ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಬಿಡುಗಡೆಯೇ ಶಿವಗಣಾರಾಧನೆ

bharatadri

ಭರತಾದ್ರಿ ಆರ್ 

ದೇಜಗೌ ಇನ್ನಿಲ್ಲ.

ನನಗಂತೂ ತಂದೆಯ ಸ್ಥಾನದಲ್ಲಿದ್ದವರು ಈಗ ಶಾಶ್ವತವಾಗಿ ಮಾಯವಾಗಿದ್ದಾರೆ, ಆದರೆ ನೆನಪಿನ ನಿಧಿಯಿಂದಲ್ಲ.

ಅವರ ಅಗಲಿಕೆಯ ಸುದ್ದಿ ತಿಳಿದೊಡನೆ ನನ್ನ ನೆನಪಿನ ಸುರಳಿಸುತ್ತಿ ಬಿಚ್ಚಿಕೊಂಡಿದ್ದು ಹೀಗೆ:

೧೯೮೮ ರಲ್ಲಿ ನನ್ನ ಅಪ್ಪ ತೀರಿಕೊಂಡರು. ಆಗ ನನಗೆ ಅವರ ‘ ಶಿವಗಣಾರಾಧನೆ’ ನೆರವೇರಿಸುವ ಹೊಣೆ ಹೆಗಲೇರಿತು. ಸಂಪ್ರದಾಯದ ಈ ವಿಧಿಯನ್ನು ವಿಭೂತಿಪಟ್ಟೆ ಹೊಡೆದವರ ನಡುವೆ ನೆರವೇರಿಸಲು ನನಗೆ ಸುತರಾಂ ಇಷ್ಟವಿರಲಿಲ್ಲ. ಏಕೆಂದರೆ ನನ್ನಪ್ಪ ಜಾತಿ ಮೀರಿ ಬದುಕಿದ್ದರು. ದೇಜಗೌ ಗೆಳೆಯರಾದ ಅವರು ತಮ್ಮನ್ನು ವಯಸ್ಕರ ಶಿಕ್ಷಣದಲ್ಲಿ ತೊಡಗಿಸಿಕೊಂಡಿದ್ದರು.

oil lampನನ್ನ ಪುಣ್ಯಕ್ಕೆ ನನ್ನ ಅಪ್ಪ ಸಾಯುವ ಎರಡು ತಿಂಗಳ ಹಿಂದೆ ಡೆನ್ಮಾರ್ಕ್ ದೇಶಕ್ಕೆ ಭೇಟಿ ನೀಡಿದ್ದರು. ತಮ್ಮ ಡೈರಿಯಲ್ಲಿ ತಮ್ಮ ಅನುಭವವನ್ನು ದಾಖಲಿಸಿದ್ದರು. ಕೂಡಲೆ ನಾನು ಆ ಹಸ್ತಪ್ರತಿಯೊಡನೆ ದೇಜಗೌ ಅವರ ಬಳಿ ಧಾವಿಸಿದೆ.

ಅವರು ಹೇಳಿದರು,’ ನೀನು ನಿನ್ನ ಅಪ್ಪನ ತಿಥಿ ಮಾಡಬೇಡ. ಬದಲಿಗೆ ಇದನ್ನ ಪುಸ್ತಕರೂಪದಲ್ಲಿ ಪ್ರಕಟಿಸು. ಬಿಡುಗಡೆ ಸಮಾರಂಭಕ್ಕೆ ನಾನೇ ಬರುತ್ತೇನೆ. ಅದೇ ನಿಜವಾದ ಶಿವಗಣಾರಾಧನೆ. ನಿನ್ನಪ್ಪನ ಆತ್ಮ ನಿಜಕ್ಕೂ ನಿನ್ನನ್ನು ಹರಸುತ್ತದೆ’. ನಾನು ಹಾಗೇ ಮಾಡಿದೆ. ಸಾವಿರ ಜನ ನೆರೆದಿದ್ದರು. ದೇಜಗೌ ನನ್ನಪ್ಪನ ಬಗ್ಗೆ ಆಡಿದ ಪ್ರೀತಿಯ ನುಡಿ ಕೇಳಿ ಊಟಮಾಡಿ ತೆರಳಿದರು. ಇದನ್ನ ಹೇಗೆ ಮರೆಯಲಿ?

ದೇಜಗೌ ನನ್ನ ಪ್ರಜ್ಞೆಯ ಅವಿಭಾಜ್ಯ ಅಂಗ. ಅಗಲಿದ ಅವರ ಚೇತನಕ್ಕೆ ನನ್ನ ನಮ್ರ ನಮನ.

‍ಲೇಖಕರು Admin

31 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading