‘ಪಂಪಾ’ ತೀರದಿಂದ ಡಿಜಿಟಲ್ ಅಂಗಳಕ್ಕೆ..

PAMPA [ಪೀಪಲ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಅಂಡ್ ಮೋರ್] ಆಯೋಜನೆಯಲ್ಲಿ ನಡೆಯುವ SIWE – South India Writers ensemble ಸಾಹಿತ್ಯ ಉತ್ಸವ 2020; ಕೇರಳದ ಚೆಂಗನೂರಿನಲ್ಲಿ ಪ್ರತಿ ವರ್ಷ ಜುಲೈ 24, 25 ಮತ್ತು 26 ರಂದು ನಡೆಯುವ ಸಾಹಿತ್ಯ ಹಬ್ಬ.

ಈ ಬಾರಿ ಕೋವಿಡ್ 19 ಸಾಂಕ್ರಾಮಿಕದ ಕಾರಣದಿಂದ online ಜಾಲತಾಣಗಳಲ್ಲಿ ನಡೆಯುತ್ತಿದೆ.

ಕನ್ನಡದ ಕವಿ ಮಮತಾ ಸಾಗರ್ ನಿರ್ವಹಣೆಯಲ್ಲಿ ನಡೆಯುತ್ತಿರುವ ಈ ವರ್ಷದ ಎಂಟನೇ ಆವೃತ್ತಿಯ ಸಾಹಿತ್ಯ ಹಬ್ಬ ಜಗತ್ತಿನ ಹಲವು ಪ್ರತಿಭಾವಂತ ಸಾಹಿತಿಗಳು, ಸಂಗೀತಗಾರರು, ಕಲಾವಿದರನ್ನು ಒಟ್ಟಿಗೆ ತರುತ್ತಿದೆ. ಚೆಂಗನೂರಿನಲ್ಲಿ ನೆಲೆಸಿದ ಕವಿ ಕನಕ ಹಾ ಮಾ ಮತ್ತು ವಿಷ್ಣುನಾದ್ ಈ ಸಾಹಿತ್ಯ ಹಬ್ಬದ ನಿರ್ದೇಶಕರು.

ಈ ಸಾಹಿತ್ಯ ಉತ್ಸವಕ್ಕೆ ಕಾವ್ಯಸಂಜೆ ಟ್ರಸ್ಟ್ ಮತ್ತು ‘ಯುವರ್ ಹೋಪ್ ಈಸ್ ರಿಮೇನಿಂಗ್’ ಸಂಸ್ಥೆಗಳ ಸಹಯೋಗವಿದೆ.

ನಾಡಿನ ಹೆಮ್ಮೆಯ ಸೂಫಿ ಗಾಯಕ ಮೀರ್ ಮುಕ್ತಿಯಾರ್ ಅಲಿ ಸಾಹಿತ್ಯ ಹಬ್ಬವನ್ನು ಉದ್ಘಾಟನೆ ಮಾಡಲಿದ್ದಾರೆ.

ಜಗತ್ತಿನ ಹಲವು ಭಾಷೆಯ ಕವಿಗಳು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ‘ಕಾವ್ಯಸಂಜೆ’ ಬಹುಭಾಷಾ ಪ್ರಸ್ತುತಿಯ ಮೂರು ಗೋಷ್ಠಿಗಳಿವೆ.

ಅಂತಾರಾಷ್ಟ್ರೀಯ ಆವೃತ್ತಿಯಲ್ಲಿ ಇಟಲಿ ದೇಶದ ಆಂತೆ ಸ್ಟೆನ್, ಬಾಂಗ್ಲಾದೇಶದ ಅಮೀನುರ್ ರೆಹಮಾನ್, ಅರ್ಮೇನಿಯ ದೇಶದ ಅಲಿರೇಝ ಅಬಿಜ್ ಮುಂತಾದವರು ಭಾಗವಹಿಸಿದರೆ, ‘ಕಾವ್ಯಸಂಜೆಯ ಎರಡನೇ ಗೋಷ್ಠಿಯಲ್ಲಿ ತಮಿಳು ಭಾಷೆಯಿಂದ ಸಲ್ಮಾ ರಜತಿ, ಮಲಯಾಳಂ ಭಾಷೆಯ ಅನಿತಾ ತಂಪಿ, ಮರಾಠಿಯ ಪ್ರದ್ಯಾ ದಯಾ ಪವಾರ್, ಹಿಂದುಸ್ಥಾನಿಯಲ್ಲಿ ಬರೆಯುವ ಶಶಾಂಕ್ ಜೋಹ್ರಿ, ಅನಾಮಿಕಾ, ಪದ್ಮಾವತಿ ರಾವ್, ಕನ್ನಡದ ಕವಿಗಳಾದ ಅನಸೂಯಾ ಕಾಂಬ್ಳೆ, ಚಾಂದ್ ಪಾಷಾ ಇನ್ನಿತರರು ಕಾವ್ಯಪ್ರಸ್ತುತಿ ಮಾಡಲಿದ್ದಾರೆ.

ವಿಮರ್ಶೆ ಕುರಿತ ಗೋಷ್ಠಿಯನ್ನು ಎಂ. ಎಸ್. ಆಶಾದೇವಿ ನಡೆಸಿಕೊಟ್ಟರೆ, ಆತ್ಮಕಥನದ ಕುರಿತಾದ ಗೋಷ್ಠಿಯನ್ನು ಕವಿ ಪ್ರತಿಭಾ ನಂದಕುಮಾರ್ ನಡೆಸಿಕೊಡಲಿದ್ದಾರೆ.

ಸಾಹಿತಿಗಳಾದ ಲಕ್ಷಣ ಗಾಯಕವಾಡ್, ಮಿತ್ರಾ ವೆಂಕಟರಾಜ್, ಸಂಪೂರ್ಣ ಚಟರ್ಜಿ, ಅನಾಮಿಕಾ, ಯಾಕುಬ್, ಅನಸೂಯಾ ಕಾಂಬ್ಳೆ, ಪ್ರದ್ಯಾ ದಯಾ ಪವಾರ್, ಲೂನಾ ಮತ್ತು ಅಡ್ರಿಯಾನ್, ಬೆಟ್ಟಿ ಗಿಲ್ಮೊರ್, ವಾಸು ದೀಕ್ಷಿತ್, ಬಿಂದುಮಾಲಿನಿ ನಾರಾಯಣಸ್ವಾಮಿ, ಯಕ್ಷಗಾನ ಕಲಾವಿದೆ ಕೃತಿ, ಮಾರ್ಕ್ ಗ್ವಿನ್ ಜೋನ್ಸ್ ಸೈಕಿಕ್ ಬ್ರೆಡ್ ಸಂಗೀತ ತಂಡ ಮತ್ತು ರಫಿ ಖ್ವಾಜಿ ಸಾಬ್  ಈ ಸಾಹಿತ್ಯ ಹಬ್ಬದ ಪ್ರಮುಖ ಆಕರ್ಷಣೆ. ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಏಕವ್ಯಕ್ತಿ ನಾಟಕ ಪ್ರಸ್ತುತಿ ಇರಲಿದ್ದು ಭಾರತಿ ಬಿ.ವಿ ಅನುವಾದಿಸಿದ ಕಮಲಾದಾಸ್ ಪದ್ಯಗಳನ್ನು ಸಂಚಾರಿ ರಂಗತಂಡದ ಮಂಗಳಾ ಎನ್ ಪ್ರಸ್ತುತಪಡಿಸಲಿದ್ದಾರೆ.

ಈ ಸಾಹಿತ್ಯ ಹಬ್ಬವನ್ನು  SIWE – South India Writers ensemble ಫೇಸ್ಬುಕ್ ಪೇಜ್ ನಲ್ಲಿ ವೀಕ್ಷಿಸಬಹುದು.

‍ಲೇಖಕರು nalike

July 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: