ನನ್ನ ಅಜ್ಜನ ಹೊಲ
ಕು ಸ ಮಧುಸೂದನ್

ಒಂಟಿಯಾಗಿ
ಹೆಗಲಲಿ ನೇಗಿಲ ಎಳೆದು
ಅಜ್ಜಿ ಬಿತ್ತಿದ ರಾಗಿಗೆ
ಸಗ್ಗಣಿ ಗೊಬ್ಬರ ಹಾಕಿ
ಖಂಡುಗಗಟ್ಟಲೇ
ರಾಗಿ ಬೆಳೆದ
ಅಜ್ಜನ ಹೊಲದ ಮೇಲಿವತ್ತು
ಚತುಷ್ಕೋನ ರಸ್ತೆ
ರಾರಾಜಿಸುತ್ತಿದೆ
ಸಮಾದಿಯೊಳಗಲ್ಲಿ
ಆರಾಮಾಗಿ ಮಲಗಿರುವ
ಅವನ ಎದೆಯ ಮೆಲೆ
ಅನಿಲ ಟ್ಯಾಂಕರ್ಗಳು
ಅಡ್ಡಾಡುತಿವೆ
ನೋವಾಗುತ್ತಿರುವುದು ಮಾತ್ರ
ನನಗೆ!






ಚೆನ್ನಾಗಿದೆ.
nice..