ಮುಕುಂದಾ ಬೃಂದಾ
ಘಳಿಗೆಗಳುರುಳುತಿವೆ
ಪ್ರತಿಘಳಿಗೆ
ತರಗೆಲೆಗಳಂತೆ
ಬರಿದು ಮಾಡುತಿವೆ
ಬಡಬಡನೆ
ರೆಂಬೆಕೊಂಬೆಗಳಂತೆ
ಕಳಚಿ ಕೊಂಡಿಗಳನ್ನೆಲ್ಲ
ಉರುಳಿವೆ
ಹಕ್ಕಿಯ ಪುಕ್ಕದಂತೆ

ಹತ್ತು ಹಲವು ಬಣ್ಣಗಳ
ಚಿತ್ತಾರವೆತ್ತು
ಪತ್ತಲ ಜರಿಬುಟ್ಟಾದಂತೆ
ಘಳಿಗೆಗಳಿಗೆ ನೆನಪುಗಳ
ಮೆರವಣಿಗೆ
ದಿಬ್ಬಣಕೆ ಹೊರಟಂತೆ
ದಿನದಿನಗಳುರುಳೆ
ಕಾಡಿಹವು
ಬಿಗಿ ಹಿಡಿದ ಉಸಿರಂತೆ..






0 Comments