ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಿಟ್ಲರ್ ಬಿಡಿಸಿದ ಚಿತ್ರ

ಗಿರಿಕಾ

ಕತ್ತರಿಸಬೇಕು ಚೌಕಟ್ಟು
ಮೊಳೆ ತೆಗೆದು ಗೋಂದು ಬಿಡಿಸಿ
ಬಗೆದಿಡಬೇಕು
ಗಾಜು ಬಂದರೆ ಸರಿ
ಇಲ್ಲವಾದರೆ ಚೂರು

ಸಿಗುತ್ತಲ್ಲ ಆಗ
ಅದಕ್ಕಾಗೇ ಕಾದದ್ದು
ಹಲ್ಲು ಕಚ್ಚಿ ಹೊಂಚಿದ್ದು
ಸೋತದ್ದು

ಮೀನು ಮಂಜುಗಡ್ಡೆ
ಚೆರ್ರಿ ಚೂಪೆಲೆಯ ಮರ
ಹೆಣೆದ ತುಟಿಗಳು
ಗೋಡೆಯನ್ನೂ ಹಾಯುವ ಜನ

ಇಲ್ಲವಲ್ಲಾ ಇಲ್ಲಿ
ಕಾಣೆಯಾದವರು
ಕತ್ತಿಲ್ಲದವರು
ಸೀದವರು

ಮೊದಲು ಆ ಮೀನು
ಕಳೆಯಲೇಬೇಕು ಅದರ ಬಣ್ಣ
ಕಿತ್ತರೆ ಗೆರೆ
ಸೋರುವುದು ಮಂಜುಗಡ್ದೆ

ಕಟ್ಟ ಕಡೆಗೆ ಉಳಿದದ್ದು
ಅವನ ಸಹಿ ಮಾತ್ರ.

‍ಲೇಖಕರು avadhi

2 June, 2007

2 Comments

  1. G N Mohan

    beautiful design and headlines keep it up.

  2. Meti Mallikarjun

    avadhi is wonderful I like it

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading