ಡೈಲಿ ಬುಕ್ : ಡಾ ಕೋ ಚೆನ್ನಬಸಪ್ಪ ಅವರ ’ಭಾರತದಲ್ಲಿ ಕೋಮುದ್ವೇಷ’

ಇದು ಕತೆಯಲ್ಲ; ಕಾದಂಬರಿ ಅಲ್ಲ. ರಾಜ್ಯ ಸಾಮ್ರಾಜ್ಯಗಳ ಇತಿಹಾಸವಲ್ಲ. ಪುಣ್ಯಭೂಮಿ, ಕರ್ಮಭೂಮಿ, ಧರ್ಮಕ್ಷೇತ್ರ… ಎಂಬ ಇತ್ತಯಾದಿ ಪವಿತ್ರ ಹೆಸರುಗಳಿಂದ ಕರೆಯುವ ಈ ಭಾರತದಲ್ಲಿ ಚಾತುರ್ವರ್ಣ ಪದ್ಧತಿ, ಜಾತಿವ್ಯವಸ್ಥೆ, ಮನುಧರ್ಮಶಾಸ್ತ್ರ, ಅಸ್ಪೃಶತೆ ಮುಂತಾದ ಅನಾರೋಗ್ಯಕರ ಆಚರಣೆಗಳ ಅನಾಚಾರ – ಅತ್ಯಾಚಾರ ಯಾವಾಗ, ಯಾಕೆ, ಹೇಗೆ ತಲೆ ಎತ್ತಿದವು ಎಂಬ ವಿಚಾರಗಳನ್ನು ಕುರಿತು ವಿಶ್ಲೇಷಣೆ ಮಾಡುವ ಸಂಶೋಧಾನಾತ್ಮಕ ವಿವರಣೆ ಇದರಲ್ಲಿದೆ. ಅಂದಾಜು ಐದುಸಾವಿರ ವರ್ಷಗಳ ಹಿಂದೆ, – ಅಂದರೆ ಕ್ರಿಸ್ತಪೂರ್ವ ಎರಡೂವರೆ – ಮೂರುಸಾವಿರ ವರ್ಷಗಳ ಹಿಂದೆ, ಈ ದೇಶದ ಸಂಪದ್ಭರಿತ ಪ್ರದೇಶ ಸಿಂಧೂ ಕೊಳ್ಳದಲ್ಲಿದ್ದ ಅಂದಿನ ಜಗತ್ತಿನಲ್ಲಿ ಎಲ್ಲೆಲ್ಲಿಯೂ ಕಾಣದಿದ್ದ ಮಹೆಂಜೋದಾರ – ಹರಪ್ಪನ್ ನಾಗರಿಕತೆ, ಆರ್ಯರ ದಾಳಿಗೆ ತುತ್ತಾಗಿ ಇಲ್ಲಿದ್ದ ಸುಸಂಸ್ಕೃತಿ ಸರ್ವನಾಶವಾಗಿ, ಇಲ್ಲಿ ಚಾತುರ್ವರ್ಣ ಪದ್ದತಿ ಜಾತಿ ಆಧಾರಿತ ಸಮಾಜ ವ್ಯವಸ್ಥೆ ಸ್ಥಾಪನೆ ಆಗಿ ಮತಾಂಧತೆ ಕೋಮುದ್ವೇಷದ ಅತ್ಯುಗ್ರ ಪಿಡುಗು ಇಲ್ಲಿ ಬೇರು ಬಿಟ್ಟ ದುರಂತ ಇತಿಹಾಸದ ರುಪರೇಷೆ ಇದರಲ್ಲಿ ಅಡಕವಾಗಿದೆ.

ಕೋಮುದ್ವೇಷದ ಆ ವಿಷಬೀಜ ಗಾಂಧಿ ಕಗ್ಗೊಲೆ, ಬಾಬ್ರಿ ಮಸೀದಿ ಧ್ವಂಸದಲ್ಲಿ, ಗುಜರಾತಿನಲ್ಲಿ ಗೋದ್ರೋತ್ತರ ಕೋಮುದ್ವೇಷ, ಮಾಲೆಗಾಂವ್ ಸ್ಫೋಟದ ಹಿಂದುತ್ವ ಉಗ್ರವಾದಿಗಳ ರುದ್ರನರ್ತನದ ದುರಂತ ದಾರುಣ ಕತೆ ಇದರಲ್ಲಿದೆ. ಅದನ್ನು ನೀವೇ ಓದಿ, ನಿಮದೇ ತೀಮರ್ಾನಕ್ಕೆ ಬಂದು ಕೋಮುದ್ವೇಷ ನಿಮರ್ೂಲನೆಗೆ ನೀವು ಹೇಗೆ ನೆರವಾಗಬಹುದೆಂಬುದನ್ನು ನಿರ್ಧರಿಸಿರಿ.
 

‍ಲೇಖಕರು avadhi

February 4, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Mahesh

    ಕೆಲವು ಜೀನ್ ಆಧಾರಿತ ಸಿದ್ಧಾಂತದ ಪ್ರಕಾರ ಭಾರತದಲ್ಲಿ ಈಗಾಗಲೇ ಇದ್ದ ವರ್ಣ ವ್ಯವಸ್ಥೆಯಲ್ಲಿ ಹೊರಗಿನಿಂದ ಬಂದ ಆರ್ಯರು ತಮ್ಮನ್ನು ತಾವು ಮೇಲ್ವರ್ಗದವರೆಂದು ಪ್ರತಿಷ್ಠಾಪಿಸಿಕೊಂಡರು ಎಂದಿದೆ. ತಮ್ಮನ್ನು ತಾವು ಆರ್ಯರೆಂದು ಅನಾದಿ ಕಾಲದಿಂದ ಕರೆದುಕೊಳ್ಳುವ ಇರಾನ್ ದೇಶದವರಲ್ಲಿ, ಈಗ ಅಥವಾ ಪ್ರಾಚೀನ ಕಾಲದಲ್ಲೂ ವರ್ಣ ವ್ಯವಸ್ಥೆ ಇತ್ತೆಂಬುದುರ ಬಗ್ಗೆ ಉಲ್ಲೇಖವಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: