ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನೂರೆಂಟು ಪಿಸುಮಾತು….’ – ಸೌಮ್ಯ ಕವಿತೆ

– ಸೌಮ್ಯಾ ಕೆ ಆರ್

ಗುಬ್ಬಚ್ಚಿಯ ಮರಿಗಳಂತೆ
ಸದಾ ಒಳಗೊಳಗೆ
ಚಿಲಿಪಿಲಿಗುಟ್ಟುವ ಪಿಸುಮಾತುಗಳು
ಒಂದಲ್ಲ ಎರಡಲ್ಲ ನೂರೆಂಟು…
ಅವೆಲ್ಲವೂ ಮನದಾಳದಿ
ಆರ್ಭಟಿಸಿ, ಭೋರ್ಗರೆಯುತ್ತಿವೆ
ನಿನಗಾಗಿ, ನೀ ಬರುವ ದಾರಿಗಾಗಿ

ಅಸಹಾಯಕತೆ ಅಡಗಿ ಕುಳಿತಿದೆ
ನಿನ್ನ ಎದೆಯುಸಿರ ಏರಿಳಿತದ ಸದ್ದು
ಕದ್ದು ಕೇಳಿಸಿಕೊಳ್ಳಲು ಆಗದೆ
ಮನ ಪರಿತಪಿಸುತ್ತಿದೆ
ಇನಿಯನ ಬರುವಿಕೆ ಕಾದು ಕಾದು
 
ನೀ ಬರುವ ದಾರಿಯಲ್ಲಿ
ಪದೇಪದೆ ಇಣುಕಿ ನೋಡುತ್ತಿದೆ ಮನ
ಬಂದು ಎದೆಯಪ್ಪಿ,
ಪಪ್ಪಿ ಕೊಡುವ ಹೊತ್ತಿಗಾಗಿ
ಉಸಿರು ಬಗಿ ಹಿಡಿದು ಕುಳಿತಿದೆ ಹೃದಯ
 
ಮನಸಾರೆ ಮನದಾಳದ ಮಾತು
ಹರವಬೇಕಿದೆ ರಾಶಿರಾಶಿಯಾಗಿ
ನನಗಾಗಿ ತುಸು ಸಮಯ ನೀಡು…
ನಿನ್ನೆದುರು ಸಾಗರ ಸೇರುವ ನದಿಯಾಗಬೇಕಿದೆ
ಬೇಗ ಬಾ ನನ್ನಿನಿಯ
ಮಿಡಿವ ಮನವ ಕಾಯೋ ನೀನಿದ್ದು ಸನಿಹ

‍ಲೇಖಕರು G

10 September, 2014

5 Comments

  1. D.Ravivarma

    ಮನಸಾರೆ ಮನದಾಳದ ಮಾತು
    ಹರವಬೇಕಿದೆ ರಾಶಿರಾಶಿಯಾಗಿ
    ನನಗಾಗಿ ತುಸು ಸಮಯ ನೀಡು…
    ನಿನ್ನೆದುರು ಸಾಗರ ಸೇರುವ ನದಿಯಾಗಬೇಕಿದೆ
    ಬೇಗ ಬಾ ನನ್ನಿನಿಯ
    ಮಿಡಿವ ಮನವ ಕಾಯೋ ನೀನಿದ್ದು ಸನಿಹ
    manamuttuva manatattuva kaavya…

  2. dharmendra

    ಗುಬ್ಬಚ್ಚಿಯ ಮರಿಗಳಂತೆ
    ಸದಾ ಒಳಗೊಳಗೆ
    ಚಿಲಿಪಿಲಿಗುಟ್ಟುವ ಪಿಸುಮಾತುಗಳು
    ಒಂದಲ್ಲ ಎರಡಲ್ಲ ನೂರೆಂಟು…this is good

  3. Nagaraj kamble

    Nice one..

  4. mmshaik

    nice..very nice..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading