ಜೇಡನ ಸ್ವಗತ
ಸಂಗೀತ ರವಿರಾಜ್

ಬದುಕು ಸುಮ್ಮನೆ ಅಲ್ಲ
ನೇಯಬೇಕು; ತದನಂತರ
ನೋಯಬೇಕು!
ಬಲೆ ತೆಗೆಯುವ ನಾರಿಗೇನು ಗೊತ್ತು
ನನ್ನ ಕಲೆಯ ಜಾಣತನ?
ಆಕೆ ತೆಗೆಯುವ ರಭಸದಲ್ಲಿ
ಬಲೆಯಲ್ಲಿ ಸಿಲುಕಿದ
ನನ್ನ ಆಹಾರದ ಜೀವವುಳಿಯುತ್ತದೆ!
ಆದರೆ ನಾನು ದಡಬಡನೆ
ಓಡುತ್ತೇನೆ ಜೀವಭಯದಿಂದ…
ಬದುಕು ಅದಲು ಬದಲಾಗುವುದೆಂದರೆ ಹೀಗೆ
ನಮಗೆ ತಿಳಿಯದ ವಿಧಿಯ ಹಾಗೆ!
ನಿಮ್ಮ ಗೋಡೆಯ ತುಂಬಾ
ನನ್ನ ಬಲೆಯ ಹಾಕಿ
ಗಲೀಜು ಮಾಡುವ ಉಮೇದು ಎನಗಿಲ್ಲ
ಎಳೆ ಎಳೆಯ ದಾರದಂತಹ ನಾರನ್ನು
ಚಂದದಲಿ ಚಕ್ರವ್ಯೂಹ ಮಾಡಿ
ಹೊಂಚು ಹಾಕುತ್ತೇನೆ ನಾನು
ಕುಶಲತೆಯ ಖುಷಿಯಲ್ಲಿ
ಇದು ನನ್ನ ಹಸಿವು!
ದೇಹವ ತೇಯ್ದು
ಬಲು ತಾದ್ಯಾತ್ಮ್ಯಕತೆಯಲ್ಲಿ ನೇಯ್ದು
ತಯಾರಿಸಿದ ಮನೆಯ ಆಯುಷ್ಯ ಅಲ್ಪ
ಆದರು ಛಲಬಿಡದ ತ್ರಿವಿಕ್ರಮನಂತೆ
ಮತ್ತೆ ಮತ್ತೆ ಕಟ್ಟ್ತುತ್ತೇನೆ
ನನ್ನ ಮನೆಯೆಂಬ ಕಲೆಯ ಬಲೆ
ಮೇಜು, ಕುಚರ್ಿ, ಮಂಚ ಎಲ್ಲೆಡೆಯ
ಮೂಲೆ ಮೂಲೆಯಲ್ಲು ನನ್ನ ಕರಾಮತ್ತು
ಬೇಕಿದೆ ನನಗೆ ಈ ದಿನದ ತುತ್ತು
ನನ್ನ ಜಾಣ್ಮೆಯ ಕುಸುರಿಯ ನೋಡಿ
ಬೆರಗಾಗಿ
ಬಲೆ ತೆಗೆಯಬಾರದೆಂಬ
ಮಜರ್ಿಗೆ ಬಿದ್ದವರು ಯಾರು ಒಬ್ಬರಿಲ್ಲ
ನೋಡಿ ನನ್ನ ದುರಾದೃಷ್ಟ್ತ!
ಬದುಕು ಸುಮ್ಮನೆ ಅಲ್ಲ
ನೇಯಬೇಕು: ತದನಂತರ
ನೋಯಬೇಕು!






ತುಂಬಾ ಚೆನ್ನಾಗಿದೆ, ಸಂಗೀತಾರವರೆ-ಪದ್ಯ.
ಪದ್ಯ ಚೆನ್ನಾಗಿದೆ, ಶೀರ್ಷಿಕೆ ಸಾಲು ಸುಂದರ.
Howdu.! Baduku summane alla. Olledide kavithe.. sangeetha. Abhinandane
nice
Excellent poem
ನೇಯುವ ಕಾಯಕದ ನಿತ್ಯತೆ, ನೋಯುವ ನಿಯತಿಯ ವೈನೋದಿಕತೆ!! ಛಂದದ ಪದ್ಯ.
ಕವಿತೆ ಚೆನ್ನಾಗಿದೆ