ಪರೀಕ್ಷೆಯೂ ಇಲ್ಲ… ಪೆನ್ನೂ ಸಿಗ್ತಿಲ್ಲ…

ಶಿವಕುಮಾರ್ ಮಾವಲಿ

ಇಂದು ಮಧ್ಯಾಹ್ನ ಮೌಲ್ಯಮಾಪನಕ್ಕೆ ಅವಶ್ಯವಿದ್ದ ಕೆಂಪು ಶಾಯಿಯ ಪೆನ್ನು ಕೊಳ್ಳೋಣವೆಂದು ಹೋಗಿದ್ದೆ. ಮನೆಯ ಅಕ್ಕಪಕ್ಕದ ರಸ್ತೆಯಲ್ಲಿರುವ ಅನೇಕ ಅಂಗಡಿಗಳಲ್ಲಿ ವಿಚಾರಿಸಿದರೂ ಪೆನ್ನು ಇಲ್ಲ ಎಂಬುದನ್ನು ತೀರ ಅಸಡ್ಡೆಯಿಂದ ಹೇಳಿದ್ದನ್ನು ಗಮನಿಸಿದೆ. ಮೊದಲೆಲ್ಲ ಬೇಕರಿ- ಕಾಂಡಿಮೆಂಟ್ಸ್ ಗಳಲ್ಲಿ, ಮೆಡಿಕಲ್ ಶಾಪ್ ಗಳಲ್ಲಿ, ಸಣ್ಣ ತರಕಾರಿ ಮತ್ತು ಕಿರಾಣಿ ಮಾರುವ ಅಂಗಡಿಗಳಲ್ಲಿ, ನಾವಲ್ಟೀಸ್ ಗಳಲ್ಲಿ, ಹಾಲು ತರಕಾರಿ ಮಾರುವ ಸಣ್ಣ ಅಂಗಡಿಗಳಲ್ಲಿ, ಬೀಡ ಅಂಗಡಿಗಳಲ್ಲಿಯೂ ಸಿಗುತ್ತಿದ್ದ ಪೆನ್ನುಗಳು ಈಗೀಗ ಅಲ್ಲಿ ಸಿಗುವುದು ಅಪರೂಪವಾಗಿಬಿಟ್ಟಿದೆ.

ಕೆಲವು ಕಡೆ ಪೆನ್ನುಗಳಿದ್ದರೂ ಕೆಂಪು ಶಾಯಿಯ ಪೆನ್ನು ಕೇಳಿದಾಕ್ಷಣ ಗದರಿಸುವಂತೆ ನೋಡುತ್ತಾರೆ. ನಾನು ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲಾ ಅಂಗಡಿಗಳಲ್ಲೂ ಕೆಂಪು ಮತ್ತು ನೀಲಿ ಶಾಯಿಯ ಪೆನ್ನುಗಳು ಸರ್ವೇ ಸಾಮಾನ್ಯವಾಗಿ ಸಿಗುತ್ತಿದ್ದವು.

ಆದರೀಗ ಡಿಜಿಟಲ್ ಯುಗದಿಂದಾಗಿ ಲೇಖಕರು ಕೂಡ ಲೇಖನಿ ಬಳಸದೇ ಮೊಬೈಲ್, ಲ್ಯಾಪ್ ಟಾಪ್ ಗಳಲ್ಲಿ ನೇರವಾಗಿ ಬರೆಯುವುದನ್ನು ರೂಢಿಸಿಕೊಂಡಿರುವುದು ಸಾಮಾನ್ಯ ಸಂಗತಿ… (ನಾನು ಕೂಡ ನನ್ನ ಒಂದು ಇಡೀ ಪುಸ್ತಕವನ್ನು ಮೊಬೈಲನಲ್ಲೇ ಬರೆದು ಗರ್ವ ಪಟ್ಟಿದ್ದೆ) ಕಳೆದ ಒಂದೂವರೆ ವರ್ಷದಿಂದ ಲಾಕ್ ಡೌನ್ ನಲ್ಲಿರುವ ಬರಹಗಾರರು, ಲೇಖಕರು ಬಿಡುವಿರುವ ಕಾರಣಕ್ಕೆ ಸಿಕ್ಕಾಪಟ್ಟೆ ಓದಿ, ಅಷ್ಟೇ ಬರೆದರು ಎಂಬುದು ಸತ್ಯ.

ಅವರು ಅಷ್ಟೆಲ್ಲ ಬರೆದರೂ ಪೆನ್ನುಗಳು ಮಾತ್ರ ಹೆಚ್ಚೆಚ್ಚು ಮಾರಾಟವಾಗಿಲ್ಲ ಎಂದರೆ ಅವರೆಲ್ಲ ಹೆಚ್ಚಾಗಿ ಮೊಬೈಲ್ ಮತ್ತು ಕಂಪ್ಯೂಟರ್ ನಲ್ಲಿ ಬರೆದಿದ್ದಾರೆ ಎಂದಾಯಿತು… ಅದೂ ಅಲ್ಲದೆ ಕಳೆದೊಂದು ವರ್ಷದಿಂದ ಪರೀಕ್ಷೆಗಳು ನಡೆದದ್ದು ಕಡಿಮೆ. ಆನ್ ಲೈನ್ ಶಿಕ್ಷಣದಿಂದಾಗಿ ಪರೀಕ್ಷಾ ವಿಧಾನವೂ ಗೂಗಲ್ ಕ್ಲಾಸ್ ರೂಂ ಗೆ ವರ್ಗಾವಣೆಯಾಗಿದೆ.

ಈ ವರ್ಷವಂತೂ ಬಹುತೇಕ ಪರೀಕ್ಷೆಗಳು ರದ್ದಾಗಿವೆ. ಹಾಗಾಗಿ ಪರೀಕ್ಷೆ ಬರೆಯಲು ಅವಶ್ಯವಿದ್ದ ಪೆನ್ನುಗಳನ್ನು ಕೊಳ್ಳಲು ಮಕ್ಕಳಾದರೂ ಏಕರ ಮುಗಿಬಿದ್ದಾರು ಅಲ್ಲವೆ ? ಇನ್ನು ಪರೀಕ್ಷೆಗಳೇ ಇಲ್ಲ ಅಂದಮೇಲೆ ಅವುಗಳ ಮೌಲ್ಯಮಾಪನಕ್ಕೆ ಅಗತ್ಯವಿದ್ದ ‘ಕೆಂಪು ಶಾಯಿ’ಯ ಪೆನ್ನುಗಳಿಗೆ ಬೇಡಿಕೆ ಎಲ್ಲಿಂದ ಬರಬೇಕು ಅಲ್ಲವೆ?

ಅವುಗಳನ್ನು ಮಾರುವವರು, ಉತ್ಪಾದಿಸುವವರು, ಪರೀಕ್ಷೆ ಇರುವುದರಿಂದ ಪಾಠ, ಪಾಠ ಇರುವುದರಿಂದ ಹಲವರ ಜೀವನ, ಪರೀಕ್ಷೆ ಬರೆದು ಅದರಿಂದೇನೂ ಬಹುವಾಗಿ ಉಪಯೋಗವಿಲ್ಲದೆಯೂ ಜೀವನವೆಂಬ ಪರೀಕ್ಷೆಗೆ ತಯಾರಗುವ ವಿದ್ಯಾರ್ಥಿಗಳು – ಇವರೆಲ್ಲರೂ ಅಪರೂಪವಾಗುತ್ತಿರುವ ಈ ‘ಪೆನ್ನು’ಗಳ ಬಗ್ಗೆ ಯೋಚಿಸಲೇಬೇಕು… ಪರೀಕ್ಷೆ ರದ್ದಾಗುತ್ತಾ ಹೋದರೆ ಪೆನ್ನುಗಳ ಸಂತತಿ ಅಳಿವಿನಂಚಿಗೆ ಬಂದು ನಿಲ್ಲುವುದರಲ್ಲಿ ಸಂಶಯವೇ ಇಲ್ಲ…

ಬಾರ್ ಗಳನ್ನು ತೆರೆದು , ಪುಸ್ತಕದಂಗಡಿಗಳನ್ನು ಮುಚ್ಚುವುದು ಕೂಡ ‘ನ್ಯೂ ನಾರ್ಮಲ್’. We can’t stop that too. It is a matter of survival of the Trendy … World prefers what is handy …

‍ಲೇಖಕರು Admin

July 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: