ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ…

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಇದು ರಾಜ್ಯದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತ ಸದಸ್ಯರನ್ನು ಹೊಂದಿರುವ ಪತ್ರಕರ್ತರ ಕ್ರಿಯಾಶೀಲ ಸಂಘಟನೆಯಾಗಿದೆ.

ಸಂಘದ 36 ನೇ ರಾಜ್ಯ ಸಮ್ಮೇಳನವು ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೀಡು ಕಲಬುರಗಿಯಲ್ಲಿ 2022 ಜನವರಿ 3 ಮತ್ತು 4 ರಂದು ನಡೆಯಲಿದೆ. ಜನವರಿ 4 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ತಿಳಿಸಿದ್ದಾರೆ..

2019 ನೇ ಸಾಲಿನ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಪ್ರಶಸ್ತಿಯನ್ನು ಪ್ರಕಟ ಮಾಡಲಾಗಿದ್ದು ಅದರ ವಿವರ ಇಂತಿದೆ.

ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗಳು :

ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ:
ಹುಣಸವಾಡಿ ರಾಜನ್
ಸಂಪಾದಕರು
ಸಂಯುಕ್ತ ಕರ್ನಾಟಕ

ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ:
ದಿನೇಶ್ ಅಮೀನ್ ಮಟ್ಟು
ಹಿರಿಯ ಪತ್ರಕರ್ತರು

ಪಿ.ರಾಮಯ್ಯ ಪ್ರಶಸ್ತಿ:
ವಿಶ್ವೇಶ್ವರ ಭಟ್
ಸಂಪಾದಕರು, ವಿಶ್ವವಾಣಿ

ಮಹದೇವ ಪ್ರಕಾಶ್ ಪ್ರಶಸ್ತಿ:
ಎಂ.ಕೆ.ಭಾಸ್ಕರರಾವ್
ಹಿರಿಯ ಪತ್ರಕರ್ತರು

ಮಾ.ರಾಮಮೂರ್ತಿ ಪ್ರಶಸ್ತಿ:
(ನಾಡು ನುಡಿಗೆ ಸೇವೆ)
ವೆಂಕಟೇಶ್, ಸಂಪಾದಕರು, ಈ ಸಂಜೆ
ಅಚ್ಯುತ ಚೇವಾರ್, ಕಾಸರಗೋಡು

ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ :
ಜಗದೀಶ್ ಬುರ್ಲಬಡ್ಡಿ, ವಿಜಯವಾಣಿ, ಹುಬ್ಬಳ್ಳಿ.
ವಿನಾಯಕಭಟ್ ಮೂರೂರು, ಹೊಸ ದಿಗಂತ

ಅಭಿಮಾನಿ ಪ್ರಕಾಶನ ಪ್ರಶಸ್ತಿ:
ಟಿ.ವಿ.ಶಿವಾನಂದನ್, ಕಲಬುರ್ಗಿ
ವಿ.ಎನ್.ತಾಳಿಕೋಟಿ, ಕೊಪ್ಪಳ

ಕೆ.ಎನ್.ಸುಬ್ರಹ್ಮಣ್ಯ ಪ್ರಶಸ್ತಿ:
ಅಶ್ವಿನಿ ಶ್ರೀಪಾದ್, ಇಂಡಿಯನ್ ಎಕ್ಸ್‌ಪ್ರೆಸ್
ಹೃಷಿಕೇಶ್ ಬಹದ್ದೂರ್ ದೇಸಾಯಿ, ದಿ ಹಿಂದು, ಬೆಳಗಾವಿ

ನಾಡಪ್ರಭು ಕೆಂಪೇಗೌಡ ಪ್ರಶಸ್ತಿ:
ಬಿ.ಪಿ.ಮಲ್ಲಪ್ಪ, ಸಂಜೆವಾಣಿ
ಶ್ರೀನಿವಾಸ ಹಳಕಟ್ಟಿ, ರಾಜ್ ಟಿವಿ.
ಎಂ.ಸಿ.ಶೋಭಾ, ಸುವರ್ಣ ಟಿವಿ

ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ:

ಗುಡಿಪುರ ನಂದೀಶ್, ಚಾಮರಾಜನಗರ
ಬಾ.ಮ. ಬಸವರಾಜಯ್ಯ, ದಾವಣಗೆರೆ.

ಬದರಿನಾಥ ಹೊಂಬಾಳೆ ಪ್ರಶಸ್ತಿ:

ಕೌಶಲ್ಯ ದತ್ತಾತ್ರೇಯ ಫಳನಾಕರ್, ವಿಜಯಪುರ
ಎಸ್.ಬಿ. ಜೋಷಿ, ಕಲಬುರ್ಗಿ

ರಾಜಶೇಖರ ಕೋಟಿ ಪ್ರಶಸ್ತಿ:
ನಾಗಣ್ಣ, ಸಂಪಾದಕರು, ಪ್ರಜಾ ಪ್ರಗತಿ, ತುಮಕೂರು.
ಜಿ. ರಾಜೇಂದ್ರ, ಪ್ರಧಾನ ಸಂಪಾದಕರು, ಶಕ್ತಿ ಪತ್ರಿಕೆ, ಕೊಡಗು.

ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿ:
ವಿಜಯ ಭರಮಸಾಗರ,
ಕೆ.ಬಿ. ಪಂಕಜ

ಅತ್ಯುತ್ತಮ ಮುಖಪುಟ ಪ್ರಶಸ್ತಿ :
ವಿಜಯ ಕರ್ನಾಟಕ

‍ಲೇಖಕರು Admin

25 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading