ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುರಾವೆ ನೀಡಬೇಕಿಲ್ಲ..

 ಡಾ. ಪದ್ಮಿನಿ ನಾಗರಾಜು

 

ಮನಸು ಒಣಗಿ

ತರಗೆಲೆಯಾದಾಗ

ಮರಭೂಮಿಯ ಒರತೆ

ಜಿನುಗಲಾರಂಭಿಸಿದಾಗ

ಚರ್ಮ ಮಾತಾಡುತ್ತದೆ

 

ಅವನ ಸ್ಪರ್ಶಕ್ಕೆ

ತುಟಿಯ ಸೊಂಕಿಗೆ

ಹೃದಯದಲ್ಲೊಂದು

ಚಿಲುಮೆ ಚಿಮ್ಮಿ

ಪಾತಾಳಕ್ಕಿಳಿಯಲು

ಪರಿತಪಿಸುತ್ತಿದೆ

 

ಕಣ್ಣುಗಳ ಮಿಲನ

ತುಟಿಗಳ ಅದರುವಿಕೆ

ಮೈಯ ಬಿಸಿಯ

ಉಸಿರು ತಾಕಿ

ಹೃದಯದ ಬಡಿತ

ಹೊರಗೂ

ನಗಾರಿಯಾಗಿದೆ

ಹೊಕ್ಕುಳಲ್ಲಿ

ಅದೇನೋ ಭಯ

ಸ್ಖಲನ

ಸುಖವೋ

ಮತ್ತೊಮ್ಮೆ

ಗರ್ಭಗಟ್ಟುವ

ಭಯವೋ

 

ತನುವಿಗೂ ಮನಕ್ಕೂ

ಲೆಕ್ಕ ತಪ್ಪಿದಾಗ

ಸರಿ ತಪ್ಪುಗಳ

ಗುಣಿತ ದೂರಮಾಡಿ

ಅವನು ನಾನು

ನಾವಾಗುವ

ಕ್ಷಣವು

ಸ್ವರ್ಗವೋ

ನರಕವೋ

 

ತೆಕ್ಕೆಯಲ್ಲಿ

ಜಕೈಸಿದಷ್ಟು

ಕ್ಷಣ

ಜಗವ

ಜಯಿಸಿದ ಭಾವ

ಶೂನ್ಯವೋ

ಯುಗಾಂತರವೋ

 

ಅವಳು ಅವನು

ಯಾರ

ಗಂಡ ಹೆಂಡಿರೆಂಬ

ಪುರಾವೆ ನೀಡಬೇಕಿಲ್ಲ

ಹೆಣ್ಣೊ ಗಂಡೊ

ಸಾಕ್ಷಿ ನೀಡಬೇಕಿಲ್ಲ

ಅವರು

ತಮ್ಮದೆಲ್ಲವ

ಕಳಚಿ

ಬತ್ತಲಾದಂತೆ

ಅವರಿಗೆ

ಅವರೇ ಆಧಾರ

‍ಲೇಖಕರು avadhi

28 February, 2020

4 Comments

  1. Dr. H. Lakshmi Narayana Swamy

    Nice poem medam

  2. Branhiladevi

    Down to earth

  3. ರಾಜು ಹೆಚ್.ಎಸ್

    ಮನಸ್ಸಿನ ಭಾವನೆಗಳ ಕೈಗನ್ನಡಿ ಈ ಕವಿತೆ. ಚೆನ್ನಾಗಿದೆ ಮೇಡಂ

  4. T S SHRAVANA KUMARI

    ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading