ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂರುಲ್ಲಾ ತ್ಯಾಮಗೊಂಡ್ಲು ಹೊಸ ಕವಿತೆ

ಫಕ್ ಮೈ ಡ್ರೀಮ್ ವಿಥ್ ಯುವರ್ ಸ್ಪೀಕ್

ನೂರುಲ್ಲಾ ತ್ಯಾಮಗೊಂಡ್ಲು 

ಬೊಗಳೆ ಬಾಯಿಯವನ ಮಾತುಗಳು
ಮೊಳೆ ಹೊಡೆದ ಬಿರುಕು ಗೋಡೆಗಳಲಿ
ಕೇಳಿಸಿಕೊಳ್ಳಲಿಕ್ಕೆ ಆಗುತ್ತಿಲ್ಲ ಗೆಳೆಯ

ನಮ್ಮ ನಸೀಬಿನ ದಿನಗಳನ್ನು
ಲೂಟಿ ಮಾಡಿದವನು
ಇನ್ನು ಏನೋ ಹೇಳಬೇಕೆಂದಿದ್ದಾನೆ

ಬಸವ, ಪುಟ್ಟಪ್ಪ, ಇಕ್ಬಾಲರ
ಕವಿತೆ ಓದಿದವನ ಕಣ್ಗಳಲಿ ದೇಶದ ನಸೀಬು ಬದಲು ಮಾಡುವ
ಪೆಟ್ರಿಯಾರ್ಕ್ ಗಳನು ಕಾಣುವ ಹಳಲಿಕೆ
ಇರುಳು ಕರಾಳ ಕೆಂಡದಲಿ ಬೆಂದು ಹೋಗುತಿದೆ

ಈಗ ಈ ನೆಲದಲಿ ತೆನೆ ಪೈರುಗಳು
ಚಿಗುರೊಡೆಯುವುದು ಅನುಮಾನ ?

ಬದುಕಿನ ಅಗ್ನಿ ರೇಖೆಗಳಲಿ
ನೆರಳು ಉರಿದು ಹೋಗುತ್ತಿದೆ

ರೈತನ ಎದೆ ಮೇಲೆ ಕೆಂಡ ಸುರಿಯುವ
ಕಬಂಧ ಬಾಹುಗಳು
ಹಸಿದವನ ಕೊರಳಲಿ ಹುಲಿಯ ಹೆಬ್ಬೆರಳು

ಎದೆಯೊಳಗಿನ ತೀವ್ರ ದಾಹ ತಣಿಸಲು
ಈಗ ಮೋಡವು ಹೆಪ್ಪುಗಟ್ಟುವುದಿಲ್ಲ ಬಿಡು ಬಿಡು

ತಟ್ಟಿ ಬಾಗಿಲ ಮೇಲಿನ ಅಶ್ಲೀಲ ವಾಕ್ಯ
ಟಾಯ್ಲೆಟ್ ಗೋಡೆ ಬರಹಕ್ಕಿಂತ ಅಸಹ್ಯವಾಗಿದೆ ನೋಡು
ಫಕ್ ಮೈ ಡ್ರೀಮ್ ವಿಥ್ ಯುವರ್ ಸ್ಪೀಕ್

‍ಲೇಖಕರು Avadhi

2 March, 2021

2 Comments

  1. ಸಚಿನ್‌ಕುಮಾರ ಹಿರೇಮಠ

    ಈಗ ಈ ನೆಲದಲಿ ತೆನೆ ಪೈರುಗಳು
    ಚಿಗುರೊಡೆಯುವುದು ಅನುಮಾನ ?

    ಬದುಕಿನ ಅಗ್ನಿ ರೇಖೆಗಳಲಿ
    ನೆರಳು ಉರಿದು ಹೋಗುತ್ತಿದೆ

    ತುಂಬಾ ಇಷ್ಟವಾಯಿತು ಸರ್..

  2. ನೂರುಲ್ಲಾ ತ್ಯಾಮಗೊಂಡ್ಲು

    ಧನ್ಯವಾದಗಳು ಹಿರೇಮಠ ಸರ್…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading