ಯಾರನ ಪ್ಯಾರೆ ಪತಂಗ ಹಾರಿಸಿದಾಕೆ.
ಕನಸುಗಳ ಕಣ್ಣತೆರೆಸಿ ನೆಲದಲೆ ಜನ್ನತ ತೋರಿಸಿ ಮಾಯವಾದಾಕೆ
ಜೊತೆಯಿರದಿದ್ದರೇನು ಸಖಿಯೆ,
ನಿನ್ನೊಟ್ಟಿಗಿನೊಲುಮೆಯ
ಕ್ಷಣಗಳಚ್ಚು ಮನದಲಿ
ಗೋರಿವರೆಗೂ ಹೆಜ್ಜೆ ಮೂಡದ ಹಾದಿಯಂತೆ ಸದಾ ಸಂಗಾತಿ ಅಮೀನನೆದೆಯಲಿ.






Very nice….
blend of Kannada and Hindi, Urdu words give a newnwess to the poem..