ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಟ್ಟಕ್ಕ

ಶ್ರೀಕಾಂತ್ ಪ್ರಭು 

ಪುಟ್ಟದೊಂದು ತಾಯಿ ಪುಟ್ಟಕ್ಕ ಅವಳು.

ಕೆಮೆರಾ ಕಣ್ಣೆದುರು ಹಾದ ಜೋಡಿಯಲ್ಲಿ ಜೋರು ಗದ್ದಲ ಅಡಂಬರವಿರಲಿಲ್ಲ.

ದಿನಚರಿಯ ದಿನ ನಿತ್ಯದ ಪಾಡು.ಯಾವುದೂ ಬದಲಾಗುವ ಸಾಧ್ಯತೆಗಳಿಲ್ಲ.ಆದರೂ ತುಂಬದ ಪ್ರೀತಿ, ಸಹನೆ, ತಾಳ್ಮೆ, ಬೆರಗು, ನಿರೀಕ್ಷೆ.

ಬಟ್ಟಲುಗಣ್ಣ ಮುಂದೆ, ತೆರೆಯುವ, ತೆರೆದ, ತೆರೆದಿಟ್ಟ ದಾರಿಗಳ ಮೇಳ ಹುಟ್ಟುತ್ತ ಬೆಳೆಯುತ್ತಿದೆ.

ಅಗೋಚರ ಪಯಣಕ್ಕಾಗಿ ಇನ್ನೊಂದು ಹೊಸ ತಯಾರಿ.

ಎಲ್ಲ ಹೊತ್ತ ಆ ಪುಟ್ಟ ಜೀವಕ್ಕೆ ಎದೆ ಬಡಿತದ ಬೆಚ್ಚಗಿನ ಒಳ ಸೆಲೆ. ಪುಟ್ಟಕ್ಕನಿಗೊಂದು ಪುಟ್ಟ, ದೊಡ್ಡ ಸಲಾಂ.

‍ಲೇಖಕರು Avadhi

25 December, 2016

1 Comment

  1. T.K.Gangadhar Pattar

    “ಎಂದುರೋ ಮಹಾನುಭಾವುಲು ಅಂದರಿಕಿ ವಂದನಂ…” ಇಂತಹ “ಪುಟ್ಟಕ್ಕ”ರು ಎಲ್ಲೆಲ್ಲಿ ಎಷ್ಟೆಷ್ಟು ಇದ್ದಾರೋ ಬಲ್ಲವರಾರು. ನಾಡೋಜ ಚೆನ್ನವೀರ ಕಣವಿಯವರು ಹೇಳುವಂತೆ “….ಎಳೆಯಕಂಗಳಲಿ ಹೊಳೆವ ತಿಂಗಳ ಬೆಳಕು/ ದಿನದ ದಾರಿಯೊಳೆಮಗೆ ದೀಪಧಾರಿ//” ಈ ಭವದ ದಿಟ “ದೀಪಧಾರಿ”ಗಳಾಗಿರುವ ಆ ಎಲ್ಲ “ಪುಟ್ಟಕ್ಕ”ರಿಗೂ ನನ್ನ ದೊಡ್ಡ ಸಲಾಂ..!
    -ಟಿ.ಕೆ.ಗಂಗಾಧರ ಪತ್ತಾರ. 07.01.2017

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading