ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪದಗಳ ಜೊತೆಗೆ ಆಡುತ್ತಿದ್ದೇವೆ, ಪದಗಳ ಅರ್ಥ …?' – ಸೂಫ಼ಿ ಸಾಲು

– ಸುರೇ೦ದ್ರನಾಥ್

(ಹಜ್ರತ್ ಜಹೇನ್ ಶಾಹ್ ತಾಜಿ)

ತಾಜ್-ಉಲ್-ಮುಹಿಬ್ಬೀನ್ ವಲ್ ಮಹ್ಬೂಬೀನ್ ಹಜ್ರತ್ ಬಾ ಬಾ ಮುಹಮ್ಮದ್ ತೌಸೀನ್ ಪೂರ್ಣ ಹೆಸರಾದರೂ ಹಜ್ರತ್ ಜಹೇನ್ ಶಾಹ್ ತಾಜಿ ಫಾರೂಕಿ ಎಂದೇ ಹೆಸರುವಾಸಿ. ೧೯೦೨ ರಿಂದ ೧೯೭೮ರ ನಡುವೆ ಬದುಕಿದ್ದ ಈತ ಈ ಭೂಖಂಡ ಕಂಡ ಅತಿ ದೊಡ್ಡ ಸೂಫಿ ಸಂತರಲ್ಲಿ ಒಬ್ಬ. ಅವನ ಗಜಲ್ ನ ಒಂದು ತುಂಡು ಇಲ್ಲಿದೆ. ಅದರ ಭಾವಾರ್ಥ ಕೊಟ್ಟಿದ್ದೇನೆ, ನನಗೆ ತಿಳಿದ ಮಟ್ಟಿಗೆ.

 

ಮೌಲ ಮೌಲ ಲಾಖ್ ಪುಕಾರೆ ಮೌಲ ಹಾತ್ ನ ಆಯೇ.

ಲಫ್ಜೊನ್ ಸೆ ಹಂ ಖೇಲ್ ರಹೇ ಹೈ, ಮಾ ನ ಹಾತ್ ನ ಆಯೆ.

ದೇವರು ದೇವರು ಅಂತ ಸಾವಿರ ಸಾರಿ ಕರೆದರೂ ದೇವರು ಸಿಗಲೊಲ್ಲ.

ಪದಗಳ ಜೊತೆಗೆ ಆಡುತ್ತಿದ್ದೇವೆ, ಪದಗಳ ಅರ್ಥ ಸಿಗಲೊಲ್ಲದು.

 

ಜೋ ಪಾನಿ ಕೆ ನಾಮ್ ಕೋ ಪಾನಿ ಜಾನೆ, ವೋ ನಾದಾನಿ ಹೈ

ಪಾನಿ ಪಾನಿ ರಟತೆ ರಟತೆ ಪ್ಯಾಸಾ ಹಿ ಮರ್ ಜಾಯೆ

ನೀರನ್ನು ಕೇವಲ ನೀರು ಎಂದೇ ತಿಳಿದವನು ಮೂರ್ಖ

ನೀರು ನೀರು ಜಪ ಮಾಡುತ್ತಲೇ ಬಾಯಾರಿಕೆಯಿಂದ ಸತ್ತ.

 

ಶೋಲಾ ಶೋಲಾ ರಟತೆ ರಟತೆ, ಲಬ್ ಪೆ ಆನ್ಚ್ ನ ಆಯೇ

ಇಕ್ ಚಿಂಗಾರಿ ಲಬ್ ಪರ್ ರಖಲೋ, ಲಬ್ ಫೌರನ್ ಜಲ ಜಾಯೆ.

ಬೆಂಕಿಯ ಜಪ ಮಾಡಿದರೆ ನಾಲಗೆಗೆ ಬೆಂಕಿಯ ಅರಿವಾಗುವುದಿಲ್ಲ

ಒಂದು ಕಿಡಿ ನಾಲಗೆಯ ಮೇಲೆ ಇಟ್ಟು ನೋಡು, ನಾಲಗೆ ತಕ್ಷಣ ಸುಡುತ್ತದೆ.

 

 

   ]]>

‍ಲೇಖಕರು G

2 June, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading