ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀ.. ಬರಿನೆನಪು ದಿಗಂತದಿ

bhavya-gowda

ಭವ್ಯ ಗೌಡ

ಸಾಲು ಸಾಲು ದಿನಗಳು

ಕಾಲನಿಂದ ಎರವಲು

ಸಾಲದಾಗಿ ಬೇಡಿದರೂ

ಸಾಲ ಸಿಗದು ಸಾಗಲು.

 

ಮೇಲೆ ಮೌನದಾ ಮುಗಿಲು

ಜೊತೆ ಬರುವ ನಾಲ್ಕು ಹೆಗಲು

ಒಂದು ಹಗಲು ಒಂದು ಇರುಳು

ಒಂದು ನಗು ಒಂದು ಅಳು

 

ಎಲ್ಲ ಸಮವು ಅಂತ್ಯದಿ

ನಿರ್ಲಿಪ್ತ ನಾದ ಭಾವದಿ

ಜೀವದರ್ಥ ತಿಳಿವ ಮುನ್ನ

ನೀ… ಬರಿನೆನಪು ದಿಗಂತದಿ

she1

ಒಡಲಾಗ್ನಿಯಾ ಒಳಗೆ..

 

ಭ್ರಮೆಯೋ?? ಇದು ಬರಹವೋ??

ಕ್ಷಮೆಯೋ??

ಇದು ಕ್ಷಣಿಕವೋ??

ಒಡಲಾಗ್ನಿಯಾ ಒಳಗೆ, ಅತ್ತಿ ಉರಿವಾ ಧಗೆಯು

ಒಂದು ಭಾವದ ಸಡಗರ,

ನೀರವತೆಯ ಪಂಜರ!!

 

ನಿಲ್ಲು, ನೀ ನಿಲ್ಲು..

ಕೊಲ್ಲುವ ಮುನ್ನ,ಒಂಟಿತನದಾ ಸರಳು!!

 

ನೀ ಬಾರದ, ಭಾರದ

ಸತ್ಯ ಅನೃತವಾಗಲಿ.

ಕೊರಳ ಸೀಳುತಿರುವ ಗರಳ, ನಿತ್ಯ ಅಮೃತವಾಗಲಿ!

 

ಬಂಧದಾ ಬಂಧನವು ಮರಳಿ ಚೇತನವಾಗಲಿ!

‍ಲೇಖಕರು admin

22 October, 2016

2 Comments

  1. Raghavendra

    Nice one !!

    • Bhavya

      Thank u 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading