ಬಿಟ್ಟು ಹೋದ ನೆನಪೂ…
ಕೊಟ್ಟು ಹೋದ ನಾಟಕವೂ…
ನಾನು ರಂಗಾಯಣದ ಕಲಾವಿದೆ.ನನ್ನ ಜೀವನ ಸಂಗಾತಿ ಬಸವರಾಜ ಕೊಡಗೆ ಕೂಡ ರಂಗಾಯಣದ ಕಲಾವಿದರಾಗಿಯೇ ಇದ್ದರು. 2002ರಲ್ಲಿ ತೀರ ಅಚಾನಕ್ಕಾಗಿ ಕೊಡಗೆ ನಮ್ಮೆಲ್ಲರನ್ನು ಬಿಟ್ಟು ಹೋದರು.ಆ ನೋವನ್ನು,ಆಘಾತವನ್ನು ನುಂಗಿಕೊಳ್ಳುವುದಕ್ಕಾಗಿಯೇ ನಾನು ಪ್ರತಿ ವರ್ಷ ಕೊಡಗೆ ನೆನಪಿನಲ್ಲಿ ನಾಟಕ ಮಾಡುತ್ತಾ ಹೋದೆ. ಕಲಾವಿದೆಯಾದ ನಾನು ಬೇರೆನು ಮಾಡಲು ಸಾಧ್ಯ.
2004 ಚಿದಂಬರರಾವ್ ಜಂಬೆ ಅವರು ರಂಗಾಯಣದ ನಿರ್ದೇಶಕರಾಗಿ ಬಂದರು.ಅವರು ನನ್ನ ಗುರುಗಳು ಹೌದು. ಈ ಸಲಿಗೆಯನ್ನೇ ಬಳಸಿ, ನನಗೊಂದು ಏಕವ್ಯಕ್ತಿ ನಾಟಕ ನಿರ್ದೇಶಿಸಿ ಕೊಡಿ ಎಂದು ಕೇಳಿಕೊಂಡೆ. ಅವರು ಕುಶಿಯಿಂದಲೇ ಒಪ್ಪಿಕೊಂಡರು.ಅದರ ಫಲವೇ “ವಾನಪ್ರಸ್ಥ”. ಈ ನಾಟಕವನ್ನು ನಾನು ಪ್ರದರ್ಶಿಸಿದ್ದು ಕೊಡಗೆ ನೆನಪಿನ ದಿನವೇ. ಜಂಬೆ ನನಗೆ ನೆರವಾದರು. ನನ್ನ ಕಣ್ಣೀರು ತೊಡೆಯಲು ಸಹಾಯ ಹಸ್ತ ಚಾಚಿದರು.ವಿಪರ್ಯಾಸ ಎಂದರೆ ಈಗ ನಾನು ಜಂಬೆ ನೆನಪಿನಲ್ಲಿಯೇ ಈ ನಾಟಕವನ್ನು ಪ್ರದರ್ಶಿಸುತ್ತಿರುವುದು. ಈಗ ಕೊಡಗೆ ಮಾತ್ರವಲ್ಲ,ಜಂಬೆ ಕೂಡ ಕೇವಲ ನೆನಪಾಗಿ ನನ್ನ ಎದೆಯಲ್ಲಿ ಉಳಿದಿದ್ದಾರೆ. ಇಬ್ಬರ ನೆನಪೆಂದರೆ ಎಷ್ಟೊಂದು ಭಾರ. ಒಬ್ಬರು ಗುರುಗಳು; ಇನ್ನೊಬ್ಬರು ಸಂಗಾತಿ.







0 Comments