ನ್ಯಾನೋ ಕಥೆಗಳು

ಶಿವಾನಂದ್ ಕರೂರ್ ಮಠ್
ಕರುಳ ಸಂಬಂಧ
ಇನ್ನೆಂದೂ ನನಗೆ ಮುಖ ತೋರಿಸಬೇಡ ಎಂದು ತನ್ನ ಆಸೆಗಳ ಮೂಟೆ ಮಣ್ಣು ಪಾಲುಮಾಡಿದ ಮಗನಿಗೆ ಬೈದ ತಂದೆಯೊಬ್ಬ ಸಂಜೆ ಕೇರಿ ಕೇರಿಯನ್ನು ಬಿಡದೆ ತಡ ರಾತ್ರಿಯಾದರೂ ಮನೆಗೆ ಬರದ ಮಗನಿಗೆ ಹುಡುಕಾಟ ನೆಡೆಸುತ್ತಿದ್ದ ಇದಲ್ಲವೇ ಕರುಳ ಸಂಬಂಧ.
ಮುಗ್ಧ ಪ್ರೀತಿ

ಇನ್ನೆಂದೂ ನನಗೆ ಮುಖ ತೋರಿಸಬೇಡ ನನ್ನ ಪಾಲಿಗೆ ನೀನು ಸತ್ತಂತೆ ಎಂದು ಚಿಕ್ಕ ಚಿಕ್ಕ ಮುನಿಸಿಗೆ ಅವನ ಪ್ರೀತಿಯನ್ನು ಧಿಕ್ಕರಿಸಿ ಹೋದಳು. ತಂದೆ ನೋಡಿದ ಹುಡುಗನೊಂದಿಗೆ ಮದುವೆ ಆಗಿ ಅಪ್ಪ ಅಮ್ಮನಿಗೆ ಒಳ್ಳೆ ಮಗಳಾಗಬೇಕು ಎಂದು ನಿರ್ಧಾರ ಮಾಡಿದಳು. ಅದರಂತೆ ಅವಳು ಓದು ಮುಗಿಸಿ ದೊಡ್ಡ ಕಂಪನಿಯಲ್ಲಿ ಕೈ ತುಂಬಾ ಸಂಬಳದ ಕೆಲಸಕ್ಕೆ ಸೇರಿಕೊಂಡಳು. ಹಲವು ವರ್ಷಗಳ ನಂತರ ಅವರ ಅಪ್ಪ ಆಕೆಯೊಂದಿಗೆ ಮದುವೆಯ ಕುರಿತು ಪ್ರಸ್ತಾಪಿಸಿದ. ಆಗ ಹಿಂದೆ ಬಿಟ್ಟು ಬಂದ ಮುಗ್ಧ ಪ್ರೀತಿಯನ್ನು ನೆನೆದು ಕಣ್ಣು ತೇವವಾಗಿಸಿಕೊಂಡಳು. ಮರುಕ್ಷಣವೇ ಏನೂ ಆಗಿಲ್ಲವೆಂಬಂತೆ ಮದುವೆಗೆ ಸಮ್ಮತಿಸಿದಳು, ಅಂತೆಯೇ ಮರುದಿನ ಅಪ್ಪನ ಗೆಳೆಯನ ಮಗ  ನೋಡಲು ಬರುವ ಸುದ್ದಿ ತಿಳಿಯುತ್ತಲೆ ಕೊಂಚ ಬೇಸರದಲ್ಲಿಯೇ ಚೆಂದವಾಗಿ ಮೇಕಪ್ ಮಾಡಿಕೊಂಡಳು. ಹುಡುಗ ಮತ್ತು ಆತನ ಮನೆಯವರು ಬಂದರೆಂದು ಆಕೆಗೆ ಟೀ ತರಲು ಆಕೆಯ ಅಪ್ಪ ಹೇಳಿದರು. ಟೀ ಹಿಡಿದು ಬಂದವಳಿಗೆ ಆಶ್ಚರ್ಯ ಕಾದಿತ್ತು…. ಬಿಟ್ಟು ಬಂದ ಮುಗ್ಧ ಪ್ರೀತಿಯೇ ಮನೆಗೆ ಬಂದಿತ್ತು.
ಹರ ಮುನಿದರೇನು ಗುರು ಇಲ್ಲವೇ
ಇನ್ನೆಂದೂ ನನಗೆ ಮುಖ ತೋರಿಸಬೇಡ ಎಂದು ಶಿಕ್ಷಕರೊಬ್ಬರು ತಪ್ಪು ಮಾಡಿದ ವಿದ್ಯಾರ್ಥಿಗೆ ಬೆತ್ತದಲ್ಲಿ ದಂಡಿಸುತ್ತಲೇ ಕೋಪದಿಂದ ಬೈದರು, ಆಗ ಆ ವಿದ್ಯಾರ್ಥಿಗೆ ತನ್ನ ತಪ್ಪಿನ ಅರಿವಾಗಿ ಗುರುಗಳ ಬಳಿಯಲ್ಲಿಯೇ ನಿಂತು ಬಿಕ್ಕಿ ಬಿಕ್ಕಿ ಅಳತೊಡಗಿದ. ಕೊನೆಗೆ ಗುರುಗಳು ಅವನ ಕಣ್ಣೀರ ಕಂಡು ಮನಕರಗಿ ಮತ್ತೆ ತಪ್ಪು ಮಾಡಬೇಡ ಎಂದು ತಿಳಿ ಹೇಳಿ ಅವನೊಂದಿಗೆ ಎಂದಿನಂತೆ ಬೆರೆತರು. ಇದನ್ನು ತರಗತಿಯ ಕಿಟಕಿಯಲ್ಲಿ ನೋಡುತ್ತಾ ನಿಂತ ವೃದ್ಧನೋರ್ವ ಮನದಲ್ಲಿ ‘ಹರ ಮುನಿದರು ಗುರು ಕಾಯುವ’ನೆಂಬ ಮಾತು ಸತ್ಯವಾಯಿತು ಎಂದು ತನ್ನ ಮನೆ ಕಡೆ ಹೆಜ್ಜೆ ಹಾಕಿದ.

‍ಲೇಖಕರು AdminS

August 15, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Parameshwarappa Kudari

    ಕರೂರ್ ಮಠ ಸರ್, ನಿಮ್ಮ ನ್ಯಾನೋ ಕಥೆಗಳು ನನ್ನ ಮನಕಲಕಿದವು.ಇಷ್ಟವಾದ ಕತೆಗಳು
    # ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

    ಪ್ರತಿಕ್ರಿಯೆ
    • ಶಿವಾನಂದ್ ಕರೂರ್ ಮಠ್

      ಧನ್ಯವಾದಗಳು ಪರಮೇಶ್ವರಪ್ಪ ಸಾರ್…. ಮತ್ತೆ ಸಿಗೋಣ ರೋಚಕ ಹಾಗೂ ನೈಜ ಕಥೆಗಳೊಂದಿಗೆ…..

      ಪ್ರತಿಕ್ರಿಯೆ
    • ಶಿವಾನಂದ್ ಕರೂರ್ ಮಠ್

      ಧನ್ಯವಾದಗಳು ಮೇಡಮ್

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: