ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂರುಲ್ಲಾ ತ್ಯಾಮಗೊಂಡ್ಲು ಹೊಸ ಕವಿತೆ – ಹಿಜಾಬ್….

ನೂರುಲ್ಲಾ ತ್ಯಾಮಗೊಂಡ್ಲು

ಹಿಜಾಬ್ ಗೆ ಅರ್ಥವೊಂದೇ;
ಆದರೆ ಹಲವು ಬಣ್ಣ, ವಿಧ, ಶೈಲಿ

ಇಲ್ಲಿ ಎಲ್ಲಕ್ಕೂ ಪೃಥಕ್ಕರಣ
ಬುರ್ಖಾ, ಹಿಜಾಬ್, ನಖಾಬ್
ಆದರೂ ಲಜ್ಜೆಯ ಮಾತು

ಬುರ್ಖಾ – ಹೆಣ್ಣು
ಹಿಜಾಬ್ -ಹೆಣ್ಣು
ನಖಾಬ್-ಹೆಣ್ಣು
ಇವು ಹೆಣ್ಣಿಗಷ್ಟೇ ಸಾಂಕೇತಿಕವೇ ?
ಒಂದು ಇದ್ದು ಮತ್ತೊಂದು ಇಲ್ಲದಿರೆ ?
ಏನೇನೂ ಇಲ್ಲ

ಒಮ್ಮೆ ಮಾರ್ಕೆಟಿನ ಲಾಲ್ ಬಿಲ್ಡಿಂಗ್ ನ
ನಾಲ್ಕು ರಸ್ತೆಕೂಡುವಲ್ಲಿ ನಾನು ನನ್ನಾಕೆ
ಪಾನಿಪುರಿ ಶೇವ್ ಪುರಿ ತಿಂದು
ಹಿಜಾಬ್ ಕೊಳ್ಳಲು ತೆರಳಿದೆವು

ಸಮೀಪದ ಮಾರವಾಡಿ ಅಂಗಡಿ
ತಲೆ ತುಂಬ ಸೆರಗು ಹೊದ್ದ ಅಂಗಡಿಯವಳು
ನನ್ನಾಕೆಯನ್ನ ನೋಡಿ ಕಿಸಕ್ಕನೆ ನಕ್ಕಳು
ಇವಳು ದಿಗ್ಭ್ರಾಂತಳಾಗಿ
ಮುಖಗವುಸು ತಲೆಮೇಲಿಂದ ಇಳಿ ಬಿಟ್ಟಳು
ಆಗವಳು
ಗವುಸು ಹಾಕಿಲ್ಲ ಅಂತ ಅಲ್ಲ
ತುಟಿ ಮೇಲೆ ಗಜ್ಜರಿ ತಗುಲಿದೆ ಎಂದಳು ನಯವಾಗಿ

ಮುಖಗವುಸು ಎತ್ತಿ ಮುಖ ತೀಡಿ
ಥ್ಯಾಂಕ್ಸ್ ಎಂದಳು ನನ್ನಾಕೆ
ಮತ್ತೆ ಎಂದಳು
ನೀವು ಪರ್ದ ಇರುತ್ತೀರೆ
ಆಗವಳು ಎಂದಳು ಹ್ಞಾ its a traditional and fashionable way
ಔರತ್ ಕು ಸಜಾನಾ ಹೈ
ಇಸ್ ಮೆ ಮತಲಬ್ ನಿಕಾಲ್ ನ ಘಲತ್ ಹೈ…

ಕೌನ್ ಸಾ ಚಾಯಿಯೇ
ಇದು ಸ್ಟೋನ್ ನ ಮೊಡೆಸ್ಟ್ ಫ್ಯಾಶನ್…
ಕಸುರಿಯ ಹಿಜಾಬ್ ಸ್ವಲ್ಪ ದುಬಾರಿ ಎಂದಳು
ನನ್ನಾಕೆ ಅದನ್ನೇ ತೆಗೆದಳು
ಮತ್ತೆ ನುಡಿದಳು

ಹೆಂಗಸರ ಸ್ವಾತಂತ್ರ್ಯ ಯಾರು ಪರಭಾರೆ ಮಾಡಲಾಗದು
ಎಸ್… ಥ್ಯಾಂಕ್ಸ್
ಇಬ್ಬರ ಮುಖದಲ್ಲು ನಗೆಯರಳಿದವು

‍ಲೇಖಕರು Admin

26 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading