ಪಲ್ಲವ ಪ್ರಕಾಶನ ಪ್ರಕಟಿಸಿರುವ ಕುದರಿ ಮಾಸ್ತರ ಕಥಾಸಂಕಲನ ಏಪ್ರಿಲ್ 14ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ಸಾಂಸ್ಕೃತಿಕ ಸಮುಚ್ಛಯ (ರಂಗಾಯಣ ಆವರಣ) ದಲ್ಲಿ ಬಿಡುಗಡೆಯಾಗಲಿದೆ. ಕಥೆಗಾರ ಡಾ. ಅಮರೇಶ ನುಗಡೋಣಿ ಪುಸ್ತಕ ಕುರಿತು ಮಾತಾಡುವರು. ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಸಂವೇದನೆಯ ಹವನ ಕಾದಂಬರಿ ಕೊಟ್ಟ ಹಿರಿಯ ಸಾಹಿತಿ ಪ್ರೊ. ಮಲ್ಲಿಕಾರ್ಜು ನ ಹಿರೇಮಠ ಅಧ್ಯಕ್ಷತೆ ವಹಿಸುವರು.ಪಲ್ಲವ ವೆಂಕಟೇಶ ಉಪಸ್ಥಿತರಿರುವರು. ಕಥಾ ಸಂಕಲನ ಬಿಡುಗಡೆಯ ಜೊತೆಗೆ ಸ್ವರಚಿತ ಕಥಾಗೋಷ್ಠಿ ಕೂಡ ನಡೆಯಲಿದ್ದು, ಸುನಂದಾ ಕಡಮೆ, ಡಾ.ವಿನಯಾ, ವಿ.ಆರ್.ಕಾರ್ಪೆಂಟರ್, ಡಾ.ಬಸು ಬೇವಿನಗಿಡದ, ಮಹಾಂತೇಶ ನವಲಕಲ್, ಮುದಿರಾಜು ಬಾಣದ ಸ್ವರಚಿತ ಕಥೆ ವಾಚನ ಮಾಡುವರು.







ವೆಂಕಟೆಶ್ ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಿರಿ. ಗೊರವರ ಅಭಿನಂದನೆಗಳು
Congrats geleya