ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿಳ್ಳೆ ನೆವ

ಸಂಗಮೇಶ ಸಜ್ಜನ

ಅಮ್ಮ ನನ್ನ ಬಯ್ಯಬೇಡಮ್ಮ 
ನನ್ನದೇನು ತಪ್ಪು ಇಲ್ಲಮ್ಮ 
ಬೇಕು ಅಂತ ಮಾಡಿಲ್ಲ ಮನ 
ಬೆಕ್ಕು ಅಡ್ಡಿ ಬಂದಿತ್ತು ಕ್ಷಣ 
ಯಾರೋ ಪುಣ್ಯಾತ್ಮ ತಿಂದ ಫಲ 
ನನ್ನನ್ನು ಕಚ್ಚಿಸಿತಲ್ಲ ಆಗ ನೆಲ 
ಅಳುತ್ತ ಕೂತೆ ಒಂದೇ ಕ್ಷಣ 

ಕಣ್ಣಲ್ಲಿನ ನೀರು ಮಳೆಯ ರಣ
ಹೇಗೋ ಒಮ್ಮೆ ಡುಮ್ಮ ಬಂದ
ನನ್ನನ್ನೊಮ್ಮೆ ಸಮಾಧಾನ ಮಾಡಿ ಹೋದ
ಹೊಟ್ಟೆ ಯಾಕೋ ಚುರುಚುರು ಅಂತಿತ್ತು
ಗೊನೆಯ ಬಾಳೆಹಣ್ಣು ನನ್ನನ್ನೇ ನೋಡುತಿತ್ತು 

ನಾನು ತಿಂದು ಎಸೆದ ಫಲ 
ನಿನ್ನನ್ನು ಕಚ್ಚಿಸಿತು ಅದೇ ನೆಲ 
ಆಗ ಬಂದಿತು ನಿನ್ನಲ್ಲಿ ಬಲ 
ನಿನ್ನ ನೋಡಿ ಹೆದರಿತು ಬಾಲ 
ನೀನು ಬಹಳ ಪ್ರೀತಿಯಿಂದ ಜೋರು 
ನಮಗೆಲ್ಲ ಆಗಿರುವೆ ಪ್ರೀತಿಯ ಸೂರು.

‍ಲೇಖಕರು Avadhi

22 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading