ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆಲದಲ್ಲಿ ಹೊಳೆದ ನಕ್ಷತ್ರ..

ನೆಲದ ನಕ್ಷತ್ರ
ಜಿ ಪಿ ಬಸವರಾಜು

ಮರಗಿಡಗಳ ರೆಂಬೆಕೊಂಬೆಗಳ ಜೀಕಿ ತಂಗಾಳಿ ತೀಡುತ್ತ
ಗುಡ್ಡ ಏರಿದರು ಮಕ್ಕಳು; ಸೂರ್ಯ ಮರೆಯಾದ ಬಣ್ಣ
ಚೆಲ್ಲಿ ಬಾನತುಂಬ; ಕೇಕೆ ಹಾಕುತ್ತ ಮಕ್ಕಳು ಬಣ್ಣಗಳ
ಕರಗಿಸಿದರು; ಭಾರವಾಯಿತು ಗಾಳಿ ಮೋಡಗಳು ಸಂತೆ
ನೆರೆದು, ಕೂಗಿದರು ಮಕ್ಕಳು ಗಂಟಲೆತ್ತಿ, ಕತ್ತಲಿಳಿಯಿತು
ಮಕ್ಕಳನು ತಬ್ಬಿ

ಎಷ್ಟೊಂದು ಕಳ್ಳರು ಅವರ ಹಿಂದೆ ಪೊಲೀಸರು; ಕತ್ತಲ
ಪರದೆಯ ಸರಿಸಿದರೆ ಸಿಕ್ಕಿಬಿದ್ದರು ಕಳ್ಳರು; ಹಿಗ್ಗಿ ಮಕ್ಕಳು
ಚುಕ್ಕೆಗಳ ಹಾಗೆ ಕಣ್ಣು ಮಿಟುಕಿಸಿ, ಗುಡ್ಡಬೆಟ್ಟ ಊರು ಕೇರಿ
ಅಣಕಿಸಿ; ನುಗ್ಗಿಬಂದು ಸುರಿದ ಮಳೆಗೆ ಹಿಗ್ಗಿನಲೆ ಮೈಗೊಟ್ಟು
ತೊಯ್ದುತೊಪ್ಪಯಾಗಿ ಕುಣಿದರೆಲ್ಲ ಭೂಮಿ ನಡುಗುವಂತೆ
ಬಡಬಡಿಸಿ ಮೋಡ ಖಾಲಿಯಾದಂತೆ ನಕ್ಕವು ಚುಕ್ಕೆ ದೂರದಲ್ಲಿ
ಇಲ್ಲಿ ನೆಲದಲ್ಲಿ ಹೊಳೆದ ನಕ್ಷತ್ರ ಬೆಳಗಿದವು ಲೋಕ ತುಂಬಿ

‍ಲೇಖಕರು Admin

7 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading