ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪತ್ರಕರ್ತರು ಯಾಕೆ ಎಲ್ಲೆಲ್ಲೂ ಟಾರ್ಗೆಟ್ ಆಗ್ತಾ ಇದ್ದಾರೆ?

ಮೀಡಿಯಾ ಟಾರ್ಗೆಟ್!

ಶಂಶೀರ್ ಬುಡೋಳಿ, ಎಂ ಸಿ ಜೆ


ಪತ್ರಕರ್ತರು ಸಮಾಜದ ರಕ್ಷಕರು.. ದಿನವಿಡೀ ಸುದ್ದಿಯ ಬೆನ್ನತ್ತಿ ಹೋಗುವ ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಸಮಾಜಕ್ಕಾಗಿ ಕೆಲ್ಸ ಮಾಡುವ ಪತ್ರಕರ್ತರು ಸಮಾಜ ರಕ್ಷಕರೆಂದೇ ಗುರುತಿಸಿಕೊಂಡವ್ರು. ಆದ್ರೆ ಪತ್ರಕರ್ತರಿಗಿಂದು ಯಾವುದೇ ರಕ್ಷಣೆ ಇಲ್ಲ. ಜಗತ್ತಿನಲ್ಲಿ ಅಲ್ಲಲ್ಲಿ ಪತ್ರಕರ್ತರ ಮೇಲೆ ಹಲ್ಲೆ, ಕೊಲೆ, ಬಂಧನದಂತಹ ಪ್ರಕರಣ ಸಾಕಷ್ಟಾಗಿದೆ. ಸುದ್ದಿಯ ಬೆನ್ನತ್ತಿ ಹೋಗುವ ಪತ್ರಕರ್ತರಿಗಿಂದು ರಕ್ಷಣೆ ಇಲ್ಲದಂತಾಗಿದೆ. ದುರಂತ ಅಂದರೆ ಈ ವರ್ಷದ ಆರಂಭದಲ್ಲಿ ವಿಶ್ವದಲ್ಲಿ ಇರಾಕ್ ನ ಓರ್ವ ಪತ್ರಕರ್ತನನ್ನ ಕೊಲೆ ಮಾಡಲಾಗಿದೆ. ಅಲ್ಲದೇ ಮೂರು ಮಂದಿ ಮಾಧ್ಯಮ ಸಹಾಯಕರನ್ನ ಕೊಲೆ ಮಾಡಲಾಗಿದೆ. ಈ ಜೊತೆಗೆ 3 ಮಂದಿ ಸಿಟಿಜನ್ ಪತ್ರಕರ್ತರನ್ನ ಕೊಲೆ ಮಾಡಲಾಗಿದೆ. 176 ಮಂದಿಪತ್ರಕರ್ತರು, 14 ಮಂದಿ ಮಾಧ್ಯಮ ಸಹಾಯಕರು ಹಾಗೂ 164 ಮಂದಿ ಸಿಟಿಜನ್ ಪತ್ರಕರ್ತರನ್ನ ಈಗಾಗಲೇ ಜೈಲಿಗೆ ಕಳುಹಿಸಲಾಗಿದೆ. ಇದು ಈ ವರ್ಷ ಆರಂಭದಲ್ಲಾದ ಬೆಳವಣಿಗೆಯಾದರೆ ಇನ್ನು ಕಳೆದ ವರ್ಷ ವಿಶ್ವದಲ್ಲಿ 75 ಪತ್ರಕರ್ತರನ್ನ ಕೊಲೆ ಮಾಡಲಾಗಿದೆ. ಇನ್ನೊಂದು ಅಂಕಿ ಅಂಶ 129 ಪತ್ರಕರ್ತರು ಕಳೆದ ವರ್ಷದಲ್ಲಿ ಕೊಲೆಗೀಡಾಗಿದ್ದಾರೆ ಎಂದು ಹೇಳಿದೆ. ಅದ್ರಲ್ಲಿ 4 ಮಾಧ್ಯಮ ಸಹಾಯಕರ ಕೊಲೆ, 37 ಸಿಟಿಜನ್ ಜರ್ನಲಿಸ್ಟ್ ಕೊಲೆ, 177 ಮಂದಿ ಪತ್ರಕರ್ತರು ಜೈಲಿಗೆ, 14 ಮಾಧ್ಯಮ ಸಹಾಯಕರು ಜೈಲಿಗೆ ಹಾಗೂ 166 ಸಿಟಿಜನ್ಸ್ ಪತ್ರಕರ್ತರು ಜೈಲು ಸೇರಿದ್ದಾರೆ.ವಿಶ್ವವಾರು ಸಂಖ್ಯೆ ಎಷ್ಟು..?ಇನ್ನು ವಿಶ್ವದ ಒಂದೊಂದು ದೇಶದಲ್ಲಿನ ಪತ್ರಕರ್ತರ ಸ್ಥಿತಿಗತಿ ಬಗ್ಗೆ ನೋಡುತ್ತಾ ಹೋದ್ರೆ ಆತಂಕಕಾರಿ ವಿಷ್ಯ ಬಹಿರಂಗವಾಗುತ್ತೆ.

ಅಪಘಾನಿಸ್ತಾನದಲ್ಲಿ 1, ಬ್ರೆಜಿಲ್ನಲ್ಲಿ 5, ಕೊಲಂಬಿಯಾದಲ್ಲಿ1, ಈಜಿಪ್ಟ್ನಲ್ಲಿ 6, ಹೊಂಡೋರಾಸ್ನಲ್ಲಿ 3 ಹಾಗೂ ಭಾರತದಲ್ಲಿ 8 ಮಂದಿ ಪತ್ರಕರ್ತರ ಕೊಲೆಯಾಗಿದೆ. ಇನ್ನು ಇರಾಕ್ನಲ್ಲಿ 10, ಲಿಬಿಯಾದಲ್ಲಿ 1, ಮಾಲಿ ದೇಶದಲ್ಲಿ 2, ಮೆಕ್ಸಿಕೋದಲ್ಲಿ 2  ಪತ್ರಕರ್ತರ ಕೊಲೆ ನಡೆದಿದೆ. ಅಲ್ದೇ ಪಾಕಿಸ್ತಾನದಲ್ಲಿ 7, ಪೆರುಗ್ವೆಯಲ್ಲಿ 1, ಫಿಲಿಪ್ಪೀನ್ಸ್ನಲ್ಲಿ 8 ಮಂದಿ ಪತ್ರಕರ್ತರ ಕೊಲೆ ನಡೆದಿದೆ. ಇನ್ನು ಗ್ವಾಲಿಯೋದಲ್ಲಿ 1, ಸೊಮಾಲಿಯಾದಲ್ಲಿ 7, ಸಿರಿಯಾದಲ್ಲಿ 10 ಮಂದಿ ಪತ್ರಕರ್ತರ ಕೊಲೆಯಾಗಿದೆ. ಪತ್ರಕರ್ತರ ಕೊಲೆ ಸರಣಿ ಇಂದು ನಿನ್ನೆಯ ಕಥೆಯಲ್ಲ. ಕೆಲ ವರ್ಷಗಳ ಹಿಂದೆ ಸತ್ಯವನ್ನ ಮಟ್ಟ ಹಾಕಲು, ಅನ್ಯಾಯದ ವಿರುದ್ಧ ಹೋರಾಡಿದ ಹಾಗೂ ಅಪಾಯಕಾರಿ ಅಸೈನ್ಮೆಂಟ್ಗೆ ಹೋದಾಗ ಹೀಗೆ ನಾನಾ ಕಾರಣಗಳಿಗೆ ಪತ್ರಕರ್ತರ ಕೊಲೆ ನಡೆದಿದೆ.ಇನ್ನೊಂದು ವಿಷ್ಯ ಏನಪ್ಪಾ ಅಂದ್ರೆ ಈ ವರ್ಷದಲ್ಲಿ ವಿಶ್ವದಲ್ಲಿ 211 ಮಂದಿ ಪತ್ರಕರ್ತರು ಜೈಲು ಸೇರಿದ್ದಾರೆ. ಹೀಗಾಗಿ ಈ ವರ್ಷ ಪತ್ರಕರ್ತರ ಪಾಲಿಗೆ ವ್ರೋಸ್ಟ್ ಇಯರ್ ಆಗಿದೆ. ಇನ್ನು 2012ರಲ್ಲಿ 141 ಮಂದಿ, 2011ರಲ್ಲಿ 107, 2010ರಲ್ಲಿ 110, 2009ರಲ್ಲಿ 122 ಮಂದಿ ಪತ್ರಕರ್ತರ ಕೊಲೆ ನಡೆದಿತ್ತು. ಅಲ್ದೇ 2008ರಲ್ಲಿ 91, 2007ರಲ್ಲಿ 115 ಹಾಗೂ 2006ರಲ್ಲಿ 96 ಮಂದಿ ಪತ್ರಕರ್ತರ ಕೊಲೆ ಮಾಡಲಾಗಿತ್ತು. ಪತ್ರಕರ್ತರ ಪಾಲಿಗೆ ಡೆಂಜರಸ್ ದೇಶ ಯಾವುದು..?2009 ರಿಂದ 2013ರವರೆಗಿನ ಪತ್ರಕರ್ತರ ಕೊಲೆ ಪ್ರಕರಣದ ಅಂಕಿ ಅಂಶಗಳನ್ನ ನೋಡಿದ್ರೆ ಪತ್ರಕರ್ತರ ಪಾಲಿಗೆ ಮೋಸ್ಟ್ ಡೆಂಜರಸ್ ದೇಶ ಅಂತೆನಿಸಿದ್ದು ಸಿರಿಯಾ, ಪಿಲಿಪ್ಪೀನ್ಸ್, ಪಾಕಿಸ್ತಾನ, ಇರಾಕ್, ಭಾರತ, ಸೊಮಾಲಿಯಾ, ಈಜಿಪ್ಟ್. ಅಲ್ದೇ ಬ್ರೆಜಿಲ್, ಮೆಕ್ಸಿಕೋ, ಗುವಾಟಿಮಾಲಾ, ಅಪಘಾನಿಸ್ತಾನ, ಕೊಲಂಬಿಯಾ, ಹೊಂಡೂರಾಸ್, ಲಿಬಿಯಾ, ರಶ್ಯಾ ಕೂಡಾ ಮೋಸ್ಟ್ ಡೇಂಜರಸ್ ದೇಶ. ಹೌದು. ಸಿರಿಯಾದಲ್ಲೇ ಕೇವಲ 10 ಪತ್ರಕರ್ತರ ಕೊಲೆ, 12 ಮಂದಿ ಪತ್ರಕರ್ತರು ಜೈಲು ಸೇರಿದ್ದಾರೆ.

ಅಲ್ದೇ 2009ರಿಂದ 2013ರವರೆಗೆ ಪಿಲಿಪ್ಫೀನ್ಸ್ನಲ್ಲಿ 67, ಪಾಕಿಸ್ತಾನದಲ್ಲಿ 59, ಸಿರಿಯಾದಲ್ಲಿ 56, ಮೆಕ್ಸಿಕೋದಲ್ಲಿ 55, ಸೊಮಾಲಿಯಾದಲ್ಲಿ 43, ಇರಾಕ್ನಲ್ಲಿ 40, ಹೊಂಡೊರಾಸ್ನಲಿ 29, ಬ್ರೆಜಿಲ್ನಲ್ಲಿ 28, ಭಾರತದಲ್ಲಿ 20 ಹಾಗೂ ರಶ್ಯಾದಲ್ಲಿ 19 ಪತ್ರಕರ್ತರ ಕೊಲೆಯಾಗಿದೆ.ಹೀಗೆ ಅಂಕಿ-ಅಂಶಗಳನ್ನ ನೋಡುತ್ತಾ ಹೋದ್ರೆ ಕಳೆದ 5 ವರ್ಷಗಳಲ್ಲಿ ವಿಶ್ವಾದ್ಯಂತ 571 ಪತ್ರಕರ್ತರ ಕೊಲೆ ನಡೆದಿದೆ. ವರ್ಷದಿಂದ ವರ್ಷಕ್ಕೆ ಕೊಲೆ, ಹಲ್ಲೆ ಪ್ರಕರಣ ಮತ್ತಷ್ಟು ಜಾಸ್ತಿಯಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಪತ್ರಕರ್ತರು ಅಂದಾಕ್ಷಣ ಅವ್ರಿಗೆ ಸ್ಪೆಷಲ್ ಪ್ರಿಯಾರಿಟಿ ಸಿಗುತ್ತೇನೂ ನಿಜ.. ಆದ್ರೆ ಅವ್ರು ದಿನಾಲೂ ಸುದ್ದಿಯ ಬೆನ್ನತ್ತಿ ಸ್ಪರ್ಧಾತ್ಮಕ ಯುಗದಲ್ಲಿ ಜೀವಿಸೋರು. ಒತ್ತಡದ ಬದುಕಿನ ಜತೆಗೆ ಸಮಾಜದ ಸ್ವಾಸ್ಥ್ಯವನ್ನ ಕಾಪಾಡಬೇಕಾದ ಹೊಣೆಗಾರಿಕೆ ಪತ್ರಕರ್ತರ ಮೇಲಿರುತ್ತೆ.. ಈ ವರ್ಷದಲ್ಲಿ ಭಾರತದಲ್ಲಿ 8 ಮಂದಿ ಪತ್ರಕರ್ತರನ್ನ ಹತ್ಯೆ ಮಾಡಲಾಗಿದೆ.. ಅದ್ರಲ್ಲಿ ಹೆಚ್ಚಿನವ್ರು ಗಲಭೆ, ಗನ್ಮ್ಯಾನ್ಗಳಿಂದ್ಲೇ ಹತ್ಯೆಗೊಳಗಾಗಿದ್ದಾರೆ.ಅದು ಡಿಸೆಂಬರ್ 6. ಹಿಂದಿ ದೈನಿಕ `ದೇಶ್ಬಂಧು’ ಪತ್ರಿಕೆಯ ಪತ್ರಕರ್ತ ಸಾಯಿ ರೆಡ್ಡಿ ಮಾವೋವಾದಿಗಳಿಂದ ಕೊಲೆಯಾಗ್ತಾರೆ. ಈ ಘಟನೆ ನಡೆದಿರೋದು ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ದಕ್ಷಿಣ ಬಾಸ್ತರ್ನಲ್ಲಿ. ರೆಡ್ಡಿ, ಸಲ್ವಾ ಜುಡಂ ವಿರುದ್ಧ ವರದಿ ಮಾಡಿದ್ರು. ಅಲ್ದೇ 2008ರಲ್ಲಿ ರೆಡ್ಡಿ ಬಂಧನವಾಗಿತ್ತು. ಇನ್ನು ಕಳೆದ ಸೆಪ್ಟಂಬರ್ 7ರಂದು ನಡೆದ ಮುಜಾಫರ್ ನಗರ ಕೋಮುಗಲಭೆಯಲ್ಲಿ ಐಬಿಎನ್ 7 ಚಾನೆಲ್ನ ಪತ್ರಕರ್ತ ರಾಜೇಶ್ ವರ್ಮಾ ಕೊಲೆ ನಡೆಯುತ್ತೆ.

ಇದೇ ವೇಳೆ ಮತ್ತೊಬ್ಬ ಫ್ರಿಲಾನ್ಸಿ ಫೋಟೋಗ್ರಾಫರ್ ಇಸ್ರಾಸ್ ಕೊಲೆ ಕೂಡಾ ನಡೆಯುತ್ತೆ.ಇನ್ನು ಕಳೆದ ಆಗಸ್ಟ್ 23ರಂದು ದೈನಿಕ್ ಆಜ್ ದೈನಿಕದ ವರದಿಗಾರ ರಾಕೇಶ್ ಶರ್ಮಾ ಕೊಲೆಗೀಡಾದ್ರು. ಇವ್ರು ಮನೆಯಿಂದ ಹೊರಗೆ ಹೋದಾಗ ಗನ್ಮ್ಯಾನ್ ಓರ್ವ ಯುಪಿಯ ಬಕೆವಾರ್ ಜಿಲ್ಲೆಯಲ್ಲಿ ಇವ್ರನ್ನ ಹತ್ಯೆ ಮಾಡ್ತಾನೆ. ಇನ್ನು ಕಳೆದ ಆಗಸ್ಟ್ 20ರಂದು ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ನರೇಂದ್ರ ದಾಬೋಲ್ಕರ್ರನ್ನ ಪುಣೆಯಲ್ಲಿ ಕೊಲೆ ಮಾಡಲಾಗಿತ್ತು. 60 ವರ್ಷದ ನರೇಂದ್ರರವ್ರು ಬೆಳಿಗ್ಗೆ ವಾಕಿಂಗ್ ಮಾಡುವಾಗ ಇಬ್ಬರು ಗನ್ಮ್ಯಾನ್ ಇವ್ರನ್ನ ಕೊಲೆ ಮಾಡಿದ್ರು.ಇನ್ನು ಕಳೆದ ಮೇ 19ರಂದು ಬೆಂಗಾಳಿ ದೈನಿಕ ದೈನಿಕ್ ಗಾನದೂತ್ನ ಪತ್ರಕರ್ತ ರಂಜೀತ್ ಚೌಧರಿ ಕೊಲೆ ನಡೆಯಿತು. ಅಲ್ದೇ ಇದೇ ಮೇ 19ರಂದು ಇದೇ ದೈನಿಕದ ಮತ್ತೋರ್ವ ಪತ್ರಕರ್ತ ಸುಜೀತ್ ಭಟ್ಟಾಚಾರ್ಯ ಕೊಲೆ ಕೂಡಾ ನಡೆಯಿತು. ಅಲ್ದೇ ಕಳೆದ ಫೆಬ್ರವರಿ 12ರಂದು ಫ್ರಿಲಾನ್ಸ್ ಪತ್ರಕರ್ತ ನೇಮಿಚಂದ್ ಜೈನ್ ಕೊಲೆ ಕೂಡಾ ನಡೆಯಿತು. ಜೈನ್ ಕಳೆದ 20 ವರ್ಷಗಳಿಂದ ಕೆಲ್ಸ ಮಾಡ್ತಿದ್ರು. ಮೂಲತಹ ಛತ್ತೀಸ್ಗಢದ ಈ ಪತ್ರಕರ್ತ ಹಿಂದಿಯ ಹರಿಭೂಮಿ, ನಯಿ ದುನಿಯಾ, ದೈನಿಕ್ ಭಾಸ್ಕರ್ ಪತ್ರಿಕೆಯಲ್ಲಿ ಫ್ರಿಲಾನ್ಸರಾಗಿ ಕಾರ್ಯನಿರ್ವಹಿಸುತ್ತಿದ್ರು. ಇವ್ರ ಶವ ಸುಕ್ಮಾ ಜಿಲ್ಲೆಯ ನಾಮಾ ಗ್ರಾಮದ ಮಾರ್ಕೆಟ್ನಲ್ಲಿ ಪತ್ತೆಯಾದಾಗ ಜನ್ರು ದಂಗಾಗಿ ಹೋಗಿದ್ರು..ಇನ್ನು ವಿಶ್ವದಲ್ಲಿ ನಡೆದ ಪತ್ರಕರ್ತರ ಕೊಲೆ ಪ್ರಕರಣದಲ್ಲಿ ಕೇವಲ ಏಶ್ಯಾದಲ್ಲೇ 24 ಪತ್ರಕರ್ತರ ಕೊಲೆ ನಡೆದಿದೆ. ಅದ್ರಲ್ಲಿ ಭಾರತದಲ್ಲಿ ಎಂಟು ಮಂದಿ ಪತ್ರಕರ್ತರ ಕೊಲೆ ನಡೆದಿದೆ.

ಈ ವರ್ಷದಲ್ಲಿ 826 ಪತ್ರಕರ್ತರ ಮೇಲೆ ಅಟ್ಯಾಕ್ ನಡೆದಿದ್ದು, 2,160 ಪತ್ರಕರ್ತರಿಗೆ ಬೆದರಿಕೆ ಹಾಕಲಾಗಿದೆ.ಅತ್ತ ಪತ್ರಕರ್ತರ ಕೊಲೆ ನಡಿತಾ ಇದ್ರೆ ಇತ್ತ ದೈಹಿಕವಾಗಿ ಪತ್ರಕರ್ತರ ಮೇಲೆ ಹಲ್ಲೆ ಕೂಡಾ ನಡಿತಿದೆ. ಕಳೆದ ಡಿಸೆಂಬರ್ 24ರಂದು ಇರಾಕ್ನ ಸಲಾಹುದ್ದೀನ್ ಟಿವಿ ಚಾನೆಲ್ ಆಫೀಸಿನಲ್ಲಿ ಆತ್ಮಾಹುತಿ ಬಾಂಬ್ ದಾಳಿ ಮಾಡಲಾಯ್ತು. ಪರಿಣಾಮ ಚಾನೆಲ್ನ ಐದು ಪತ್ರಕರ್ತರು ಸಾವಿಗೀಡಾದ್ರು. ಇನ್ನು ಈ ವರ್ಷದಲ್ಲಿ 2,160 ಮಂದಿ ಪತ್ರಕರ್ತರು ಗಾಯಗೊಂಡಿದ್ದಾರೆ. ಹೀಗೆ ಪ್ರತಿವರ್ಷ ವಿಶ್ವದಲ್ಲಿ ನೂರಕ್ಕಿಂತಲೂ ಹೆಚ್ಚಿನ ಪತ್ರಕರ್ತರ ಕೊಲೆ ನಡಿತಾ ಇದೆ. ಹೆಚ್ಚುತ್ತಿರುವ ಟಿವಿ ವಾಹಿನಿ, ಪತ್ರಿಕೆ, ಅಂತರ್ಜಾಲ ತಾಣದ ಸಂಖ್ಯೆಯಂತೆ ಇವತ್ತು ಪತ್ರಕರ್ತರ ಹತ್ಯೆ, ಹಲ್ಲೆ ಪ್ರಕರಣಗಳು ಜಾಸ್ತಿಯಾಗ್ತಿದೆ. ವರದಿಗೆ ಹೋದಾಗ ಕಿಲ್ಲ್ ಆಗುವವರೇ ಹೆಚ್ಚಾಗ್ತಾ ಇದ್ದಾರೆ. ಆದ್ರೆ ಕಾನೂನಾತ್ಮಕವಾಗಿ ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ.. ಒಟ್ಟಾರೆ ಪತ್ರಕರ್ತರ ರಕ್ಷಣೆಯನ್ನ ಅವರೇ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಇನ್ನು ಜಗತ್ತಲ್ಲಿ ಎಷ್ಟೇ ವಿರೋಧಿಗಳಿದ್ರೂ ದಿಟ್ಟತನ ಮೆರೆದು ಸುದ್ದಿಯನ್ನ ಬೆನ್ನಟ್ಟುವ ಪತ್ರಕರ್ತರು ನಮ್ ಜೊತೆಗಿದ್ದಾರೆ. ಸಮಾಜಕ್ಕಾಗಿ ಕೆಲ್ಸ ಮಾಡಬೇಕಾದ ಪತ್ರಕರ್ತ ಯಾವುದೇ ಬೆದರಿಕೆ, ವಿರೋಧಿಗಳಿಗೆ ಹೆದರದೇ ಕೆಲ್ಸ ಮಾಡಿದ್ರೆ ಮಾತ್ರ ಆತನಿಗೆ ಸಮಾಜ ಗೌರವ ನೀಡುತ್ತೆ.

‍ಲೇಖಕರು avadhi

4 February, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading