ಮೊನ್ನೆ ಹಿರಿಯ ಗೆಳೆಯ,ಕವಿ,ನಾಟಕಕಾರ,…… .ಮುಖ್ಯವಾಗಿ ಸಹೃದಯಿ ಶ್ರೀ ಗೋಪಾಲ ವಾಜಪೇಯಿ ಮನೆಗೆ ಬಂದರು, ತಾವೇ ತರ್ಜುಮೆ ಮಾಡಿದ ಸಂತ ಕಬೀರನ ದೋಹಾಗಳೊಂದಿಗೆ.ಕಬೀರನ ಆಶಯಗಳನ್ನು ಕನ್ನಡಿಗರ ಮನೆ-ಮನಗಳಿಗೆ ರಾಗ ಸಹಿತವಾಗಿ ತಲುಪಿಸುವ ಯೋಜನೆ ಅವರದ್ದು.
ನನಗೊಂದು ಆಲೋಚನೆ ಬಂದಿದೆ.ಈ ಧ್ವನಿ ಸುರುಳಿಯಲ್ಲಿ ನಮ್ಮ ಫೇಸ್ಬುಕ್ ನ ಎಲ್ಲ ಸ್ನೇಹಿತ -ಸ್ನೇಹಿತೆಯರು ಯಾಕೆ ಹಾಡಬಾರದು -ರಾಗ ಸಂಯೋಜನೆ ಮಾಡಬಾರದು-ತಲಾ ಒಂದು ದೋಹಾವನ್ನು? ಹಾಡುವುದರಲ್ಲಿ ಆಸಕ್ತಿ ಇರುವವರು,ರಾಗ ಸಂಯೋಜನೆ ಆಸಕ್ತರು ,ತಾವೇ ರಾಗ ಸಂಯೋಜನೆ ಮಾಡಿ ಹಾಡಲು ಆಸ್ಥೆ ಉಳ್ಳವರು-ನನ್ನನ್ನುpadmapani.jodidar@facebook.comನಲ್ಲಿ ಸಂಪರ್ಕಿಸಲು ಕೋರುತ್ತಿದ್ದೇನೆ.
ಸಂಭಾವನೆ? ನಿಮ್ಮ ಕೊಡುಗೆಗೆ ಬೆಲೆ ಕಟ್ಟಲಾದೀತೇ? ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುವೆ. ನೂರಾರು ಕಂಠಗಳಲ್ಲಿ ಕಬೀರ ಕಂಗೊಳಿಸಲಿ
ನೂರಾರು ಕಂಠಗಳಲ್ಲಿ ಕಬೀರ ಕಂಗೊಳಿಸಲಿ
ನಿಮಗೆ ಇವೂ ಇಷ್ಟವಾಗಬಹುದು…





ಸಾರ್ಥಕವಾಗುವಂಥ ಯೋಜನೆ. ಯಶಸ್ವಿಯಾಗಲಿ.
volleya yochane volleya yojane.