‘ಪವರ್ ರಾಣಿಕ’ ನಾಟಕಗಳ ರಾಜಕಾರಣದ ಸುತ್ತಾ…
ಡಿಕ್ಕಿ ಮಾಧವರಾವ್ : ಕೇಳಿದ್ಯಾ ಮುಸುರಿ, ಪೌರಾಣಿಕ ನಾಟಕಗಳು ಮತ್ತೆ ಜನಪ್ರಿಯವಾಗ್ತಿವೆಯಂತೆ! ಕಾರಣವೇನಿರಬಹುದೋ?
ಮುಸುರಿ ಕೃಷ್ಣಮೂರ್ತಿ: ಕಾರಣವೇನಿದೆ ಮಣ್ಣು. ದಿನಬೆಳಗಾದರೆ ಕದನವೇ! ಪಲಿತಾಂಶ: ಸಾಮಾನ್ಯರ ಬದುಕಿನ ಮೇಲೆ ಕಲ್ಲು!
ಕೇಳಿ ರಾಯರೇ, ಶತಕೋಟಿ ರಾಯರುಗಳಿಂದ, ಬರಿ ನಮ್ಮ ದೇಶದಲ್ಲೇ ಯಾಕೆ, ಇಡೀ ವಿಶ್ವದಲ್ಲಿ ನಡೆದದ್ದು, ನಡಿತಿರೋದು ‘ಪವರ್’ರಾಣಿಕ ನಾಟಕಗಳೇ.ಯುಗ ಯುಗಗಳು ಕಳೆದರೂ, ಗಾದಿ ಪುರಾಣ ಮರಳೋದೇ ಪವರ್ ಗಾಗಿ. ಮೊದಲು ಮೈತಲಾಜಿ ಕಲ್ಲು , ನಂತರ ಹಿಸ್ತಾರಿಕಲ್ಲು, ಕಾನ್ಟೆಂಪೋರರಿ ಅನ್ನುವಂತೆ ಇದೀಗ ಎಲ್ಲಾ ಪೊಲಿಟಿ ಕಲ್ಲು. ಇದೇ ಕಲ್ ಚರೇ ‘ಕಲ್ ಆಜ್ ಔರ್ ಕಲ್’ನ ಎಲ್ಲ ಕಪಟ ನಾಟಕ ಸುಸೂತ್ರಧಾರಿಗಳೂ ಪ್ರ್ಯಾಕ್ಟೀಸ್ ಮಾಡ್ತಾ ಬಂದದ್ದು.
ಡಿ.ಮ: ಒಗಟಾಗಿ ಮಾತಾಡಬೇಡ, ಸ್ವಲ್ಪ ಅರ್ಥವಾಗೋ ಹಾಗೆ ಹೇಳಯ್ಯಾ.ಹಿಸ್ಟರಿ ರಿಪೀಟ್ಸ್ ಅನ್ನೋದನ್ನ ಕೇಳಿದ್ದೇನೆ. ಆದರೆ ಮೈಥಾಳಜಿಯೂ ಮರುಕಳಿಸಿದ್ದು ಯಾಕೆ ಅಂತಾ?
ಮು.ಕೃ: ಟೀಕೆ, ವಿಮರ್ಶೆ, ವಿರೋಧಗಳನ್ನು ಸಹಿಸುವ ಕಾಲ ಮುಗೀತಾ ಇದೆ, ಅನ್ನೋ ಸೂಚನೆ ಎಂಬಂತೆ, ಪರೋಕ್ಷವಾಗಿ ಆಳುವ ವರ್ಗಕ್ಕೆ ಕನ್ನಡಿ ಹಿಡಿವ ಕಸರತ್ತು ಇದು. ನೇರವಾಗಿ ನೀನು ದುಷ್ಟ ಅಂದು ತಲೆದಂಡ ಒಪ್ಪಿಸೋ ಬದಲು, ಭೂಸುತೆಯ ತಂಟೆಗೆ, ಐ ಮೀನ್, ಭೂಹಗರಣ ಮಾಡಬೇಡಾ,ನೋಡಲ್ಲಿ ರಾವಣನ ಗತಿ ಏನಾಯ್ತು! ಕಾನೂನೆಂಬ ಭೀಮನ ಕಬಂಧ ಬಾಹು ಬಲು ಉದ್ದ: ಕೀಚಕನಾದೀಯೇ ಜೋಕೆ? ಹೋದ ಹೋದ ಕಡೆಯೆಲ್ಲಾ ‘ ತಗಲಾಕ್ಕಂದೆ ನಾನು’ ಅಂತಾ ಅರ್ಜುನನ ಹಾಗೆ ಬಹುಪತ್ನಿ ವ್ಯಥಸ್ತನಾಗಬೇಡ. ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಮುಂದುವರಿಯಲು ಈಗ ಉಲ್ಬಣಗೊಂಡಿರುವ ದೃತರಾಷ್ಟ್ರ ಪ್ರೇಮ ಐ ಮೀನ್ ವಂಶಾಡಳಿತ ಸಾಕು. ಹಗಲುರಾತ್ರಿ ದುಡಿವ ಪಕ್ಷಗಳ ಗ್ರ್ಯಾಸ್ಸ್ರೂಟ್ ವರ್ಕರ್ಸ್ ಹುಲ್ಲು ತಿನ್ನಬೇಕೇನು? ದುರ್ಯೋ’ಧನ’ರ ಆಮಿಷಕ್ಕೆ, ಅಥವಾ ಭಯಕ್ಕೆ ಒಳಗಾಗಿ ಇನ್ನೆಷ್ಟು ದಿನ ಗುರುಗಳು, ಆಚಾರ್ಯರು ಬಾಯಿ ಮುಚ್ಚಿ ಸಂವಿಧಾನ ಇತ್ತ ವಾಕ್ ಸ್ವಾತಂತ್ರ್ಯವನ್ನು ಉಪಯೋಗಿಸದೆ ಇರೋದು. ಹಾಗೆ ಮುಲಾಜಿಗೆ ಒಳಗಾದ ಧರ್ಮರಾಯರನ್ತವರು ‘ಅಶ್ವತ್ಥಾಮ ಹತಃ’ ಅಂತಾ ‘ಯುಕ್ತ’ ವಲ್ಲದ್ದನ್ನು ಹೇಳಿ ಲೋಕನನ್ನು ನಂಬಿಸಲು ತೊಡಗುವುದು? ಮುಂದೆ ಬರುವ ಯಾರೋ ಇನ್ನೊಬ್ಬನಿಗಾಗಿ ಸಿಂಹಾಸನವನ್ನು ತಾತ ಕಾಲಿಕವಾಗಿ ಕಾಯ್ದುಕೊಳ್ಳುವ ಭರತ ಭೀಷ್ಮಾವತಾರ. ಕರ್ಣರ ಬಾನ್ಡೆಡ್ ಲೇಬಲ್. ಸಾಯಿಸಲಿಕ್ಕಾಗೆ ಬರುವ ಕುಂತಿಯ ಕಪಟ!ಉತ್ಸಾಹಿ ಯುವಕರಿಗೆ ಅಧಿಕಾರ ವಹಿಸಿಕೊಡಲು ಪುರು ಸೊತ್ತು ಮಾಡಿಕೊಳ್ಳದ ಯಯಾತಿಗಳ ‘ಲಸ್ಟ್ ಫಾರ್ ಪವರ್’. ಈಮಧ್ಯೆ ಆರೋಪಿತ ಕೌರವ ಪಾಂಡವರ ಪಾಳಯದಲ್ಲೇ ಬೀಡುಬಿಟ್ಟು (ಮಿಸ್) ಗೈಡ್ ಮಾಡುವ, ಬಾತ್ಮಿದಾರರು, ಪೋಕ್ ಪರಸನ್ಸ್, ಮಾಹಿತಿ ವಿನಿಮಯ ಮಾಡಿ ಕೊಲ್ಲುವ ಒಳಗಿನ ಶತ್ರುಗಳಾದ
(in foe) ಶಕುನಿ, ಮಂಥರೆಯರು. ಒಟ್ಟಾರೆ ರಾಮಾಯಣ, ಮಹಾಭಾರತಾದಿ ಪವರ್ ರಾಣಿಕ ನಾಟಕಗಳು ಎಂದಿಗಿಂತ ಇಂದೇ ಪ್ರೆಸ್ ತುತ ಅನ್ನುತ್ತೆ, ನಾರುತ್ತಿರುವ ರಾಜಕಾರಣವನ್ನು ಜಾಲಾಕುತ್ತಿರುವ ನಾರದ ಸಕಲ ಮಾಧ್ಯಮ. ಆದರೆ
ಎಲ್ಲವನ್ನು ಸಹಿಸಿಕೊಂಡು ಸುಮ್ಮನಿರುವ ಸಾಮಾನ್ಯಪ್ಪನಿಂದ ಘಟಿಸುವುದು ‘ಕುರುಕ್ಷೆತ್ರ’ವೋ ಇಲ್ಲಾ, ಯಥಾಪ್ರಕಾರ ‘ಕುರಿಕ್ಷೇತ್ರ’ವೋ ಅನ್ನುವುದೇ ಚಿದಂಬರಂ ರಹಸ್ಯ!
ಮತ್ತೆ ಮತ್ತೆ ಬಹು ಪೀಡಿತ!
ರೈತರು ಅಂದರೇ ತರು.ಅರ್ಥಾತ್ ಮರ. ಇವರೋ ಸದಾ (ಪರರ) ಪ್ರಗತಿಪರರು. ಎನಾದರೂ ಬೆಳೆದು ತರು ವ ಇವರನ್ನೇ ಸರ್ಕಾರಗಳು ಶೋಷಣೆಗೊಳಪಡಿಸಿ ತರು ಬಿದ್ದೆ
ತರುಬಿದ್ದು, ಬಡಿದದ್ದೇ ಬಡಿದದ್ದು. ಇವರು ನೆಟ್ಟ ಮರಗಳನ್ನು ಕಡಿದದ್ದೇ ಕಡಿದದ್ದು! s.e.z ಕೊಡಲಿ ಹಿಡಿದು! ಹಾಗಾಗಿ, ಬೇ ಸಾಯದವರ ಬದುಕು ಬಹು ಕಡಿದು; ಅಸಹನೀಯ ಬದುಕು; ಮೈಮುರಿಯ ದುಡಿದೂ!
( s.e.z :- special encroachment zone?)
ಗುಂಡೋಪನಿಷತ್
“ಇನ್ನಿಲ್ಲಿಗೆ ಮತ್ ಬರಬಾರದು.” ಅಂತಾ ಪ್ರತಿ ಬಾರಿಗೂ, ಐ ಮೀನ್ ಬಾರಿಗೆ ಬಂದಾಗಲೆಲ್ಲ ಅಂದುಕೊಂಡರೂ ಗುಂಡಾ, ಬರ್ ಬಾರದು, ಅನ್ನೋ ಆಂತರ್ಯದ ‘ತುಡಿತ’ ನಿಜವಾಗೋದು ಕುಡಿತ ಅತಿಯಾಗಿ ಬರ್ಬಾದ್ ಆದಮೆಲೇ!
end ಗುಟುಕು
ರಾಜಕಾರಣಿಗೆ ಅಧಿಕಾರದ ಕುರ್ಚಿಯೇ ತಾಯಿ ತಂದೆ. ಅದನ್ನು ಕಳಕೊಂಡ ಕೂಡಲೇ ಜನ ‘ ತಬ್ಬಲಿಯು ನೀನಾದೆ ಮಗನೆ’ಅಂತಾ ‘ದೂರ ಸರಿದರು’ ಅಂತಲೇ. ಹೊರಗಿನ ‘ಗೃಹಭಂಗ’ ವಾಗಿ ಒಳಗಿನ ಕಾರಾಗೃಹಸ್ತ ನಾದ ಅಂತಲೇ! ಅಹುದಾದರೆ ಅಹುದೆನ್ನಿಯಪ್ಪ ಇಲವಾದರೆ ಬೈರಪ್ಪ.






ಅರ್ಥವ್ಯಾಪ್ತಿಯನ್ನು ಹೆಚ್ಚಿಸುವಂತೆ ಅಪರೂಪಕ್ಕೆ ಬಳಸುವ ಶ್ಲೇಷೆ,ಪದಚ್ಛೇದಗಳು ಸಾಂದರ್ಭಿಕವಾಗಿ ಮುದಕೊಡುತ್ತವೆ. ಆದರೆ ಅದನ್ನೇ ಶೈಲಿಯನ್ನಾಗಿಸಿ ಎಲ್ಲದ್ದಕ್ಕೂ ಬಳಸಿದರೆ ಬಳಸಿದವರಿಗೆ ಸಂತೋಷ ಕೊಡಬಹುದು. ನನ್ನಂಥವರಿಗೆ ಅಸಹ್ಯ ಹುಟ್ಟಿಸುತ್ತವೆ.ಪದನಾಟ್ಯವಾಗುವ ಬದಲು ಪದಗಳ ದೊಂಬರಾಟವಾಗುತ್ತದೆ.ಅಥವಾ ಅದೂ ಅಗುವುದಿಲ್ಲ.’ಈ ಮಾಸ’ದಲ್ಲಿ ಇಂಥ ಬರಹ ಪ್ರಕಟಗೊಳ್ಳುತ್ತಿದ್ದಾಗಿನಿಂದಲೂ ನನ್ನ ಅನುಭವ ಇದೇ ಆಗಿದೆ.
ಕನ್ನಡದ ಕ೦ಪನ್ನು ಪಸರಿಸುವ ಸದುದ್ದೇಶದಿ೦ದ ಕೆಲವು ಕನ್ನಡದ ಪರಿಚಾರಕರು, ವಾಗ್ಮಿಗಳು, ಸಾಹಿತಿಗಳು ಪ್ರಾರ೦ಭಿಸಿದ ಹರಟೆಯ ರೂಪ ಈಗ ಅಸಹನೀಯ ಹಾಸ್ಯೋತ್ಸವಗಳಾಗಿವೆ. ತಾವುಗಳು ಮೆಟ್ಟಿಲಾಗಿಸಿಕೊ೦ಡ ರ೦ಗವನ್ನು ಬದಿಗೆ ಸರಿಸಿ ಎರವು ಪಡೆದ ಸವಕಲು ಜೋಕುಗಳನ್ನು ತಮ್ಮದೆ೦ದೇ ವಿಜ್ರು೦ಭಿಸುತ್ತಿರುವುದು ವಾಕರಿಕೆ ಹುಟ್ಟಿಸುತ್ತದೆ. ನಗುವಿಗೆ ಬರ ಬ೦ದಿದೆ ಎ೦ಬುದನ್ನೇ ಬ೦ಡವಾಳ ಮಾಡಿಕೊ೦ಡು, ಬಾಯಾರಿದ ಹಾಸ್ಯಪ್ರಿಯರಿಗೆ ಜೀವಜಲ ಅಥವ ಎಳನೀರನ್ನು ಎರೆಯದೆ ಕಲುಷಿತ ಪೇಯವನ್ನು ಎರಚಿ ಗ೦ಟಲನ್ನು ಮತ್ತೂ ಒಣಗಿಸುವ ಸ್ರುಜನಶೀಲವಲ್ಲದ ಇವರ ಈ ಹಾಸ್ಯದ ಪರಿ ರಾಮಯ್ಯ ಹೇಳುವ ಹಾಗೆ ಪರಿಹಾಸ್ಯವೇ ಸರಿ. ಸೂತ್ರಧಾರಿಯೇ ಹಿ೦ದೊಮ್ಮೆ ಸೂಚಿಸಿರುವ ಹಾಗೆ ಇ೦ತಹ ಕೆ.ಬಿ.ದಾಸರುಗಳ ಪ್ರವ್ರುತ್ತಿ ಎ೦ದಿಗೆ ಬದಲಾಗುತ್ತದೆಯೋ …