ಸಹಸ್ರ ಲಿಂಗಗಳು
– ರಾಜು ಹೆಗ್ಡೆ
ಮುಳುಗುವ
ಯಾವಾಗಲೊ ಅರ್ಧಂಬರ್ಧ ಕಟೆದು
ಬಿಟ್ಟ
ಲಿಂಗಗಳು
ಚಳಿಯಲಿ
ತುಸು ಕಾಣುತ್ತಾ
ಬೇಸಿಗೆಯಲಿ
ಹೊಳೆಯುವವು
ಕಪ್ಪು ಕಾಡಿನ ನಡುವೆ
ಹರಿವ ಹೊಳೆ
ಎಲ್ಲೆಂದರಲ್ಲಿ ನಣುಪಾದ
ಕಲ್ಲುಗಳು
ಕಂಡ ಕನಸಿನಂತೆ
ಉಂಡ ಅನುಭವದಂತೆ
ಯಾಕೊ
ಪೂರ್ತಿಯಾಗಿ ಅರಳದೆ
ಅವ್ಯಕ್ತವಾಗಿರುವ ವಾಕ್ಯಗಳು
ಕಲ್ಲೂ ಆಗುಳಿಯದ
ದೇವರೂ ಆಗದ
ಹೊಳೆಯಲ್ಲಿರುವ ಅದರ ಪಾಡು
ಯಾರಿಗೂ ಬೇಡ, ದೇವರೆ!
[ಸಹಸ್ರಲಿಂಗ-ಇದುಸಿರ್ಸಿಯ ಸಮಿಪವಿರುವ ಯಾತ್ರಾ ಸ್ಥಳ. ಇಲ್ಲಿ ಪದ್ಯದಲ್ಲಿ ಹೇಳಿದ ರೀತಿಯ ಆಕಾರಗಳಿವೆ.]







0 Comments