ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪುಟ್ಟನ ಹೊಸ ನಿಕ್ಕರು' – ಮಕ್ಕಳ ಪದ್ಯ

– ಅಕ್ಕಿಮಂಗಲ ಮಂಜುನಾಥ


ತರೋವರೆಗೂ ಹೊಸ ನಿಕ್ಕರು
ನಾನು ಶಾಲೆಗೆ ಚಕ್ಕರು
ಎಂದು ನಮ್ಮ ಪುಟ್ಟ
ಹಟವ ಮಾಡಿ ಬಿಟ್ಟ
 
ಅಪ್ಪ ನಿಕ್ಕರು ತಂದ
ಬಣ್ಣ ಕಣ್ಣಿಗೆ ಚಂದ
ಗೆಳೆಯರಿಗೆಲ್ಲಾ ತೋರಿಸಿ ಇದನು
ಉಬ್ಬಲು ಯೋಚನೆ ಮಾಡಿದನು
 
ಅವಸರದಲ್ಲಿ ಅಂಗಿ ತೊಟ್ಟ
ನಿಕ್ಕರ್ ತೊಡದೆ ಹೊರಟೇ ಬಿಟ್ಟ
ಊರ ಬೀದಿ ಗುಂಟ
ಜಂಬದಿ ಈ ಪುಟ್ಟ
 
ಹಾಗೇ ಸುತ್ತಿದ ಗಲ್ಲಿ ಗಲ್ಲಿ
ಜನ ನಿಂತಿದ್ದ ಬೀದಿಗಳಲ್ಲಿ
ನಗುತಾ ಇದ್ದರು ನೋಡುತ ಎಲ್ಲಾ
ಇವನಿಗೆ ಗಣನೆಗೆ ಬರಲೇ ಇಲ್ಲ
 
ಗೆಳೆಯರ ಮುಂದೆ ಜನಗಳ ಮುಂದೆ
ತೋರಿಸುತ್ತಿದ್ದ ಹೊಸ ನಿಕ್ಕರ್ ಎಂದೆ
ಊರನ್ನೆಲ್ಲಾ ಸುತ್ತಿ ಸುಳಿದು
ಮನೇಗೆ ಬಂದ ಹೊತ್ತನು ಕಳೆದು
 
ನೋಡುತ್ತಾನೆ ಗೂಟದ ಮೇಲೆ
ನಗುತಾ ಇತ್ತು ನಿಕ್ಕರ್ ಅಲ್ಲೇ
ಬಗ್ಗಿ ನೋಡಿದನು ಪುಟ್ಟನು ಆಗ
ನಾಚಿಕೆಯಾಗಿ ತೊಟ್ಟನು ಬೇಗ.
 

‍ಲೇಖಕರು G

3 October, 2014

2 Comments

  1. Arathi ghatikar

    Puttana mugdhate saralavaagi bimbithavagide .

  2. mahesh kalal

    wwwwwwwwwwwwwwwwwwwwwwwwwwwwwwwww

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading