ಪಿ ಪಿ ಉಪಾಧ್ಯ ಕವಿತೆ – ಜೀವನದಾಟ…

ಪಿ ಪಿ ಉಪಾಧ್ಯ

ಸಾವಿರ ಬೆಳಗನು ಕಂಡಿಹ ಜೀವಕೆ
ಬೆಳಕದು ಕಣ್ಣಿಗೆ ಬೀಳಲೇ ಇಲ್ಲ.

ಬದುಕಿನ ಚಿತ್ರವು ಎದುರಿಗೆ ಇದ್ದರು
ಬಾಳುವ ಹಾದಿ ಕಾಣಿಸಲೇ ಇಲ್ಲ

ಜೀವನದಾಸೆಯು ಮನ ತುಂಬಿದರೂ
ಕನಸಿನಿಂದೀಚೆಗೆ ಬರಲೇ ಇಲ್ಲ

ದೇವರ ಗುಡಿಗಳೇ ಊರಲ್ಲೆಲ್ಲ
ದೇವರು ಮಾತ್ರ ಎಲ್ಲೂ ಇಲ್ಲ

ಪ್ರಾರ್ಥನೆ ಪೂಜೆ ದಿನ ಬೆಳಗೆಲ್ಲ
ಸಿಕ್ಕಿದ್ದೊಂದೇ ಒಣ ಹೂವಿನ ಎಸಳು

ಸಂಬಂಧಿಕರೇ ಸುತ್ತಿಹರೆಲ್ಲೂ
ಸಂಬಂಧವು ಅದು ಮರೀಚಿಕೆಯೇ

ಸುತ್ತ ಮುತ್ತಲೂ ಗೆಳೆಯರ ಬಳಗ
ಗೆಳೆತನ ಮಾತ್ರ ಮಾಯಾ ಮೃಗವೇ

ಪ್ರೀತಿ ಪ್ರೇಮದ ಬೊಬ್ಬೆಯೇ ಹೊರತು
ಪ್ರೀತಿಸೋ ಪ್ರೇಮಿಯ ಸುದ್ದಿಯೇ ಇಲ್ಲ

ಸುಖ ಜೀವನವನು ಬಯಸಿದ್ದಷ್ಟೇ
ವಾಸ್ತವ ಬದುಕಲಿ ಬರೀ ನರಳಾಟ

ಸಿರಿ ಸಂಪತ್ತಿಗೆ ಹೋರಾಡಿದ್ದೇನು
ಅಂತಿಮವಾಗಿ ಸಿಕ್ಕಿದ್ದೇ ಸೊನ್ನೆ

ಬದುಕಿನ ಪಯಣದ ದಾರಿಯಲೆಲ್ಲ
ಸಂತಸವೆಂದೂ ಕೈಗೆಟುಕದ ಆಟ

ಎಲ್ಲವ ತಿಳಿದೂ ಬದುಕುವ ನಾವು
ಎಂದೂ ಸಹಿಸೆವು ಸಾವಿನ ದುಃಖ

ಇದು ದಿನ ಬೆಳಗಿನ ಜೀವನದಾಟ
ವಿಧಿ ತಾನೇ ಹೂಡಿದ ಹೂಟ

‍ಲೇಖಕರು Admin

March 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: