ಪುಟ್ಟಣ್ಣ ಕಣಗಾಲ್ ಟಿ ಎನ್ ಸೀತಾರಾಮ್‌ರನ್ನು ಚಿತ್ರಕಥೆ ಬರೆಯಲು ಕೇಳಿದಾಗ

ಟಿ ಎನ್ ಸೀತಾರಾಮ್

ನನ್ನ ಆಸ್ಫೋಟ ನಾಟಕದ ನೂರನೆಯ ಪ್ರದರ್ಶನ ಮದ್ರಾಸ್ ನಲ್ಲಿ ನಡೆಯಿತು… ಪ್ರೇಕ್ಷಕರಿಗೆ ಯಾವಾಗಲೂ ಇಷ್ಟವಾಗುತ್ತಿದ್ದ ನಾಟಕ ಅದು…ಅಂದಿನ ರಾಜಕೀಯದ ಹಿನ್ನೆಲೆಯಲ್ಲಿ ಬರೆದ ನಾಟಕ… ನಾನೇ ಮುಖ್ಯ ಪಾತ್ರ ವಹಿಸಿದ್ದು…
ನಾನು ಮೇಕ್ಅಪ್ ತೆಗೆಯುತ್ತಿದ್ದಾಗ “ಯಾರೋ ಸೀತಾರಾಮ್ ಎನ್ನುವವರು ನಿಮಗೋಸ್ಕರ ಕಾಯುತ್ತಿದ್ದಾರೆ ” ಎಂದು ನಾಗೇಶ್ ಹೇಳಿದರು… ಈ ಊರಿನಲ್ಲಿ ನನ್ನ ಹೆಸರಿನ ವ್ಯಕ್ತಿ ಯಾರು ಹುಡುಕಿಕೊಂಡು ಬಂದಿರುವುದು ಎಂದು ನೋಡಿದರೆ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರು… ಅವರ ನಿಜವಾದ ಹೆಸರೂ ಕೂಡ ಸೀತಾರಾಮ್… ಅದು ಎರಡನೇ ಬಾರಿ ನಾನು ಅವರನ್ನು ನೋಡಿದ್ದು…. (ಮೊದಲನೆಯ ಬಾರಿ ನೋಡಿದ್ದು ಅತ್ಯಂತ ತಮಾಷೆಯ ಘಟನೆ… ಲಂಕೇಶ್ ಮೇಷ್ಟ್ರ ಮನೆಯಲ್ಲಿ)
“ನಾಟಕ ಅದ್ಭುತ ವಾಗಿತ್ತು… ನಾಳೆ ನಮ್ಮ ಮನೆಗೆ ಊಟಕ್ಕೆ ಬನ್ನಿ… ಮಾತಾಡೋಣ” ಎಂದರು… ಅವರು ಇನ್ನೂ ಬೆಂಗಳೂರಿಗೆ ಶಿಫ್ಟ್ ಆಗಿರಲಿಲ್ಲ… NTR ಅವರ ಎದುರು ಮನೆ…


ಅವರ ಬದುಕಿನ ದ್ರೋಹಗಳು, ತಮಾಷೆಗಳು, ಚಿತ್ರರಂಗದ ಘಟನೆಗಳು… ಆರತಿ ಮತ್ತು ಅವರು ದೂರವಾದದ್ದು….. ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುವುದರಲ್ಲಿ ಅವರು ಅನನ್ಯ… ಅರ್ಧ ಗಂಟೆಗೆಂದು ಹೋದವರು ನಾಲ್ಕು ಗಂಟೆಯ ಕಾಲ ಊಟದ ತಟ್ಟೆಯ ಮುಂದೆ ಕೈ ಕೂಡ ತೊಳೆದುಕೊಳ್ಳದೇ ಕೂತಿದ್ದೆವು -ಅಷ್ಟು ಅದ್ಭುತವಾಗಿತ್ತು ಅವರ ನೆನಪುಗಳು…..
ನಾವು ಹೊರಟು ನಿಂತಾಗ ಕೇಳಿದರು ” ಆರತಿ ಪ್ರಕರಣವಾಗಿ , ಹಾರ್ಟ್ ಅಟ್ಯಾಕ್ ಆದ ನಂತರ ನಾನು ಒಂಟಿ ಆಗಿದ್ದೇನೆ… ನಾನು ಅಕಸ್ಮಾತ್ ಚಿತ್ರ ತೆಗೆದರೆ ನೀವು ಚಿತ್ರಕಥೆ ಸಂಭಾಷಣೆ ಬರೆದುಕೊದುತ್ತೀರಾ ” …… ಅವರ ಕಣ್ಣಲ್ಲಿ ನೀರು ತುಂಬುತ್ತಿರುವಂತೆ ಅನಿಸಿತು… ಅವರ ಪತ್ನಿ ಕೂಡ ಅಲ್ಲೇ ನಿಂತಿದ್ದರು… ಅವರ ಕಣ್ಣಲ್ಲೂ ನೀರಿತ್ತು…
ಕೆಲವೇ ದಿನಕ್ಕೆ ಚಿತ್ರ ತೆಗೆದರು….. ಅದೇ ಪುಟ್ಟಣ್ಣನವರಿಗೆ ಮರುಜನ್ಮ ಕೊಟ್ಟ ಚಿತ್ರ “ಮಾನಸ ಸರೋವರ”
ಅವರಿಂದ ಹೆಣ್ಣಿನ ಭಾವಲೋಕವನ್ನು ಚಿತ್ರಿಸುವ ಬಗೆಯನ್ನು ಕಲಿತೆ… ಸಂಭಾಷಣೆ ಬರೆಯುವ ರೀತಿ ಕಲಿತೆ… ಸಂಭಾಷಣೆ ಹೇಳಿಕೊಡುವ ರೀತಿ ಕಲಿತೆ… ನನ್ನ ಮಹಾಗುರು ಅವರು…. ನಿನ್ನೆ ಅವರು ಹುಟ್ಟಿದ ದಿನ… ಈಗ ನೆನಪಿಗೆ ಬಂತು…
ಅತ್ಯಂತ ಅಶ್ಲೀಲ ಸನ್ನಿವೇಶಗಳು ಇರಬಹುದಾಗಿದ್ದ” ಎಡಕಲ್ಲು…. ” ಚಿತ್ರದಲ್ಲಿ ಒಂದೇ ಒಂದು ಅಸಭ್ಯ ಫ್ರೇಮ್ ಇರಲಿಲ್ಲ… ಅಷ್ಟು ಸೂಕ್ಷ್ಮವಾಗಿ ಚಿತ್ರಿಸಿದ್ದರು… ಪ್ರೀತಿ ಮತ್ತು ಮೋಹದ ಮಧ್ಯೆ ವ್ಯತ್ಯಾಸ…. ಮೋಹ ಮತ್ತು ಕಾಮದ ಮಧ್ಯೆ ವ್ಯತ್ಯಾಸ…. ಈ ಸೂಕ್ಸ್ಮಗಳನ್ನು ಅನನ್ಯವಾಗಿ ಚಿತ್ರಿಸಬಲ್ಲ ಅಪರೂಪದ ನಿರ್ದೇಶಕರಲ್ಲಿ ಮುಖ್ಯರು…… ಎಂಥೆಂಥಹ ಅದ್ಭುತ ಚಿತ್ರಗಳು… !!
ನನ್ನ ಮಹಾ ಗುರುವಿಗೆ ಮತ್ತೊಮ್ಮೆ ವಂದನೆ
 

‍ಲೇಖಕರು G

December 3, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Beluru Raghunandan

    ಹೌದು ಸರ್…ಈ ಭಾವಲೋಕವೇ ಹೀಗೇ ಏನಲ್ಲಾ ಕಲಿಸಿಕೊಡುತ್ತೆ ಹಾಗೂ ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಆಳಕ್ಕೆ ಇಳಿದುಬಿಡುತ್ತದೆ. ಎಡಕಲ್ಲುಗುಡ್ಡ ಚಿತ್ರ ಕನ್ನಡಕ್ಕೆ ಅರ್ಥಪೂರ್ಣ ಅಭಿವ್ಯಕ್ತಿ ಮಾನಸ ಸರೋವರ ಕೂಡ. ಗುರು ಮತ್ತು ಶಿಷ್ಯತ್ವದ ನಡುವಿನ ಕಲಿತ ಕಲಿಕೆ ಮತ್ತು ಗ್ರಹಿಕೆ ಮುಖ್ಯವಾಗಿ ಅಭಿವ್ಯಕ್ತಿ ಅನಾವರಣ ಇರುವ ಕಲಾ ಪ್ರಕಾರಗಳಲ್ಲಿ ಇವರಿಂದ ಕಲಿತೆ ಪ್ರಭಾವಗೊಂಡೆ ಅಂತ ಹೇಳಿಕೊಳ್ಳುವವರು ತೀರಾ ಕಡಿಮೆ. ಕಲಿತು ಗ್ರಹಿಸಿ ಏನೆಲ್ಲಾ ಹೀರಬೇಕೋ ಅದನ್ನೆಲ್ಲಾ ಹೀರಿಕೊಂಡು ಎದೆ ಮೇಲೆ ನಡೆಯೋ ಜನ ನಮ್ಮ ನಡುವೆ ಇರುವಾಗ ಟಿ.ಎನ್. ಎಸ್ ಅಂಥಹವರು ಯುವ ತಲೆಮಾರಿಗೆ ಬಹಳ ಮುಖ್ಯರಾಗಿ ಕಾಣುತ್ತಾರೆ… ಗೌರವ ಗುಣ ಗ್ರಹಿಕೆ ಕಲಿಕೆ ಅಭಿವ್ಯಕ್ತಿ ಪರಂಪರೆಗಳ ಅರ್ಥಪೂರ್ಣ ಬರೆಹ.

    ಪ್ರತಿಕ್ರಿಯೆ
  2. M A Sriranga

    ಕನ್ನಡ ಚಲನಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಇದ್ದ ಮೂರ್ನಾಲಕ್ಕು ನಿರ್ದೇಶಕರಲ್ಲಿ ಪುಟ್ಟಣ ಕಣಗಾಲ್ ಅವರದ್ದು ಪ್ರಥಮ ಸ್ಥಾನ. ಅವರ ನಂತರ ಅದು ಇಂದಿಗೂ ಖಾಲಿಯಾಗೇ ಇದೆ. ಅವರ ಚಿತ್ರಗಳ ವಾಲ್ ಪೋಸ್ಟರ್ ಗಳಲ್ಲಿ “ಪುಟ್ಟಣ ಕಣಗಾಲ್ ಚಿತ್ರಿಸಿರುವ” ………….. ಚಿತ್ರ ಎಂದು ಇರುತ್ತಿತ್ತು. ಇಂದು ಆ ಶಕ್ತಿ,ಪ್ರತಿಭೆ,ಧೈರ್ಯ ಯಾರಿಗಿದೆ? ಈಗೇನಿದ್ದರೂ ಬಾಸ್,ಬಿಗಬಾಸ್, ಇತ್ಯಾದಿ ಬಿರುದಾಂಕಿತ ನಾಯಕ ನಟಿಸಿರುವ………. ಚಿತ್ರ ಎಂದು ಆ ನಟರ ನಾಮ ಬಲದ ಮೇಲೆ ಚಿತ್ರಗಳು ಓಡಬೇಕು ಇಲ್ಲ ಓಡಿಸಬೇಕು!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: