ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೂರ್ಣಿಮಾ ಮಾಳಗಿಮನಿ ಕವಿತೆ- ಬದುಕು…

ಪೂರ್ಣಿಮಾ ಮಾಳಗಿಮನಿ

ಈ ಬಾವಿಯಲ್ಲಿ
ಇಳಿದಂತೆಲ್ಲಾ ಮೆಟ್ಟಿಲುಗಳು
ದೂಡಿದವರ ಹುಡುಕಲೋ
ತೋಡಿದವರ ಹುಡುಕಲೋ? ಕೈ
ಜೋಡಿಸಿದವರ ನೆನೆಯಲೋ?

ಬೆಳಕು ಕೆಳಗಿಳಿಯುವಂತಿಲ್ಲ,
ಕತ್ತಲು ಮೇಲೆ ಹೋಗುವಂತಿಲ್ಲ!
ಅಮ್ಮಾ…ಹಿಡಿದುಕೊಂಡೇ ಇರು
ತಮಾಷೆಯಲ್ಲ
ನಿಜವಾಗಿ ಹೆದರಿರುವೆ

ಬಾವಿಯ ಗೋಡೆಗೆ ಅಲ್ಲಲ್ಲಿ
ಹಾಸಿ ಕೊಂಡು ಹಸಿರು ಪಾಚಿ ಮಲಗಿದ
ಬಾಯಿಲ್ಲದ ಮುಖದವರು
ಬರಿಗೈಲಿ ಬಂದ ನನ್ನ ಕೊರಳಿಗೆ
ಬೆಣಚು ಕಲ್ಲು ಹಿಡಿದು
ನೀರು ಬೇಡುವರು;

ಕುತ್ತಿಗೆಯಿಂದ ಒಸರುವ ರಕ್ತ
ಕುಡಿಯುವ ಸಿಹಿ ನೀರ
ಕೆಂಪಾಗಿಸದಂತೆ ಹೀರಿಬಿಡುವರು
ಒಂದು ಹನಿ ನೋವು
ಅಂಗಿ ತೋಯಿಸಿದಾಗ ನೆನೆವೆ

ಇಲ್ಲಿ ಅಳುವವರು
ಕಲ್ಲಸಂದಿಯ ಕಪ್ಪೆಗಳು;
ಎಂಥ ಬೇನೆಯೂ ಬೆರಗಿನಂತೆ
ಮಾರ್ದನಿಸುವುದು
ಮೇಲಿಂದ ಇಣುಕುವವರಿಗೆ!

Pick by Michael Aboya

‍ಲೇಖಕರು Admin

20 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading