ನಂದಿನಿ ವಿಶ್ವನಾಥ ಹೆದ್ದುರ್ಗ
ಇಲ್ಲೊಬ್ಬ ಎಳೆಬಾಲೆ
ಬುದ್ಧನನು ಬಟ್ಟೆಯಲಿ ಮುಚ್ಚಿ
ಎದೆಗೊತ್ತಿಕೊಂಡಿದ್ದಾಳೆ.
ಅವನೊಬ್ಬ ಪೋರ.,
ಬುದ್ಧನುದ್ದಕ್ಕೂ ನಿಂತು
ಅವನೆತ್ತರವನೋ
ಇವನುದ್ದವನೋ ಅಳೆಯುತ್ತಿದ್ದಾನೆ.
ಇನ್ನು ಇವನೊಬ್ಬ..
ಅವನ ಅನುಕರಿಸಿ
ಕಣ್ಣುಮುಚ್ಚಿ ನಗುತಿದ್ದಾನೆ.
ಬೆರಳು ಜ್ಞಾನ ಮುದ್ರೆ.
ಇಲ್ಲಾರು ಬುದ್ಧ.?
ಎರಡೂ ಸ್ನಿಗ್ಧ.

ಮೂರು ದಾರಿ ಕೂಡುವಲ್ಲಿ
ಬುದ್ದ ,ಬೆಳಕು ,ಬೋಧಿ
ಎದ್ದ ,ಗೆದ್ದ
ಎಂದೇನೋ ಬೋಧನೆಯಲ್ಲಿದೆ
ಜಗ…ದಗ್ಧ
ಬುದ್ಧ ಹುಣ್ಣಿಮೆಗೆಂದು
ಪದ್ಯವೊಂದನು ಹೊಸೆದು
ನಿರಾಳವಾಗಿದ್ದೇನೆ ನಾನು.
ಸದ್ಯ..!






0 Comments