
ಕರ್ನಾಟಕ ಸಾಹಿತ್ಯ ಅಕಾಡೆಮಿಯು ವಿಶೇಷ ಘಟಕ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗಾಗಿ ಮೈಸೂರು ಕಂದಾಯ ವಿಭಾಗಕ್ಕೆ ಸಂಬಂಧಿಸಿದಂತೆ 2015 ಫೆಬ್ರವರಿ 25, 26 ಮತ್ತು 27ರಂದು `ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ ಆವರಣ’ – ಇಲ್ಲಿ ವಸತಿ ಸಹಿತ ಮೂರು ದಿನಗಳ “ವಿಮರ್ಶಾ ಕಮ್ಮಟ” ವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ.
ಮೈಸೂರು ಕಂದಾಯ ವಿಭಾಗಕ್ಕೆ ಸೇರಿದ ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರು – ಜಿಲ್ಲೆಗಳಲ್ಲಿ ವಾಸಿಸುವ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಹಾಕಬೇಕು.
• 20 ರಿಂದ 40ರ ವಯೋಮಿತಿಯಲ್ಲಿರುವವರು ಮಾತ್ರ ಅರ್ಜಿ ಹಾಕಬೇಕು.
• ಆಸಕ್ತ ಅಭ್ಯರ್ಥಿಗಳು ತಮ್ಮ ವಿಮರ್ಶಾ ಲೇಖನವನ್ನಾಗಲಿ ಅಥವಾ ಕೃತಿಯನ್ನಾಗಲಿ ಅರ್ಜಿಯೊಂದಿಗೆ ಲಗತ್ತಿಸಬೇಕು. ಇವು ಪ್ರಕಟಿತ ಅಥವಾ ಅಪ್ರಕಟಿತವಾಗಿರಬಹುದು.
• ಜಾತಿ ಪ್ರಮಾಣಪತ್ರ ಹಾಗೂ ವಯಸ್ಸಿಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ ಅಂಕ ಪಟ್ಟಿಯ ದೃಢೀಕೃತ ಪ್ರತಿಯನ್ನು ಲಗತ್ತಿಸಬೇಕು.
• ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಮೂರು ದಿನಗಳು ಶಿಬಿರದಲ್ಲೆ ವಾಸ್ತವ್ಯ ಮಾಡಬೇಕು.
• ಅರ್ಜಿಯನ್ನೊಳಗೊಂಡ ಲಕೋಟೆಯ ಮೇಲ್ಭಾಗದಲ್ಲಿ ಕಡ್ಡಾಯವಾಗಿ “ವಿ.ಘ.ಯೋ. ವಿಮರ್ಶಾ ಕಮ್ಮಟ” ಎಂದು ನಮೂದಿಸಬೇಕು.
• ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಬಿರದ ಸ್ಥಳಕ್ಕೆ ಬರಲು ಸಾಮಾನ್ಯ ಬಸ್ ದರವನ್ನು ನೀಡಲಾಗುವುದು ಹಾಗೂ 3 ದಿನಗಳೂ ಊಟ, ಉಪಹಾರದ ವ್ಯವಸ್ಥೆ ಮಾಡಲಾಗುವುದು.
• ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್ ಸೈಟ್ ನಿಂದ ಪಡೆದುಕೊಳ್ಳಬಹುದು.
• ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರವರಿ ಎರಡನೇ ವಾರದಲ್ಲಿ ಅಕಾಡೆಮಿಯ ವೆಬ್ ಸೈಟ್ http://karnatakasahithyaacademy.org ನಲ್ಲಿ ಪ್ರಕಟಿಸಲಾಗುವುದು.
• ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೆ ಅಂತಿಮ.
• ಅರ್ಜಿಯನ್ನು ಈ ಕೆಳ ಕಂಡ ವಿಳಾಸಕ್ಕೆ ಕಳುಹಿಸಬೇಕು.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-2-2015
ಡಾ. ಬಾಲಗುರುಮೂರ್ತಿ
ವಿಮರ್ಶಾ ಕಮ್ಮಟದ ನಿರ್ದೇಶಕರು,
ಕೇರಾಫ್/ ಕರ್ನಾಟಕ ಸಾಹಿತ್ಯ ಅಕಾಡೆಮಿ
ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560 002
(080-22211730 / 22106460)

ಕರ್ನಾಟಕ ಸಾಹಿತ್ಯ ಅಕಾಡೆಮಿ
ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
ವಿಮರ್ಶಾ ಕಮ್ಮಟ-ವಿಶೇಷ ಘಟಕ ಯೋಜನೆ
ಮೈಸೂರು ಕಂದಾಯ ವಿಭಾಗ (ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ,
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಗಳು)
ಅ ರ್ಜಿ
1. ಅಭ್ಯರ್ಥಿಯ ಹೆಸರು
2.ವಯಸ್ಸು
(ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಲಗತ್ತಿಸಬೇಕು)
3. ಉದ್ಯೋಗ
4. ಸಂಪರ್ಕ ವಿಳಾಸ;
ಮೊಬೈಲ್ ಸಂಖ್ಯೆ/ ದೂರವಾಣಿ ಸಂಖ್ಯೆ
ಇ-ಮೇಲ್ ವಿಳಾಸ
5. ಜಾತಿ (ಜಾತಿ ಪ್ರಮಾಣಪತ್ರವನ್ನು ಲಗತ್ತಿಸಬೇಕು)
6. ವಿಮರ್ಶಾ ಲೇಖನಗಳು / ಕೃತಿಗಳು
(ಪ್ರಕಟಿತ / ಅಪ್ರಕಟಿತ ಪ್ರತಿ ಲಗತ್ತಿಸಬೇಕು)
7. ಇತರ ಆಸಕ್ತಿಗಳು
ಅಭ್ಯರ್ಥಿಯ ಸಹಿ





0 Comments