ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆನಪಾಗುತಿರುವೆ ಈ ಮನಸಿಗೆ ನೀನಿನ್ನು…

ಸೌಜನ್ಯ ನಾಯಕ

ಅದೆಷ್ಟೋ ವರ್ಷಗಳು ಸರಿದಿದೆ
ನೀ ನನ್ನನು ತೊರೆದು ಗೆಳೆಯ
ಆದರೂ ಹೊತ್ತಲ್ಲದ ಹೊತ್ತಲ್ಲಿ
ನಿನ್ನ ನೆನಪ ಹೊತ್ತು ತರುವುದು ಹೃದಯ

ಅದೇನು ಮೋಡಿ ಮಾಡಿ ತೊರೆದೆಯೋ
ಅರೆಗಳಿಗೆಯೂ ಅಗಲಿರಲಾರದಂತೆ ನಾ ನಿನ್ನ
ಮಾಡುವ ಪ್ರತಿ ಕೆಲಸವ ಕದಡಲು
ನೆನಪಾಗುವ ಆ ನಿನ್ನ ನೆನಪೆ ಸಾಕಿನ್ನ

ಬಂದೊಮ್ಮೆ ನೋಡು
ಕಲೆಗಾರ್ತಿಯಾದ ನನ್ನ
ಕುಂಚದಲ್ಲರಳಿದ ಚಿತ್ರವ
ಬೇಡವೆಂದರೂ ಒಡೆದ ಮನಸು
ಪದೇ ಪದೇ ಚಿತ್ರಿಸುವುದು
ನಿನ್ನದೆ ಆ ನಗು ಮೊಗವ

ನಗು ಹೊತ್ತ ಆ ನಿನ್ನ ಮೊಗವು
ನನ್ನ ತೊರೆದವನ ನೆನಪಿಸುತಿಲ್ಲ
ಆ ಕಾರಣಕ್ಕೆ ಇರಬೇಕು
ಪದೆ ಪದೆ ಜೊಡಣೆಯಾಗುತಿದೆ
ಹೃದಯದಲ್ಲಿ ಒಡೆದ ಕನಸುಗಳೆಲ್ಲ

ಪ್ರೀತಿಯ ಆರಂಭದ ದಿನಗಳಷ್ಟೇ
ಮನಸಲ್ಲಿ ಮನೆ ಮಾಡಿರುವ
ಕಾರಣಕೋ ಏನೋ
ಹೆಚ್ಚೇ ಕಾಳಜಿ ವಹಿಸಿದವನಂತೆ
ನೆನಪಾಗುತಿರುವೆ ಈ ಮನಸಿಗೆ ನೀನಿನ್ನು…

‍ಲೇಖಕರು Avadhi

2 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading